ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಕಳೆದ ತಿಂಗಳಷ್ಟೇ ನಡೆದ 2018ರ ಆಟೋಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಆಧುನಿಕ ತಂತ್ರಜ್ಞಾನಗಳ ಪ್ರೇರಿತ ಹೋಂಡಾ ಆಕ್ಪಿವಾ 5ಜಿ ಸ್ಕೂಟರ್‌ಗಳು ಭಾರತದಲ್ಲಿ ಇದೀಗ ಭರ್ಜರಿಯಾಗಿ ಬಿಡುಗಡೆಯಾಗಿವೆ.

By Praveen Sannamani

ಕಳೆದ ತಿಂಗಳಷ್ಟೇ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಆಧುನಿಕ ತಂತ್ರಜ್ಞಾನಗಳ ಪ್ರೇರಿತ ಹೋಂಡಾ ಆಕ್ಪಿವಾ 5ಜಿ ಸ್ಕೂಟರ್‌ಗಳು ಭಾರತದಲ್ಲಿ ಇದೀಗ ಭರ್ಜರಿಯಾಗಿ ಬಿಡುಗಡೆಯಾಗಿವೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.52,460 ಬೆಲೆ ಪಡೆದುಕೊಂಡಿದ್ದರೇ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,325ಕ್ಕೆ ಬಿಡುಗಡೆ ಮಾಡಲಾಗಿದೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಸ್ಕೂಟರ್ ಮಾರಾಟ ವಿಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಆಕ್ಟಿವಾ ಸರಣಿಗಳು ಇದೀಗ ಹೊಸ ಹೊಸ ತಂತ್ರಜ್ಞಾನಗಳ ಪ್ರೇರಣೆಯೊಂದಿಗೆ 5ಜಿ ಸ್ಕೂಟರ್ ಆವೃತ್ತಿಗಳು ನಿರ್ಮಾಣವಾಗಿದ್ದು, ವಿನೂತನ ಬಣ್ಣಗಳ ಆಯ್ಕೆ, ಫುಲ್ ಎಲ್ಇಡಿ ಹೆಡ್‌ಲೈಟ್ ಸೇರಿದಂತೆ ಹಲವು ಬದಲಾವಣೆ ಹೊಂದಿವೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಬರೋಬ್ಬರಿ 108 ಕೆಜಿ ತೂಕ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು ಈ ಹಿಂದಿನ 4ಜಿ ಆವೃತ್ತಿ ಮಾದರಿಯಲ್ಲೇ 1,761 ಎಂಎಂ ಉದ್ದ, 710 ಎಂಎಂ, 1,149 ಎಂಎಂ ಅಗಲವಾಗಿದ್ದು, 1,238 ಎಂಎಂ ವೀಲ್ಹ್ ಬೇಸ್ ಮತ್ತು 153 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ 5 ಪ್ರಮುಖ ಬಣ್ಣಗಳಲ್ಲಿ ಲಭ್ಯವಾಗಿವೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಲಭ್ಯವಿರುವ ಹೊಸ ಬಣ್ಣಗಳು

ಒಟ್ಟು 8 ಬಣ್ಣಗಳಲ್ಲಿ ಹೊಸ ಆಕ್ಟಿವಾ 5ಜಿ ಸ್ಕೂಟರ್ ಲಭ್ಯವಿದ್ದು, ಡ್ಯಾಜೆಲ್ ಯೆಲ್ಲೋ ಮೆಟಾಲಿಕ್, ಮೆಜೆಸ್ಟಿಕ್ ಬ್ರೌನ್ ಮೆಟಾಲಿಕ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲ್ಯಾಕ್, ಮ್ಯಾಟೆ ಸೆಲೆನಿ ಸಿಲ್ವರ್, ಪರ್ಲ್ ಅಮೇಜಿಂಗ್ ವೈಟ್, ಪರ್ಲ್ ಸ್ಪ್ಯಾರ್ಟನ್ ರೆಡ್‌ ಮತ್ತು ಟ್ರಾನ್ಸ್ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಸಬಹುದು.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಹೊಸತು ಏನಿದೆ?

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡಿವ್ ಇಂಡಿಕೇಟರ್ ಸಹ ಇದರಲ್ಲಿದೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ಸ್ಕೂಟರಿನಲ್ಲಿರುವ ನಾಲ್ಕು ಬಗೆಯ ಲಾಕಿಂಗ್ ಓಪನರ್ ಸಿಸ್ಟಂಗಳಿಗೆ ಒಂದೇ ಬಗೆಯ ಓಪನರ್ ಸ್ವಿಚ್ ನೀಡಲಾಗಿದ್ದು, ಹಳೆಯ ಮಾದರಿಗಳಿಂದ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಬ್ರೇಕಿಂಗ್ ಸಿಸ್ಟಂ

ಹೊಸ ಆಕ್ಟಿವಾ 5ಜಿ ಸ್ಕೂಟರ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 10 ಇಂಚಿನ ಟ್ಯೂಬ್ ಲೆಸ್ ಟೈರ್ ಜೊತೆ ಹೋಂಡಾ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ(ಸಿಬಿಎಸ್) ಪಡೆದಿರುವುದಲ್ಲದೇ ಎರಡು ಬದಿ ಚಕ್ರಗಳಿಗೂ 130 ಎಂಎಂ ಡ್ರಮ್ ಬ್ರೇಕ್ ಒದಗಿಸಲಾಗಿದೆ.

ಹೋಂಡಾ ಬಹುನೀರಿಕ್ಷಿತ ಆಕ್ಟಿವಾ 5ಜಿ ಸ್ಕೂಟರ್ ಭರ್ಜರಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅತ್ಯುತ್ತಮ ಕಾರ್ಯಕ್ಷಮತೆ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಕ್ಟಿವಾ ಸರಣಿಗಳು ತನ್ನದೇ ಆದ ಬೇಡಿಕೆ ಹೊಂದಿದ್ದು, ಇದೀಗ ಹೊಸ ತಂತ್ರಜ್ಞಾನ ಪ್ರೇರಿತ ಆಕ್ಟಿವಾ 5ಜಿ ಆವೃತ್ತಿಯು ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಸಂಚಲನ ಸೃಷ್ಠಿಸಲಿದೆ.

More from DriveSpark

Article Published On: Wednesday, March 14, 2018, 18:41 [IST]
English summary
Honda Activa 5G Launched In India; Prices Start at Rs 52,460.
Read more on honda scooter activa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+