ಒಂದು ಬಾರಿ ಈ ವಿಡಿಯೋ ನೋಡಿ.. ಹೆಲ್ಮೆಟ್‍ನ ಮೌಲ್ಯ ಏನು ಅಂತ ನಿಮಗೇ ತಿಳಿಯುತ್ತೆ..
ಜೀವದ ಮೆಲೆ ಯಾರಿಗೆ ತಾನೆ ಆಸೆ ಇರಲ್ಲ ಹೇಳಿ.?! ಜೀವಕ್ಕೆ ಮುಪ್ಪು ಬಂದಾಗ, ಇಲ್ಲ ಸತ್ತು ಬದುಕಿದಾಗ ಮಾತ್ರವೆ ಜೀವದ ಬೆಲೆ ನಮಗೆ ತಿಳಿಯುತ್ತೆ. ಜವಾಬ್ದಾರಿ ರಹಿತ ಜೀವದಿಂದ ಉಂಟಾಗುವ ತೊಂದರೆಗಳಿಗೆ ಉದಾಹರಣೆಗಳು ಅದೆಷ್ಟೊ..
ಜೀವದ ಮೆಲೆ ಯಾರಿಗೆ ತಾನೆ ಆಸೆ ಇರುವುದಿಲ್ಲ ಹೇಳಿ.? ಜೀವಕ್ಕೆ ಮುಪ್ಪು ಬಂದಾಗ, ಇಲ್ಲ ಸತ್ತು ಬದುಕಿದಾಗ ಮಾತ್ರವೇ ಜೀವದ ಬೆಲೆ ನಮಗೆ ತಿಳಿಯುತ್ತೆ. ಜವಾಬ್ದಾರಿ ರಹಿತ ಜೀವನದಿಂದಾಗಿ ಉಂಟಾಗುವ ತೊಂದರೆಗಳಿಗೆ ಉದಾಹರಣೆಗಳು ಅದೆಷ್ಟೊ..

ಆದ್ರೆ ಈ ಅಪಘಾತ ನಡೆದ ರೀತಿ ನೋಡಿದರೇ ನಮ್ಮ ಬಗ್ಗೆ ನಾವು ತೆಗೆದುಕೊಳ್ಳುವ ಜಾಗರೂಕತೆಗಳು ಹಣೆಬರಹವನ್ನು ಕೂಡಾ ಬದಲಾಯಿಸಬಲ್ಲವು ಎಂದರೆ ನಂಬಲೇಬೇಕು. ಅದೃಷ್ಟವಾಶಾತ್ ಸಂಭವಿಸಿದ ಈ ಘಟನೆಯಲ್ಲಿ ಒಬ್ಬ ಬೈಕ್ ರೈಡರ್ ಊಹಿಸಲು ಸಾಧ್ಯವೇ ಇಲ್ಲದ ರೀತಿಯಲ್ಲಿ ಅಪಘಾತದಿಂದ ಬಚಾವ್ ಆಗಿದ್ದಾನೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯು ಕೆಳಗಿನ ಸ್ಲೈಡರ್‍ಗಳಲ್ಲಿದೆ ಓದಿ.

ಸಣ್ಣ ಗಾತ್ರದ ರೋಡಿನಲ್ಲಿ ಪ್ರಯಾಣಿಸುತಿದ್ದ ಒಬ್ಬ ಬೈಕ್ ರೈಡರ್ ಕಂಟ್ರೋಲ್ ತಪ್ಪಿ ರೋಡಿನ ಮೇಲೆ ಬಿದ್ದ. ಅದೇ ಸಮಯದಲ್ಲಿ ಪಕ್ಕದಲ್ಲೇ ಹೋಗುತ್ತಿದ್ದ ಲಾರಿ ಆತನ ತಲೆಯ ಮೇಲೆ ತುಳಿದುಕೊಂಡು ಹೋಗುತ್ತೆ. ಅದೃಷ್ಟವಶಾತ್, ಆ ಬೈಕ್ ರೈಡರ್ ಆ ಭೀಕರ ಅಪಘಾತದಲ್ಲೂ ಯಾವುದೇ ತೊಂದರೆ ಇಲ್ಲದೇ ಪಾರಾಗುತ್ತಾನೆ.

