ಕವಾಸಕಿ ನಿಂಜಾ 300 ಬೈಕ್ ಖರೀದಿಸುವ ಯೋಜನೆ ಇದ್ರೆ ಸ್ವಲ್ಪ ದಿನ ಕಾಯಿರಿ...
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತನ್ನ ನಿಂಜಾ ಬೈಕ್‍ಗಳ ಮೇಲೆ ಬೇಲೆ ಕಡಿತಗೊಳಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಕಾವಸಕಿ ಬೈಕ್‍ಗಳ ಮಾರಾಟವನ್ನು ಹೆಚ್ಚಿಸಲು ಸಂಸ್ಥೆಯು ಈ ನಿರ್ಣಯವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿಯು ತನ್ನ ನಿಂಜಾ ಬೈಕ್‍ಗಳ ಮೇಲೆ ಬೇಲೆ ಕಡಿತಗೊಳಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಕವಾಸಕಿ ಬೈಕ್‍ಗಳ ಮಾರಾಟವನ್ನು ಹೆಚ್ಚಿಸಲು ಸಂಸ್ಥೆಯು ಈ ನಿರ್ಣಯವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಕವಾಸಕಿ ಸಂಸ್ಥೆಯು ತಮ್ಮ ನಿಂಜಾ 400 ಬೈಕ್ ಅನ್ನು ಬಿಡುಗಡೆಗೊಳಿಸುವ ಕಾರ್ಯದಲ್ಲಿದ್ದು, ಈಗಾಗಲೇ ನಿಂಜಾ 400 ಬೈಕ್ ಪುಣೆಯಲ್ಲಿನ ಡೀಲರ್‍ಗಳ ಬಳಿ ಕಾಣಿಸಿಕೊಂಡಿದೆ. 2013ರಲ್ಲಿ ಬಿಡುಗಡೆಗೊಂಡ ನಿಂಜಾ 300 ಬೈಕ್ ಹೊಸದಾಗಿ ಬಿಡುಗಡೆಯಾಗುತ್ತಿರುವ ನಿಂಜಾ 400 ಬೈಕ್‍ಗಿಂತ ಕಡಿಮೆ ಪರ್ಫಾರ್ಮೆನ್ಸ್ ಅನ್ನು ನೀಡುತ್ತಿದೆ.

ಕವಾಸಕಿ ನಿಂಜಾ 300 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.6 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಒಮ್ಮೆ ಈ ಬೈಕ್ ಅನ್ನು ದೇಶದಲ್ಲೆ ಉತ್ಪಾದನೆಗೊಳಿಸುವ ಕಾರ್ಯವನ್ನು ಶುರು ಮಾಡಿದ್ದಲ್ಲಿ ಸಂಸ್ಥೆಯು ಈ ಬೈಕಿನ ಬೆಲೆಯನ್ನು ಕಡಿಮೆ ಮಾಡಲಿದೆ.

ಒಮ್ಮೆ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಕಡಿಮೆಗೊಂಡಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಕೆಟಿಎಂ ಆರ್‍ಸಿ 390 ಮತ್ತು ಟಿವಿಎಸ್ ಅಪಾಚೆ ಆರ್‍ಆರ್310 ಬೈಕ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಮಾಹಿತಿಗಳ ಪ್ರಕಾರ ಕವಾಸಕಿ ನಿಂಜಾ 300 ಬೈಕ್‍ನ ಬೆಲೆಯು ಕಡಿಮೆ ಆದಲ್ಲಿ ರೂ. 2.50 ರಿಂದ 2.70 ಲಕ್ಷ ನಿಗದಿ ಪಡಿಸುವ ಸಾಧ್ಯತೆಗಳಿದ್ದು, ಮಾರುಕಟ್ಟೆಯಲ್ಲಿ ಮಾರಾಟದ ಮಟ್ಟವನ್ನು ಅಧಿಕಗೊಳಿಸಬೇಕೆಂಬ ತವಕದಲ್ಲಿದೆ.

ಕವಾಸಕಿ ನಿಂಜಾ 300 ಬೈಕ್ 296ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್ ಸಹಾಯದಿಂದ 39 ಬಿಹೆಚ್‍ಪಿ ಮತ್ತು 27ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕವಾಸಕಿ ನಿಂಜಾ 300 ಬೈಕ್ ಇನ್ನು ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿಲ್ಲವಾದ್ರೂ ಮುಂದಿನ ದಿನದಲ್ಲಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸುವುದರ ಬಗ್ಗೆ ಮಾಹಿತಿಯೂ ಕೂಡಾ ಇನ್ನು ತಿಳಿದುಬಂದಿಲ್ಲ.

ನಿಂಜಾ 300 ಬೈಕ್ ಅನ್ನು ಸಂಸ್ಥೆಯು ಮಾರುಕಟ್ಟೆಯಲ್ಲಿ ಮರು ಪ್ರಾರಂಭಿಸುವ ಸುದ್ದಿ ಕೂಡಾ ಸಿಕಿದ್ದು, ಮೆಲೆ ಹೇಳಿರುವ ಹಾಗೆ ಈ ಬೈಕ್ ಭಾರತದಲ್ಲಿಯೇ ತಯಾರು ಮಾಡಿದ್ದಲ್ಲಿ ಭಾರೀ ಮೊತ್ತದ ಬೆಲೆ ಕಡಿತವಾಗಲಿವೆ.

ದೇಶದಲ್ಲಿ ದೊರೆಯುತ್ತಿರುವ 300ಸಿಸಿ ಬೈಕ್‍ಗಳಲ್ಲಿ ಕವಾಸಕಿ ನಿಂಜಾ 300 ಬೈಕ್ ಹಳೆಯದಾಗಿದ್ದು, ಮಾರುಕಟ್ಟೆಯಲ್ಲಿರುವ ಕೆಟಿಎಂ ಆರ್‌ಸಿ 390, ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಬಿಎಮ್‍ಡಬ್ಲ್ಯು ಜಿ 310ಆರ್ ಬೈಕ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.


Click it and Unblock the Notifications








