ಭಾರತದಲ್ಲಿ ಬಿಡುಗಡೆಯಾದ ಹೊಸ ಕವಾಸಕಿ ಝೆಡ್900 ಸೂಪರ್‍ಬೈಕ್
ಕವಾಸಕಿ ಸಂಸ್ಥೆಯು ತಮ್ಮ ಝೆಡ್900 ಬೈಕ್ ಅನ್ನು ಪುನರಾವರ್ತಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.68 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಹೊಸ 2019ರ ಝೆಡ್900 ಬೈಕ್ ಭಾರತಕ್ಕೆ ಸಿಬಿಯು ಮಾರ್ಗದಿಂದ ಬರಲಿದೆ.

ಬಿಡುಗಡೆಗೊಂಡ ಹೊಸ ಕವಾಸಕಿ ಝೆಡ್900 ಸೂಪರ್‍ಬೈಕ್ ಹಲವಾರು ಗುರುತರ ಬದಲಾವಣೆಗಳನ್ನು ಮತ್ತು ಅಪ್ಗ್ರೇಡ್‍ಗಳನ್ನು ಪಡೆದುಕೊಂಡಿದ್ದು, ಈ ಬಾರಿ ಕಡಿಮೆ ತೂಕದಲ್ಲಿ ಎಂಟ್ರಿ ಕೊಟ್ಟಿದೆ. ಕದಿಮೆ ತೂಕದ ಸಲುವಾಗಿ ಬೈಕಿನ ರೈಡಿಂಗ್ ಅನುಭವ ಕುಡಾ ಉತ್ತಮವಾಗಿ ನಿದಬಲ್ಲದಾದ ಭರವಸೆ ಇದೆ.

ಹೊಸ ಟ್ರೆಲ್ಲಿಸ್ ಫ್ರೇಮ್ ಅಲ್ಲದೇ ನೂತನ ಝೆಡ್900 ಬೈಕ್‍ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ನೀಡಲಾಗಿದೆ. ಬೈಕಿನ ಮುಂಭಾಗದಲ್ಲಿ ಶಾರ್ಪ್ ಡಿಸೈಗ್ನ್ಡ್ ಎಲ್ಇಡಿ ಹೆಡ್‍ಲ್ಯಾಂಪ್ಸ್ ಮತ್ತು ಹಿಂಭಾಗದಲ್ಲಿ ಜೆಡ್-ಆಕಾರದಲ್ಲಿನ ಎಲ್ಇಡಿ ಟೈಲ್ ಲೈಟ್‍ಗಳನ್ನು ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
20149ರ ಕವಾಸಕಿ ಝೆಡ್900 ಬೈಕ್ 948ಸಿಸಿ, ಲಿಕ್ವಿಡ್ ಕೂಲ್ಡ್ ಇನ್‍ಲೈನ್ ಸಿಲೆಂಡರ್ ಎಂಜಿನ್ ಸಹಾಯದಿಂದ 123ಬಿಹೆಚ್‍ಪಿ ಮತ್ತು 98.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಕವಾಸಕಿ ಝೆಡ್900 ಸೂಪರ್‍ಬೈಕ್‍ನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 41ಎಂಎಂ ಇಂವರ್ಟೆಡ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಶಾಕ್ ಅಬ್ಸಾರ್ಬರ್‍ಗಳನ್ನು ಒದಗಿಸಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್ 300ಎಂಎಂ ಮತ್ತು ಹಿಂಭಾಗದಲ್ಲಿ ಸಿಂಗಲ್ 250ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ. ಹಾಗೆಯೆ ಎಬಿಎಸ್ ಅನು ಸಹ ಈ ಬೈಕ್ ಪಡೆದಿದೆ.

ಹೊಸ ಕವಾಸಕಿ ಝೆಡ್900 ಬೈಕ್ ಮೆಟಾಲಿಕ್ ಮೂನ್‍ಡಸ್ಟ್ ಗ್ರೇ-ಈಬೋನಿ, ಪರ್ಲ್ ಫ್ಲ್ಯಾಟ್ ಸ್ಟಾರ್‍ಡಸ್ಟ್ ವೈಟ್/ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಫ್ಲ್ಯಾಟ್ ಸ್ಪಾರ್ಕ್ ಬ್ಲಾಕ್/ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಎಂಬ ಮೂರು ಆಕರ್ಷಕ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
2019ರ ಹೊಸ ಕವಾಸಕಿ ಝೆಡ್900 ದೇಶದಲ್ಲಿ ದೊರೆಯುತ್ತಿರುವ ಶಾರ್ಪ್ ಆದ ಮತ್ತು ಸ್ಪೋರ್ಟ್ಸ್ ನೇಕೆಡ್ ಸೂಪರ್‍ಬೈಕ್ ಆಗಿದ್ದು, ಬಿಡುಗಡೆಗೊಂಡ ಈ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡುಕಾಟಿ ಮಾನ್ಸ್ಟರ್ 821, ಟ್ರಂಯಫ್ ಸ್ಟ್ರೀಟ್ ಟ್ರಿಪಲ್ ಎಸ್ ಮತ್ತು ಯಮಹಾ ಎಂಟಿ-09 ಸೂಪರ್‍ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








