2018ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಖರೀದಿಗೆ ಬುಕ್ಕಿಂಗ್ ಆರಂಭ
ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ 2018ರ ಸೂಪರ್ ಬೈಕ್ ಆವೃತ್ತಿಗಳು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ಈ ಹಿನ್ನೆಲೆ ಹೊಸ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ 2018ರ ಸೂಪರ್ ಬೈಕ್ ಆವೃತ್ತಿಗಳು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ಈ ಹಿನ್ನೆಲೆ ಹೊಸ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ನಿಂಜಾ ಜೆಡ್ಎಕ್ಸ್-10ಆರ್ ಬೈಕ್‌ಗಳು ಜುಲೈ ಮೊದಲ ವಾರ ಇಲ್ಲದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿವೆ ಎನ್ನಲಾಗಿದ್ದು, ಹೊಸ ಬೈಕ್ ಖರೀದಿಸುವ ಗ್ರಾಹಕರು ರೂ. 3 ಲಕ್ಷ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ. ವಿಶೇಷ ಅಂದ್ರೆ ಈ ಬಾರಿ ಬಿಡುಗಡೆಯಾಗುತ್ತಿರುವ ಹೊಚ್ಚ ಹೊಸ ನಿಂಜಾ ಜೆಡ್ಎಕ್ಸ್-10 ಬೈಕ್‌ಗಳು ಪುಣೆಯಲ್ಲಿರುವ ಚಾಕನ್ ಬೈಕ್ ಉತ್ಪಾದನಾ ಘಟಕದಲ್ಲೇ ಸಿದ್ದವಾಗಿವೆ.

ಈ ಹಿಂದೆ ಸಿಬಿಯು(ಕಂಪ್ಲಿಟ್ಲಿ ಬಿಲ್ಟ್ ಯುನಿಟ್) ಆಧಾರ ಮೇಲೆ ಜಪಾನ್‌ನಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದ್ರೆ ಬೈಕ್ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಸಿಕೆಡಿ(ಕಂಪ್ಲಿಟ್ಲಿ ನಾಕ್ಡ್ ಡೌನ್) ಆಧಾರದ ಸ್ವದೇಶಿ ನಿರ್ಮಿತ ಮಾದರಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ಹೀಗಾಗಿ ಬೈಕ್ ಬೆಲೆಗಳಲ್ಲಿ ತುಸು ಬದಲಾವಣೆಯಾಗಿದ್ದು, ಎಕ್ಸ್‌ಶೋರಂ ಪ್ರಕಾರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ 2018ರ ಆವೃತ್ತಿಗಳ ಬೆಲೆಯು 18 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದ್ದು, ಅತ್ಯುತ್ತನ ಮೊಟೊ ಜಿಪಿ ತಂತ್ರಜ್ಞಾನ ಹೊಂದಿರುವ ಮಾದರಿಗಳು ಇವಾಗಿವೆ.

ಎಂಜಿನ್ ಸಾಮರ್ಥ್ಯ
998ಸಿಸಿ ಲಿಕ್ವಿಡ್ ಕೂಲ್ಡ್ ಇನ್‌ಲೈನ್ ಫೌರ್ ಎಂಜಿನ್ ಹೊಂದಿರುವ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಬೈಕ್‌ಗಳು 194-ಬಿಎಚ್‌ಪಿ ಮತ್ತು 114-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದಿವೆ.

ಬೈಕ್ ರೈಡರ್‌ಗಳಿಗೆ ಸಹಾಯವಾಗಬಲ್ಲ 43ಎಂಎಂ ಬ್ಯಾಲೆನ್ಸ್ ಫ್ರಿ ಫೋರ್ಕ್ ಸಸ್ಷೆಷನ್ ಬಳಕೆ ಮಾಡಲಾಗಿದ್ದು, ಹೊಸ ಬೈಕ್‌ಗಳಲ್ಲಿ ಬಳಕೆ ಮಾಡಲಾಗಿರುವ ಸುಧಾರಿತ ಬ್ರೇಕಿಂಗ್ ಸಿಸ್ಟಂಗಳ ಜೊತೆ ಕವಾಸಕಿ ಇಂಟಲಿಜೆಂಟ್ ಆ್ಯಂಟಿ ಲಾಕ್ ಬ್ರೇಕ್ ವ್ಯವಸ್ಥೆಯನ್ನು ಇಲ್ಲಿ ಜೋಡಣೆ ಮಾಡಲಿದೆ.

ಮುಂಭಾಗದ ಚಕ್ರಗಳಲ್ಲಿ ಜೋಡಿ ವಿನ್ಯಾಸದ 330ಎಂಎಂ ಬ್ರೆಂಬೊ ಸೆಮಿ-ಫ್ಲೋಟರಿಂಗ್ ಡಿಸ್ಕ್ ಬ್ರೇಕ್ ಇದ್ದು, ಹಿಂಭಾಗದ ಚಕ್ರದಲ್ಲಿ 220ಎಂಎಂ ಸುತ್ತಳತೆಯ ಡಿಸ್ಕ್ ಬ್ರೇಕ್ ಹೊಂದಿಸಲಾಗಿದೆ. ಇದಲ್ಲದೇ ಪ್ರಮುಖ ಆರು ಎಲೆಕ್ಟ್ರಾನಿಕ್ ಸೌಲಭ್ಯಗಳು ಇದರಲ್ಲಿವೆ.

ಪ್ರಮುಖ ಎಲೆಕ್ಟ್ರಾನಿಕ್ ಸೌಲಭ್ಯಗಳು
ಸ್ಪೋರ್ಟ್ ಕವಾಸಕಿ ಟ್ರಾನ್ಷನ್ ಕಂಟ್ರೋಲ್(ಎಸ್-ಕೆಟಿಆರ್‌ಸಿ)
ಕವಾಸಕಿ ಲಾಂಚ್ ಕಂಟ್ರೊಲ್ ಮಾಡೆಲ್(ಕೆಎಲ್‌ಸಿಎಂ)
ಕವಾಸಕಿ ಎಂಜಿನ್ ಬ್ರೇಕಿಂಗ್ ಕಂಟ್ರೋಲ್(ಕೆಇಬಿಸಿ)
ಕವಾಸಕಿ ಕ್ವಿಕ್ ಶಿಫ್ಟರ್(ಕೆಕ್ಯೂಎಸ್)
ಕವಾಸಕಿ ಕಾರ್ನರ್ ಮ್ಯಾನೆಜ್‌ಮೆಂಟ್ ಫಂಕ್ಷನ್(ಕೆಸಿಎಂಎಫ್)
ಬಾಷ್ ಇನಿಷಿಯಲ್ ಮೆಜೆರ್‌ಮೆಂಟ್ ಯನಿಟ್(ಐಎಂಯು)

ಒಟ್ಟಿನಲ್ಲಿ ಹತ್ತು ಹಲವು ಸೌಲಭ್ಯಗಳೊಂದಿಗೆ ಖರೀದಿಗೆ ಸಿದ್ದವಾಗುತ್ತಿರುವ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಬೈಕ್‌ಗಳು ಸ್ಟಾಲಿನ್ ಸಿಲ್ವರ್, ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದ್ದು, ಬಿಡುಗಡೆಯ ನಂತರ ಬಿಎಂಡಬ್ಲ್ಯು ಎಸ್1000ಆರ್‌ಆರ್, ಯಮಹಾ ವೈಜೆಡ್ಎಫ್-ಆರ್1 ಮತ್ತು ಹೋಂಡಾ ಸಿಬಿಆರ್1000ಆರ್‌ಆರ್ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








