ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಸುಮಾರು 30 ವರ್ಷಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ದೊಡ್ಡ ಟ್ರೆಂಡ್ ಸೃಷ್ಠಿಸಿದ್ದ ಜಾವಾ ಬೈಕ್‌ಗಳು ಕಾರಣಾಂತರಗಳಿಂದ ಇತಿಹಾಸ ಪುಟ ಸೇರಿದ್ದು ಬಹುತೇಕ ಬೈಕ್ ಪ್ರೇಮಿಗಳಿಗೆ ಗೊತ್ತಿರುವ ವಿಚಾರ. ಆದ್ರೆ ಇದೀಗ ಜಾವಾ ಮತ್ತೆ ತನ್ನ ಹಳೆಯ ಗತ್ತಿನೊಂದಿಗೆ ಹೊಸತನ ಹೊತ್ತು ಭಾರತದಲ್ಲಿ ಬಿಡುಗಡೆಯಾಗಿರುವುದು ಹಲವು ವಿಶೇಷತೆ ಕಾರಣವಾಗಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಜಾವಾ ಸಂಸ್ಥೆಯು 1999ರಲ್ಲಿ ಭಾರತದಿಂದ ನಿರ್ಗಮಿಸಿದ ಬಳಿಕ ಮತ್ತೆ ಬಿಡುಗಡೆಗೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿಯಲ್ಲಿ ಮಹೀಂದ್ರಾ ಸಂಸ್ಥೆಯು ಜಾವಾ ಬೈಕ್‌ಗಳಿಗೆ ಮರುಜೀವ ನೀಡಿದ್ದು, ಹೊಸ ಬೈಕ್‌ಗಳ ಬಿಡುಗಡೆಗೂ ಮುನ್ನ ಭಾರತೀಯ ಚಿತ್ರರಂಗದ ಮೇರು ಕಲಾವಿದ, ವರನಟ, ನಟಸಾರ್ವಭೌಮ ಡಾ. ರಾಜಕುಮಾರ್ ಅವರನ್ನು ನೆನಪಿಕೊಂಡಿದ್ದು ಮಾತ್ರ ಕನ್ನಡಿಗರ ಪಾಲಿಗೆ ಖುಷಿಯ ವಿಚಾರ ಅಂದ್ರೆ ತಪ್ಪಾಗುದಿಲ್ಲ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಹೌದು, ಜಾವ ಸಂಸ್ಥೆಯು ಅಣ್ಣವ್ರಾ ನಟಿಸಿದ್ದ ನಾ ನಿನ್ನ ಮರೆಯಲಾರೆ ಚಿತ್ರವೊಂದರ ತುಣಕನ್ನು ಟ್ವಿಟ್ ಮಾಡುವ 1970ರ ಅವಧಿಯಲ್ಲಿ ಜಾವಾ ಗತ್ತು ಹೇಗಿತ್ತು ಎಂಬುವುದನ್ನು ನೆನಪಿಕೊಂಡಿದ್ದು, ಜಾವಾ ಬೈಕ್‌ನಲ್ಲಿ ಸಾಹಸವೊಂದನ್ನು ಮಾಡುವ ವಿಡಿಯೋ ಅದಾಗಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

1976ರಲ್ಲಿ ಬಿಡುಗಡೆಯಾದ ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಬೈಕ್ ರೇಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಜ್‌ಕುಮಾರ್ ಅವರು ಚಿತ್ರದುದ್ದಕ್ಕೂ ಜಾವಾ ಬೈಕ್ ಅನ್ನೇ ಚಲಾಯಿಸುತ್ತಿರುತ್ತಾರೆ. ಆಗ ಚಿತ್ರ ಬಿಡುಗಡೆ ಆದಾಗ ಅಣ್ಣಾವ್ರು ಚಲಾಯಿಸಿದ್ದ ಜಾವಾ ಬೈಕ್‌ ಭಾರಿ ಟ್ರೆಂಡ್‌ ಆಗಿತ್ತು. ಆಗಿನ ಯುವಕರಿಗೆ ಜಾವಾ ಬೈಕ್‌ನ ಹುಚ್ಚು ಹತ್ತಿಸಿದ್ದು ಇದೇ 'ನಾ ನಿನ್ನ ಮರೆಯಲಾರೆ' ಚಿತ್ರ.

ಕೇವಲ ರೆಟ್ರೋ ಲುಕ್ ಮಾತ್ರವಲ್ಲದೇ ಪರ್ಫಾಮೆನ್ಸ್ ವಿಚಾರವಾಗಿಯೂ ಮೊದಲಿನಿಂದಲೂ ಯುವಕರ ಪಾಲಿನ ಹಾಟ್ ಫೆವರಿಟ್ ಆಗಿದ್ದ ಜಾವಾ ಬೈಕ್, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಗಮನಸೆಳೆದಿರುವುದು ಸಿನಿ ಪ್ರಿಯರು ಮರೆಯಲಾರರು.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ನಟ ಶಾರುಖ್ ಖಾನ್ ಕೂಡಾ ಫಿದಾ..!