ನಂಬಲು ಸಾಧ್ಯವಾಗುತ್ತಿಲ್ಲ ಅಲ್ಲವೇ.? ಹೌದು, ಕಾರಿನ ಫ್ರಂಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಈ ವಿಡಿಯೋ ಕ್ಲಿಪ್ ಇದೀಗ ವೈರಲ್ ಆಗಿದ್ದು, ಭಾರೀ ಗಾತ್ರದ ಲಾರಿಯೊಂದು ಬೈಕ್ ರೈಡ್‌ರ್ ತೆಲೆ ಮೇಲೆ ಹಾಯ್ದು ಹೋದ್ರು ಏನು ಆಗಿಲ್ಲ. ಹಾಗಾದ್ರೆ ಇದೊಂದು ಪಾವಡ ಅಂತಾ ಅಂದುಕೊಂಡು ಬಿಡಬೇಡಿ. ಇದಕ್ಕೆ ಕಾರಣ ಬೈಕ್ ಸವಾರ ಧರಿಸಿದ್ದ ಉತ್ತಮ ಮಾದರಿಯ ಹೆಲ್ಮೆಟ್ ಆತನ ಪ್ರಾಣವನ್ನೇ ಉಳಿಸಿದೆ.

ನಿಜಕ್ಕೂ ಈ ಘಟನೆಯು ಹೆಲ್ಮೆಟ್ ಅನ್ನು ಆಟದ ವಸ್ತುವಿನಂತೆ ನಿರ್ಲಕ್ಷ್ಯ ಮಾಡುವ ರೈಡರ್‍ಗಳಿಗೆ ಗುಣಪಾಠ ಎಂದರೆ ತಪ್ಪಾಗಲಾರದು. ಇದಲ್ಲದೆ ಒಳ್ಳೆಯ ಗುಣಮಟ್ಟದ ಮತ್ತು ಐಎಸ್ಐ ಗುರುತು ಪಡೆದಿರುವ ಹೆಲ್ಮೆಟ್‍ನ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.

ಭಾರತದಲ್ಲಿನ ಹಲವು ದ್ವಿಚಕ್ರ ವಾಹನ ಚಾಲಕರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರವೆ ಹೆಲ್ಮೆಟ್ ಅನ್ನು ಧರಿಸುತ್ತಿದ್ದಾರೆ. ನಿಜಕ್ಕೂ ಒಳ್ಳೆಯ ಗುಣಮಟ್ಟದ ಹಾಗು ಐಎಸ್ಐ ಗುರುತಿಲ್ಲದ ಕಳಪೆ ಮಟ್ಟದ ಹೆಲ್ಮೆಟ್‍ಗಳು ನಿಮ್ಮ ಪ್ರಾಣವನ್ನು ರಕ್ಷಿಸಲಾರವು.

ಕೇಂದ್ರ ಸರ್ಕಾರವು ಈಗಗಲೇ ಐಎಎಸ್ಐ ಗುರುತಿಲ್ಲದ ಕಳಪೆ ಹೆಲ್ಮೆಟ್ ತಯಾರಿ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವ ವಿಚಾರದ ಬಗ್ಗೆ ಆದೇಶವನ್ನು ನೀಡಿದೆ. ಅದಲ್ಲದೆ ಇದನ್ನು ಪಾಲಿಸದೆ ಇರುವ ಚಾಲಕರನ್ನು ಮೋಟಾರ್ ವೆಹಿಕಲ್ ಆ್ಯಕ್ಟ್ ಅಡಿ ಪ್ರಕರಣವನ್ನು ಕೂಡಾ ದಾಖಲಿಸಲಾಗುತ್ತಿದೆ.

