ಬೆಂಗಳೂರಿಗೆ ತಲುಪಿದ ದೇಶದ ಮೊದಲ ಹೋಂಡಾ ಗೋಲ್ಡ್ ವಿಂಗ್ ಬೈಕ್..
ಜನಪ್ರಿಯ ಹೋಂಡಾ ಸಂಸ್ಥೆಯ ಐಷಾರಾಮಿ ಬೈಕ್ ಮಾದರಿ ಗೋಲ್ಡ್ ವಿಂಗ್ ಸದ್ಯ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಹತ್ತು ಹಲವು ವಿಶೇಷತೆಗಳಿಂದಾಗಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.
ಜನಪ್ರಿಯ ಹೋಂಡಾ ಸಂಸ್ಥೆಯ ಐಷಾರಾಮಿ ಬೈಕ್ ಮಾದರಿ ಗೋಲ್ಡ್ ವಿಂಗ್ ಸದ್ಯ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಹತ್ತು ಹಲವು ವಿಶೇಷತೆಗಳಿಂದಾಗಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಕಳೆದ ನವೆಂಬರ್‌ನಲ್ಲಿ 2018ರ ಗೋಲ್ಡ್ ವಿಂಗ್ ಮಾದರಿಯನ್ನು ಅನಾವರಣ ಮಾಡಿದ್ದ ಹೋಂಡಾ ಸಂಸ್ಥೆಯು ಕಳೆದ ಕೆಲ ದಿನಗಳಿಂದ ಹೊಸ ಬೈಕ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದೀಗ ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ಮೂಲದ ಗ್ರಾಹಕರೊಬ್ಬರು 2018ರ ಗೋಲ್ಡ್ ವಿಂಗ್ ಬೈಕ್ ಖರೀದಿಗಾಗಿ ಬುಕ್ ಮಾಡಿದ್ದು, ನಿನ್ನೆಯಷ್ಟೇ ಹೊಸ ಬೈಕ್ ಅನ್ನು ಆಮದು ಮಾಡಿಕೊಳ್ಳಲಾಗಿದೆ.

ಹೋಂಡಾ ಡೀಲರ್ಸ್‌ನಲ್ಲಿ ಕಂಡ ಹೋಂಡಾ ಗೋಲ್ಡ್ ವಿಂಗ್ ಬೈಕ್ ಕ್ಯಾಂಡಿ ಆರ್ಡೆಂಟ್ ರೆಡ್ ಬಣ್ಣವನ್ನು ಹೊಂದಿದ್ದು, ಹಲವು ವಿಶೇಷ ತಾಂತ್ರಿಕ ಅಂಶಗಳನ್ನು ಹೊಂದಿರುವ ಈ ಬೈಕಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.26.85 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೋಂಡಾ ಗೋಲ್ಡ್ ಬೈಕ್‌ಗಳು ಸ್ಟ್ಯಾಂಡರ್ಡ್ ಮತ್ತು ಟೂರ್ ಎಂಬ ಆಯ್ಕೆಯನ್ನು ಹೊಂದಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ತಕ್ಕಂತೆ ಸ್ಟ್ಯಾಂಡರ್ಡ್ ಮತ್ತು ಟೂರ್ ವೆರಿಯೆಂಟ್ ಖರೀದಿಸಬಹುದಾಗಿದೆ.

ಬೆಂಗಳೂರು ಮೂಲದ ಗ್ರಾಹಕರ ಖರೀದಿ ಮಾಡಿರುವ ಬೈಕ್ ಮಾದರಿಯು ಗೋಲ್ಡ್ ವಿಂಗ್ ಟೂರ್ ಮಾದರಿಯಾಗಿದ್ದು, 7-ಸ್ಪೀಡ್ ಡಿಸಿಟಿ ಟ್ರಾನ್‌ಮಿಷನ್, ಎಲೆಕ್ಟ್ರಿಕ್ ರಿವರ್ಸ್ ಗೇರ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳು ಈ ಬೈಕಿನಲ್ಲಿವೆ.

ಎಂಜಿನ್ ಸಾಮರ್ಥ್ಯ
1,883 ಸಿಸಿ ಫ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು 125-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದಿಸುವ ಗುಣಹೊಂದಿದ್ದು, ಸುರಕ್ಷತೆಗಾಗಿ 320 ಎಂಎಂ ಡ್ಯುಯಲ್ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಬಳಕೆ ಮಾಡಲಾಗಿದೆ.

ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಮಲ್ಟಿಪಲ್ ರೈಡ್ ಮೂಡ್, ಎಬಿಎಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳ ಆಯ್ಕೆ ಹೊಂದಿದೆ.

ಇನ್ನು ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು 379 ಕೆ.ಜಿ ತೂಕ ಪಡೆದುಕೊಂಡಿದ್ದು, ಇದು ಹಳೆಯ ಮಾದರಿಗಿಂತ 40 ಕೆ.ಜಿ ತೂಕ ಕಡಿಮೆ ಮಾಡಲಾಗಿದೆ. ಇದರಿಂದ ಬೈಕಿನ ಇಂಧನ ಕಾರ್ಯಕ್ಷಮತೆಗೆ ಪೂರಕವಾಗಿದ್ದು, ಈ ಬೈಕಿನಲ್ಲಿ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಅಳವಡಿಕೆಯಾಗಿದೆ.

ಇದರಿಂದ ಹೊಸ ಬೈಕ್ ಹಾರ್ಲೇ ಡೇವಿಡ್‌ಸನ್ ಸಂಸ್ಥೆಯ ಸಿವಿಒ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 2018ರ ಹೋಂಡಾ ಗೋಲ್ಡ್ ವಿಂಗ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ನ್ಯಾವಿಗೆಷನ್, ಕ್ರೂಸರ್ ಕಂಟ್ರೋಲರ್, ಎಲೆಕ್ಟ್ರಿಕ್ ವಿಂಡ್ ಸ್ಕ್ರೀನ್, ಎಲ್ಇಡಿ ಲೈಟಿಂಗ್, ಬ್ಲ್ಯೂಟೂಥ್ ಕನೆಕ್ಟಿವಿಟಿ, ಆ್ಯಪಲ್ ಕಾರ್ ಸೇರಿದಂತೆ ಹಲವು ಮುಂದುವರಿದ ತಾಂತ್ರಿಕ ಅಂಶಗಳು ಇದರಲ್ಲಿವೆ.
ಬೆಂಗಳೂರಿನ ಹೋಂಡಾ ಡೀಲರ್ಸ್ ಬಳಿ ಕಂಡು ಬಂದ ಗೋಲ್ಡ್ ವಿಂಗ್ ಬೈಕಿನ ವಿಡಿಯೋ ಇಲ್ಲಿದೆ ವೀಕ್ಷಿಸಿ..
Source: Motoroids


Click it and Unblock the Notifications