ಭಾರತದಲ್ಲಿ ಜಾವಾ ಬೈಕ್ ಮರುಬಿಡುಗಡೆಯಾಗಿದ್ದೆ ತಡ 90ರ ದಶಕದಲ್ಲಿ ನಟಿಸಿದ್ದ ಪ್ರಮುಖ ನಟರು ತಮ್ಮ ಜಾವಾ ಬೈಕ್‌ಗಳ ಕ್ರೇಜ್ ಬಿಚ್ಚಿಟ್ಟಿದ್ದಲ್ಲದೇ ಮರುಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಜಾವಾ ಬೈಕ್ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಇದು ಡಬಲ್ ಖುಷಿ ಅಂದ್ರೆ ತಪ್ಪಾಗುವುದಿಲ್ಲ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಈ ಬಗ್ಗೆ ಟ್ವಿಟ್ ಮಾಡಿರುವ ನಟ ಶಾರುಖ್ ಖಾನ್ ಜಾವಾ ಬೈಕಿನ ಪ್ರಿತಿಯನ್ನು ಹಂಚಿಕೊಂಡಿದ್ದು, 'ಇದರ ಮೇಲೆಯೇ ಬೆಳೆದವನು ನಾನು' ಎನ್ನುವ ಮೂಲಕ ಜಾವಾ ಮೇಲಿನ ಕ್ರೇಜ್ ಬಿಚ್ಚಿಟ್ಟಿದ್ದು, ಜಾವಾ ಬೈಕ್‌ಗಳನ್ನು ಭಾರತದಲ್ಲಿ ಮರುಬಿಡುಗಡೆಗೊಳಿಸುವಲ್ಲಿ ಶ್ರಮಿಸಿದ ಮಹೀಂದ್ರಾ ನಡೆಗೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಮಹೀಂದ್ರಾ ಸಂಸ್ಥೆಯು ಸದ್ಯ ಮೂರು ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನ ಬಿಡುಗಡೆ ಮಾಡಿದಲ್ಲಿ ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಜಾವಾ ಹಾಗೂ ಜಾವಾ 42 ಬೈಕ್‍ಗಳು ಮಧ್ಯಪ್ರದೇಶದಲ್ಲಿರುವ ಪಿಥಮ್‍ಪುರ್ ಮಹೀಂದ್ರಾ ಘಟಕದಲ್ಲಿ ಸಿದ್ದಗೊಳ್ಳುತ್ತಿದ್ದು, 2019ರ ಆರಂಭದಲ್ಲಿ ಬೈಕುಗಳು ಟೆಸ್ಟ್ ರೈಡ್‍ಗೆ ಸಿಗಲಿವೆ. ಜೊತೆಗೆ ಜಾವಾ ಪೆರಾಕ್ ಬೈಕ್ 2019ರ ಮಧ್ಯದಲ್ಲಿ ಗ್ರಾಹಕರಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

MOST READ: ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..!

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ರಾಯಲ್ ಎನ್‌‌ಫೀಲ್ಡ್‌ಗೆ ತಳಮಳ..!

ಜಾವಾ ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‍ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ರಾಯಲ್ ಎನ್‍ಫೀಲ್ಡ್ 350 ಕ್ಲಾಸಿಕ್ ಬೈಕ್‍ಗಳೊಂದಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿವೆ ಎನ್ನಬಹುದು.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೇ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಬಹುದು.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಜಾವಾ ಸಂಸ್ಥೆಯು ಹೊಸ ಬೈಕ್ ಬಿಡುಗಡೆಗೂ ಮುನ್ನ ಡಾ.ರಾಜ್ ಅವರನ್ನು ನೆನಪಿಸಿಕೊಂಡಿದ್ದು ಯಾಕೆ ಗೊತ್ತಾ?

ಹೀಗಾಗಿಯೇ ಭಾರತೀಯ ಗ್ರಾಹಕರ ಅಭಿರುಚಿಗಳನ್ನು ಅರಿತು ಜಾವಾ ಬೈಕ್‌ಗಳಲ್ಲಿ ಹೊಸ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾವಾ ಬೈಕ್‌ಗಳನ್ನು ಹೊರತರುವ ಇರಾದೆಯಲ್ಲಿದ್ದು, ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಏಕಸ್ವಾಮ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್‌ಗೆ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Jawa motorcycle tweets actor dr. rajkumars video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X