ಈ ಹಿಂದೆಯೇ ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕರಿ ಮತ್ತು ಧರ್ಮೆಂದ್ರ ಪ್ರಧಾನ್ ಅವರು ಸುಖದ್ ಯಾತ್ರೆ ಮೊಬೈಲ್ ಆಪ್ ಮತ್ತು ನ್ಯಾಷನಲ್ ಹೈವೆ ಎಮರ್ಜೆನ್ಸಿ ಸಂಖ್ಯೆ 1033 ಬಿಡುಗಡೆಗೊಳಿಸಿದ ಕಾರ್ಯಕ್ರಮದಲ್ಲೂ ಕಳಪೆ ಗುಣಮಟ್ಟದ ಹೆಲ್ಮೆಟ್‍ನ ಕುರಿತಾಗಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಹೀಗಾಗಿ ವರ್ಷದ ಕೊನೆಯೊಳಗೆ ಉತ್ತಮ ಗುಣಮಟ್ಟದ ಐಎಸ್ಐ ಗುರುತಿರುವ ಹೆಲ್ಮೆಟ್ ಅನ್ನು ಮಾತ್ರ ಬಳಸಬೇಕೆಂದು ಕೇಂದ್ರ ಸರ್ಕಾರವು ಆದೇಶಿಸಿದ್ದು, ಈ ಆದೇಶವನ್ನು ಎಲ್ಲಾ ದ್ವಿಚಕ್ರ ವಾಹನ ಚಾಲಕರು 6 ತಿಂಗಳ ಒಳಗಾಗಿ ತಪ್ಪದೇ ಪಾಲಿಸಬೇಕಾಗಿದೆ.

ಈ ವಿಡಿಯೋ ನೋಡಿದ ನಂತರವಾದ್ರೂ ದ್ವಿಚಕ್ರ ವಾಹನ ಚಾಲಕರು ಕಣ್ಣು ತೆರೆದುಕೊಳ್ಳಬೇಕಾಗಿದ್ದು, ಸಾವು ಬಂದರೆ ಸಾಯುತ್ತೇವೆ ಇಲ್ಲದಿದ್ದರೆ ಎಂತಹ ಪ್ರಮಾದಗಳು ಬಂದರೂ ಬದುಕುತ್ತೆವೆ ಎಂಬ ಹಠಮಾರಿ ಆಲೋಚನೆಯಿಂದ ಹೊರಗೆ ಬರಲು ಪ್ರಯತ್ನಿಸಬೇಕಿದೆ. ಒಳ್ಳೆಯ ಗುಣಮಟ್ಟದ ಐಎಸ್ಐ ಗುರುತಿನ ಹೆಲ್ಮೆಟ್‍ಗಳು ಸಹ ಹೆಚ್ಚೆಂದರೇ 1 ಸಾವಿರದಿಂದ 2 ಸಾವಿರದೊಳಗೆ ಒಳಗೆ ಇರುತ್ತದೆ. ಅದ್ರೆ 100 ಅಥವಾ 200 ರೂಪಾಯಿ ಕೊಟ್ಟು ಖರೀದಿ ಮಾಡುವ ಹೆಲ್ಮೆಟ್‌ಗಳು ನಿಮ್ಮ ಜೀವವನ್ನು ಉಳಿಸಲಾರವು.

'ಪ್ರಸ್ತುತ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿನ ಶೇಕಡ 75 ರಿಂದ 80ರಷ್ಟು ದ್ವಿಚಕ್ರ ವಾಹನ ಚಾಲಕರು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಬಳಕೆಮಾಡುತ್ತಿದ್ದು, ಅಗ್ಗದ ಬೆಲೆಗೆ ಲಭ್ಯವಿರುವ ನಕಲಿ ಐಎಸ್ಐ ಹೆಲ್ಮೆಟ್‌ಗಳೇ ಜೋತು ಬಿದ್ದಿದ್ದಾರೆ. ಹೀಗಾಗಿ ಇನ್ನು ಮುಂದಾದ್ರೂ ಉತ್ತಮ ಗುಣಮಟ್ಟದ ಹೆಲ್ಮೆಟ್ ಖರೀದಿಸಿ ಆಗಬಹುದಾದ ದುರಂತಗಳಿಂದ ಬಚಾವ್ ಆಗಿರಿ...
ಅಪಘಾತದ ವಿಡಿಯೋ ಇಲ್ಲಿದೆ ನೋಡಿ.. ಇದರಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಪ್ರಾಮುಖ್ಯತೆ ಏನು ಅಂತಾ ಗೊತ್ತಾಗಲಿದೆ.


Click it and Unblock the Notifications








