ಬಿಡುಗಡೆಯಾದ ಹೋಂಡಾ ಆಕ್ಟಿವಾ 5ಜಿ ಬಗ್ಗೆ ನಿಮಗೆಷ್ಟು ಗೊತ್ತು.?
ಹೊಸದಾಗಿ ಬಿಡುಗಡೆಗೊಂಡ ಆಕ್ಟಿವಾ 5ಜಿ ಸ್ಕೂಟರ್ ಖರೀದಿ ಯೋಜನೆಯಲ್ಲಿದ್ದೀರಾ? ಹಾಗಾದರೆ ಹೊಸ ಸ್ಕೂಟರ್ ಖರೀದಿಗೂ ಮುನ್ನ ಆಕ್ಟಿವಾ 5ಜಿ ನಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ ನೋಡಿ.
ಹೊಸದಾಗಿ ಬಿಡುಗಡೆಗೊಂಡ ಆಕ್ಟಿವಾ 5ಜಿ ಸ್ಕೂಟರ್ ಖರೀದಿ ಯೋಜನೆಯಲ್ಲಿದ್ದೀರಾ? ಹಾಗಾದರೆ ಹೊಸ ಸ್ಕೂಟರ್ ಖರೀದಿಗೂ ಮುನ್ನ ಆಕ್ಟಿವಾ 5ಜಿ ನಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು ಇಲ್ಲಿವೆ ನೋಡಿ.

ಪ್ರತಿಷ್ಠಿತ ಹೋಂಡಾ ಮೋಟಾರ್ಸ್ ಸಂಸ್ಥೆಯು ತಮ್ಮ ಹೊಸ ಆಕ್ಟಿವಾ 5ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಆಕ್ಟಿವಾ 4ಜಿ ಸ್ಕೂಟರ್‍ಗಿಂತ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿದೆ. ದೆಹಲಿಯ ಎಕ್ಸ್ ಶೋರಂ ಪ್ರಕಾರ ಇದರ ಬೆಲೆಯು ರೂ. 52,460 ಸಾವಿರಕ್ಕೆ ನಿಗದಿ ಪಡಿಸಲಾಗಿದೆ.

ಎಂಜಿನ್, ಟಾಪ್ ಸ್ಪೀಡ್ ಮತ್ತು ಮೈಲೇಜ್
ಹೊಸ ಆಕ್ಟಿವಾ 5ಜಿ ಸ್ಕೂಟರ್‌ಗಳು 109.19ಸಿಸಿ ಸಿಂಗಲ್ ಸಿಲಿಂಡರ್ ಏಂಜಿನ್ ಪಡೆದಿದ್ದು, 8-ಬಿಹೆಚ್‍ಪಿ ಮತ್ತು 9-ಎನ್ಎಂ ಟಾರ್ಕ್‍ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗೆಯೇ ಈ ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

5.3 ಲೀಟರ್‍ನ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಈ ಸ್ಕೂಟರ್ ಗಂಟೆಗೆ 83 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಪ್ರತೀ ಲೀಟರ್‍ಗೆ 60 ಕಿಲೋಮೀಟರ್ ಮೈಲೇಜ್ ಸಹ ನೀಡಲಿದೆ.

ಸ್ಕೂಟರಿನ ತೂಕ ಮತ್ತು ಟೈರ್ ಮಾಹಿತಿ
ಆಕ್ಟಿವಾ 5ಜಿ ಸ್ಕೂಟರ್‍ಗಳಲ್ಲೇ ಡಿಎಲ್ಎಕ್ಸ್ ವೇರಿಯೆಂಟ್‌ಗಳು 109 ಕಿಲೋಗ್ರಾಂ ಕರ್ಬ್ ವೇಯ್ಟ್ ಅನ್ನು ಪಡೆದುಕೊಂಡಿದ್ದು, 90/100 ಟ್ಯೂಬ್‍ಲೆಸ್ ಟೈರ್ ಅನ್ನು ಎರಡೂ ಕಡೆಗಳಲ್ಲಿ ಪಡೆದಿವೆ.

ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ 130-ಎಂಎಂ ಬ್ರೇಕ್ ಮತ್ತು ಸ್ಕೂಟರಿನ ಬ್ರೇಕಿಂಗ್ ಪರ್ಫಾರ್ಮೆನ್ಸ್ ಅನ್ನು ಅಭಿವೃದ್ದಿಗೊಳಿಸಲು ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಂ) ಅನ್ನು ಪಡೆದುಕೊಂಡಿದೆ.

