ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ತಮ್ಮ ಸ್ಪೋರ್ಟ್ ಬೈಕ್‍‍ಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ಕವಾಸಕಿ ಸಂಸ್ಥೆಯ ಭಾರತದ ದೇಶದಲ್ಲಿಯೆ ಜೋಡಣೆಗೊಂಡ ಲಿಮಿಟೆಡ್ ಎಡಿಷನ್ ಜೆಡ್‍ಎಕ್ಸ್-10ಆರ್ ಬೈಕ್ ಕೇವಲ 15 ದಿನಗಳಲ್ಲಿ ಸೋಲ್ಡ್ ಔಟ್ ಆಗಿದೆ.

By Rahul Ts

ತಮ್ಮ ಸ್ಪೋರ್ಟ್ ಬೈಕ್‍‍ಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ಕವಾಸಕಿ ಸಂಸ್ಥೆಯ ಭಾರತದ ದೇಶದಲ್ಲಿಯೆ ಜೋಡಣೆಗೊಂಡ ಲಿಮಿಟೆಡ್ ಎಡಿಷನ್ ಜೆಡ್‍ಎಕ್ಸ್-10ಆರ್ ಬೈಕ್ ಕೇವಲ 15 ದಿನಗಳಲ್ಲಿ ಸೋಲ್ಡ್ ಔಟ್ ಆಗಿದ್ದು, ಇದೀಗ ಕವಾಸಕಿ ಸಂಸ್ಥೆಯು ಈ ಬೈಕಿನ ಬುಕ್ಕಿಂಗ್‍ ಅನ್ನು ನಿಲ್ಲಿಸುವುದಾಗಿ ತಮ್ಮ ಡೀಲರ್‍‍ಗಳಿಗೆ ಆದೇಶಿಸಿದೆ.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ಕವಾಸಕಿ ಸಂಸ್ಥೆಯು ಕಳೆದ ತಿಂಗಳಿನ ಕೊನೆಯ ಅವಧಿಯಲ್ಲಿ ದೇಶಿಯ ಪ್ರಾಂತ್ಯದಲ್ಲಿ ನಿರ್ಮಾಣವಾದ ಜೆಡ್‍ಎಕ್ಸ್-10ಆರ್ ಬೈಕ್ ಅನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 12.8 ಲಕ್ಷದ ಪ್ರಾರಂಭಿಕ ಬೆಲೆಯೊಂದಿಗೆ ಬಿಡುಗಡೆಗೊಳಿಸಿತು. ಈ ಲೀಟರ್ ಕ್ಲಾಸ್ ಸೂಪರ್‍‍ಬೈಕ್ ಮಾರುಕಟ್ಟೆಗೆ ಸೆಮಿ ಕ್ನಾಕ್ಡ್ ಡೌನ್ ಯೂನಿಟ್‍‍ನ ಮುಖಾಂತರ ಎಂಟ್ರಿ ನೀಡಿತ್ತು.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ಕವಾಸಕಿ ನಿಂಜಾ 1000 ಬೈಕಿನ ನಂತರ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಕೈಗಟ್ಟುವ ಬೆಲೆಯ ಬೈಕ್ ಆಗಿದ್ದು, ಜೆಡ್‍ಎಕ್ಸ್-10ಆರ್ ಬೈಕ್ ಬಿಡುಗಡೆಗೊಂಡಾಗಿನಿಂದಲೂ ಸುಮಾರು 100 ಯೂನಿಟ್ ಬೈಕ್‍‍ಗಳ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಜೆಡ್‍ಎಕ್ಸ್-10ಆರ್ ಬೈಕಿನ ಡೆಲಿವರಿಯನ್ನು ಮುಂದಿನ ಎರಡು ತಿಂಗಳೊಳಗೆ ಪ್ರಾರಂಭಿಸುವುದಾಗಿ ಸಂಸ್ಥೆಯು ಸುಳಿವು ನೀಡಿದೆ.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ಹೊಸದಾಗಿ ಬಿಡುಗಡೆಗೊಂಡ ನಿಂಜಾ ಜೆಡ್ಎಕ್ಸ್-10ಆರ್ ಬೈಕ್‌ 998ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ 4 ಸಿಲಿಂಡರ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 117.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ನಿಂಜಾ ಜೆಡ್ಎಕ್ಸ್-10ಆರ್ ಬೈಕ್‌ಗಳಲ್ಲಿ ಕವಾಸಕಿ ಲಾಂಚ್ ಕಂಟ್ರೊಲರ್, ಕವಾಸಕಿ ಟ್ರಾನ್ಷನ್ ಕಂಟ್ರೊಲರ್, ಕವಾಸಕಿ ಬ್ರೇಕಿಂಗ್ ಕಂಟ್ರೊಲರ್, ಕ್ವಿಕ್ ಶಿಫ್ಟರ್, ಕಾರ್ನರ್ ಮ್ಯಾನೆಜ್‌ಮೆಂಟ್ ಫಂಕ್ಷನ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯ ಹೊಂದಿವೆ.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ನಿಂಜಾ ಜೆಡ್ಎಕ್ಸ್-10ಆರ್ ಮಾದರಿಗಳಲ್ಲಿ ಕೆಆರ್‌ಟಿ ವೆರಿಯೆಂಟ್ ಖರೀದಿಗೆ ಲಭ್ಯವಿದ್ದು, ಗ್ರೀನ್ ಬಣ್ಣದ ಪೇಂಟ್ ಸ್ಕೀಮ್ ಹೊಂದಿದೆ. ಹಾಗೆಯೇ ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು ಸಹ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ 3 ವಿವಿಧ ವೆರಿಯೆಂಟ್‌ಗಳ ಜೊತೆ ಜೊತೆಗೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿವೆ.

ಕೇವಲ 15 ದಿನಗಳಲ್ಲೆ ಕವಾಸಕಿ ಜೆಡ್‍ಎಕ್ಸ್-10ಆರ್ ಬೈಕ್ ಸೋಲ್ಡ್ ಔಟ್..

ದುಬಾರಿ ಬೆಲೆಯ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಲು ಯಶಸ್ವಿಯಾಗಿರುವ ಕವಾಸಕಿ ಸಂಸ್ಥೆಯು ಸೂಪರ್ ಬೈಕ್ ಮಾರಾಟದಲ್ಲಿ ಸುಜುಕಿ, ಬಿಎಂಡಬ್ಲ್ಯು, ಯಮಹಾ ಮತ್ತು ಹೋಂಡಾ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡಲಿದೆ.

More from DriveSpark

Article Published On: Monday, July 16, 2018, 17:54 [IST]
English summary
Locally-Assembled Kawasaki ZX-10R Sold Out In 15 Days Of Launch.
Read more on kawasaki sports bike sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+