ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

By Praveen Sannamani

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾದ ಕವಾಸಕಿ ಮೋಟಾರ್ಸ್ ಈ ಹಿಂದೆಯೇ ಝೆಡ್900ಆರ್‌ಎಸ್ ಬೈಕ್‌ಗಳನ್ನ ಬಿಡುಗಡೆ ಮಾಡಿತ್ತು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಲ್ಯಾಕ್ ಕಲರ್ ವೆರಿಯೆಂಟ್ ಮಾದರಿಯನ್ನ ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಸ್ಪೋರ್ಟ್ ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ದೆಹಲಿ ಎಕ್ಸ್ ಶೋರಂ ಪ್ರಕಾರ ಝಡ್900ಆರ್‌ಎಸ್ ಬ್ಲ್ಯಾಕ್ ಕಲರ್ ಬೈಕ್ ಮಾದರಿಯು ರೂ. 15.30 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, 1970ರ ಅವಧಿಯಲ್ಲಿ ಜನಪ್ರಿಯಗೊಂಡಿದ್ದ ಝಡ್1 ಬೈಕಿನ ವಿನ್ಯಾಸಗಳನ್ನು ಹೊಸ ಬೈಕಿನಲ್ಲಿ ಅಳವಡಿಸುವ ಮೂಲಕ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ ಎನ್ನಬಹುದು.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ನೂತನ ಕವಾಸಕಿ ಝಡ್900ಆರ್‌ಎಸ್ ಬೈಕ್ ಮಾದರಿಯು ರೆಟ್ರೊ ಮಾರ್ಡನ್ ಶೈಲಿಯನ್ನು ಹೊಂದಿದ್ದು, ಈ ಮೂಲಕ ಲಗ್ಷುರಿ ಬೈಕ್ ಖರೀದಿಗಾರರನ್ನು ಮನ ಸೆಳೆಯುತ್ತಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಮೇಲೆ ಹೇಳಿದಂತೆ 1970ರ ದಶಕದಲ್ಲಿ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಝಡ್1 ಮತ್ತು ಆಧುನಿಕ ಝಡ್900 ಬೈಕ್‌ಗಳ ಸಂಯೋಜನೆಯೊಂದಿಗೆ ಝಡ್900ಆರ್‌ಎಸ್ ಸಿದ್ದಗೊಳಿಸಲಾಗಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಹೀಗಾಗಿ ಕವಾಸಕಿ ಕ್ಲಾಸಿಕ್ ಬೈಕ್ ಪ್ರೇಮಿಗಳಿಗೆ ಹೊಸ ಚಾಲನಾ ಅನುಭವ ನೀಡಲಿದ್ದು, ಇದರಲ್ಲಿ ಅತ್ಯಂತ ಶಕ್ತಿಶಾಲಿ 948 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದರಿಂದ ಇದು ಕೇವಲ ಕ್ಲಾಸಿಕ್ ಮಾದರಿಯಾಗಿರದೇ ಪರ್ಫಾಮೆನ್ಸ್ ಮಾದರಿ ಕೂಡಾ ಆಗಿರಲಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಈ ಮೂಲಕ 98.5 ಎನ್‌ಎಂ (6,500ಆರ್‌ಪಿಎಂ) ತಿರುಗುಬಲದಲ್ಲಿ 123.29 ಅಶ್ವಶಕ್ತಿಯನ್ನು (8,500ಆರ್‌ಪಿಎಂ) ಒದಗಿಸಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರಲಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಜೊತೆಗೆ ಕ್ರೀಡಾತ್ಮಕ ಕ್ಲಾಸಿಕ್ ಶೈಲಿ ಜತೆಗೆ ದೂರ ಪ್ರಯಾಣಕ್ಕೂ ಹೆಚ್ಚು ಆರಾಮದಾಯಕವಾಗಿದ್ದು, ಕವಾಸಕಿ ಟ್ರಾಕ್ಷನ್ ಕಂಟ್ರೋಲ್, ಎಲ್‌ಇಡಿ ಹೆಡ್‌ಲೈಟ್, ಬಹು ಕ್ರಿಯಾತ್ಮಕತೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇರಲಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಇನ್ನು ಹೊಸ ಬೈಕಿನಲ್ಲಿ ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಟ್ವಿನ್ ಡಿಸ್ಕ್ ಬ್ರೇಕ್, ಎಬಿಎಸ್, ಉತ್ತಮ ಇಂಧನ ಕಾರ್ಯಕ್ಷಮತೆ ಸೇರಿದಂತೆ ಹಲವು ಹೊಸ ಫೀಚರ್‌ಗಳನ್ನು ಝಡ್900ಆರ್‌ಎಸ್ ಬೈಕಿನಲ್ಲಿ ಇರಿಸಲಾಗಿದೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಕವಾಸಕಿ ಇಂಡಿಯಾ ವಿಭಾಗದ ಮುಖ್ಯಸ್ಥ ಯುಟಾಕಾ ಯಮಾಶಿಟಾ ಅವರು 'ಝೆಡ್900ಆರ್‌ಎಸ್ ಬಿಡುಗಡೆ ನಂತರ ಹಲವು ಕಾರಣಗಳಿಗೆ ವಿಶೇಷ ಬೈಕ್ ಉತ್ಪನ್ನವಾಗಿ ಹೊರಹೊಮ್ಮುತ್ತಿದ್ದು, ಇದೇ ಕಾರಣಕ್ಕೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಪ್ಪು ಬಣ್ಣದ ಆವೃತ್ತಿಯನ್ನ ಪರಿಚಯಿಸಿದ್ದೇವೆ' ಎಂದಿದ್ದಾರೆ.

ಕವಾಸಕಿ ಝೆಡ್900ಆರ್‌ಎಸ್ ಬ್ಲ್ಯಾಕ್ ಕಲರ್ ವೆರಿಯೆಂಟ್ ಬಿಡುಗಡೆ

ಒಟ್ಟಿನಲ್ಲಿ ಹಲವು ವಿಶೇಷತೆಗಳಿಂದ ಕೂಡಿರುವ ಕವಾಸಕಿ ಝೆಡ್900ಆರ್‌ಎಸ್ ಬೈಕ್‌ಗಳು ಕ್ಯಾಂಡಿ ಟೋನ್ ಆರೇಂಜ್ ಬಣ್ಣದ ಜೊತೆಗೆ ಕಪ್ಪು ಬಣ್ಣದಲ್ಲೂ ಖರೀದಿ ಲಭ್ಯವಾಗಿದ್ದು, ಗ್ರಾಹಕರು ತಮ್ಮ ಇಷ್ಟದ ಕಲರ್ ಸ್ಕೀಮ್ ಆಯ್ಕೆ ಮಾಡಲು ಇದು ಸಹಕಾರಿಯಾಗಲಿದೆ.

More from DriveSpark

Article Published On: Wednesday, July 18, 2018, 12:21 [IST]
English summary
Kawasaki Z900RS In Black Colour Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+