ಸ್ಕೂಟರಿನ ಆಕ್ಸಿಲರೇಷನ್
5ಜಿ ಸ್ಕೂಟರ್‌ಗಳು ಕೇವಲ 109 ತೂಕ ಪಡೆದಿದ್ದು ಹ್ಯಾಂಡಲಿಂಗ್ ಮಾಡಲು ಬಹು ಸುಲಭ ಎನ್ನಬಹುದಾಗಿದ್ದು, ಇದರ ಆಕ್ಸಿಲರೇಷನ್ 10 ಸೆಕೆಂಡಿಗೆ 0-60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ಹೊಸ ಸ್ಕೂಟರಿನ ವೈಶಿಷ್ಟ್ಯತೆಗಳು
ಆಕ್ಟಿವಾ 4ಜಿ ಸ್ಕೂಟರಿನ ಮುಂದುವರಿದ ಭಾಗವಾದ ಆಕ್ಟಿವಾ 5ಜಿ ಸ್ಕೂಟರ್‌ಗಳು ಎಲ್ಇಡಿ ಹೆಡ್‍ಲೈಟ್, ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 4 ಇನ್ 1 ಲಾಕ್, ಬಾಗ್ ಇಡಿಸಲು ಹೊಸ ಹುಕ್, ಮತ್ತು ಸೀಟ್ ರಿಲೀಸ್ ಬಟನ್ ಹಾಗೆಯೇ ಮೊಬೈಲ್ ಚಾರ್ಜಿಂಗ್ ಪೋರ್ಟ್ ಕೂಡಾ ಅಳವಡಿಸಲಾಗಿದೆ.

ಸ್ಕೂಟರಿನ ಬೆಲೆ ಮತ್ತು ಲಭ್ಯತೆ ಮಾಹಿತಿ
ಹೊಸ ಆಕ್ಟಿವಾ 5ಜಿ ಸ್ಕೂಟರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ಸ್ಟಾಂಡರ್ಡ್ ಮಾದರಿಗಳಿಗೆ ರೂ. 52,460ಕ್ಕೆ ಹಾಗು ಡಿಎಲ್ಎಕ್ಸ್ ಮಾದರಿಗಳಿಗೆ ರೂ. 54,325ಕ್ಕೆ ಅನ್ನು ನಿಗದಿಪಡಿಸಲಾಗಿದೆ.

ಇನ್ನು ಹೊಸ ಸ್ಕೂಟರ್ ಖರೀದಿ ವಿಚಾರಕ್ಕೆ ಬಂದರೆ, ದೇಶದಲ್ಲಿನ ಎಲ್ಲಾ ಹೋಂಡಾ ಡೀಲರ್‍ಗಳ ಬಳಿಯು ಹೊಸ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದ್ದು, ಮೊದಲಿಗೆ ರೂ.1000 ಸಾವಿರ ಹಣವನ್ನು ಅಡ್ವಾನ್ಸ್ ಬುಕ್ಕಿಂಗ್‍ಗೆ ನೀಡಬೇಕಾಗಿದೆ. ಬುಕ್ಕಿಂಗ್ ಆದ ನಂತರದ 25 ದಿನಗಳೊಳಗೆ ಸ್ಕೂಟರ್ ನಿಮ್ಮ ಕೈ ಸೇರಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ದಶಕಗಳಿಂದ ಭಾರತದ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಬೆಸ್ಟ್ ಸೆಲ್ಲಿಂಗ್ ಸ್ಕೂಟರ್‍ಗಳಾಗಿದ್ದು, ಈಗ ಸಂಸ್ಥೆಯು ಆಕ್ಟಿವಾ 4ಜಿ ಯ ಮುಂದಿನ ತಲೆಮಾರಿನ 5ಜಿ ಸ್ಕೂಟರ್ ಅನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡೆಗಡೆ ಮಾಡಿದೆ.

ಇದಕ್ಕೆ ವಿನೂತನವಾಗಿ ಅಳವಡಿಸಲಾಗಿರುವ ಎಲ್ಇಡಿ ಹೆಡ್‍ಲೈಟ್ಸ್ ಮತ್ತು ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಸ್ಕೂಟರಿಗೆ ಪ್ರೀಮಿಯಂ ಲುಕ್ ನೀಡಿದೆ. ಕೊಟ್ಟ ಬೆಲೆಗೆ ಮೋಸವಿಲ್ಲದಿರುವ ಹಾಗೆ ಸ್ಕೂಟರ್ ವಿನ್ಯಾಸವಾಗಿದ್ದು ಖರೀದಿಗೆ ಬೆಸ್ಟ್ ಎನ್ನಬಹುದು.


Click it and Unblock the Notifications








