ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ಉತ್ಪಾದನಾ ಸಂಸ್ಥೆಯು ವಿವಿಧ ಮಾದರಿಯ ಬೈಕ್ ಉತ್ಪನ್ನಗಳೊಂದಿಗೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳನ್ನು ಜನಪ್ರಿಯತೆ ಸಾಧಿಸಿದ್ದು, ಇದೀಗ ಮತ್ತೊಮ್ಮೆ ಬೈಕ್ ಮಾರಾಟ ಸಂಚಲನ ಸೃಷ್ಠಿಸಲು ಮುಂದಾಗಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲಿ ಎಂಟ್ರಿ ಲೆವಲ್ 125 ಡ್ಯೂಕ್ ಬಿಡುಗಡೆಗೆ ಮುಂದಾಗಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಗಳು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತದಲ್ಲೂ ಹೊಸ ಬೈಕ್ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿರುವ ಕೆಟಿಎಂ ಸಂಸ್ಥೆಯು ನವೆಂಬರ್ ಅಂತ್ಯಕ್ಕೆ ಹೊಸ ಬೈಕ್ ಬಿಡುಗಡೆಯ ಇರಾದೆಯಲ್ಲಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಸಂಸ್ಥೆಯು ಸದ್ಯ 200 ಡ್ಯೂಕ್ ಮಾದರಿಯನ್ನು ಎಂಟ್ರಿ ಲೆವಲ್ ಬೈಕ್ ಮಾದರಿಯಾಗಿ ಮಾರಾಟ ಮಾಡುತ್ತಿದ್ದು, ದುಬಾರಿ ಬೆಲೆಯ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಹೀಗಿರುವಾಗ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಂಟ್ರಿ ಲೆವಲ್ ಸ್ಪೋರ್ಟಿ ಬೈಕ್ ಹೊರತರುತ್ತಿರುವುದು ಕೆಟಿಎಂಗೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಹೀಗಿರುವಾಗ ವಿದೇಶಿ ಮಾರುಕಟ್ಟೆಯಲ್ಲಿನ 125 ಡ್ಯೂಕ್ ಬೈಕ್ ಮಾದರಿಯ ಮಾರಾಟವನ್ನು ಭಾರತದಲ್ಲೂ ಆರಂಭಿಸುವ ಯೋಜನೆಯಲ್ಲಿರುವ ಕೆಟಿಎಂ ಸಂಸ್ಥೆಯು ಎಂಟ್ರಿ ಲೆವಲ್ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯುವ ತವಕದಲ್ಲಿದ್ದು, ಪರ್ಫಾಮೆನ್ಸ್ ಪ್ರಿಯರಿಗೂ ಇದು ಉತ್ತಮ ಆಯ್ಕೆಯಾಗಲಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಕೆಟಿಎಂ ಸಂಸ್ಥೆಯು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ದುಬಾರಿ ಬೆಲೆಯ 1290 ಸೂಪರ್ ಡ್ಯೂಕ್ ಸಹ ಮಾರಾಟ ಮಾಡುತ್ತಿದ್ದು, ಅದೇ ಬೈಕಿನ ಡಿಸೈನ್ ಪ್ರೇರಿತ ಬೇಬಿ ಡ್ಯೂಕ್(125) ಹೊರತರುತ್ತಿರುವುದು ಸ್ಪೋರ್ಟಿ ಬೈಕ್ ಪ್ರಿಯರಿಗೆ ಹಬ್ಬವೇ ಸರಿ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.7-ಬಿಎಚ್‌ಪಿ ಮತ್ತು 11.80-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಇದರೊಂದಿಗೆ 125 ಸಿಸಿ ಎಂಜಿನ್ ಬೈಕ್‌ಗಳಲ್ಲೇ ಇದು ಪವರ್ ಫುಲ್ ಎಂಜಿನ್ ಮಾದರಿ ಎನ್ನಿಸಲಿದ್ದು, ಮುಂಭಾಗದಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬ್ಲ್ಯಪಿ ಮೊನೊಶಾರ್ಕ್ ಸಸ್ಷೆನ್ ಪಡೆದಿರಲಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಇನ್ನು ಬೈಕಿನ ಬ್ರೇಕಿಂಗ್ ವಿಭಾಗವು ಸಹ ವಿಶ್ವದರ್ಜೆ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, 300-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು 230-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಜೊತೆಗೆ ಬಾಷ್ ನಿರ್ಮಾಣದ ಡ್ಯುಯಲ್ ಚಾನಲ್ ಎಬಿಎಸ್ ಜೋಡಣೆ ಹೊಂದಿರಲಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಮತ್ತೊಂದು ಮಾಹಿತಿ ಪ್ರಕಾರ ಭಾರತದಲ್ಲಿ ಬಿಡುಗಡೆ ಮಾಡಲಿರುವ 125 ಡ್ಯೂಕ್ ಬೈಕ್ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಎಬಿಎಸ್ ಬದಲಾಗಿ ಸಿಬಿಎಸ್(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ) ಸೌಲಭ್ಯವನ್ನು ಒದಗಿಸಬಹುದು ಎನ್ನಲಾಗಿದ್ದು, ಭಾರತದಲ್ಲಿ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಮಾತ್ರವೇ ಎಬಿಎಸ್ ಕಡ್ಡಾಯವಾಗುತ್ತಿರುವುದಿಂದ ಸಿಬಿಎಸ್ ಒದಗಿಸಬಹುದು ಎನ್ನಲಾಗಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ತಾಂತ್ರಿಕವಾಗಿ ಎಬಿಎಸ್ ಮತ್ತು ಸಿಬಿಎಸ್ ಒಂದೇ ರೀತಿಯ ಕಾರ್ಯನಿರ್ವಹಣಾ ಗುಣಹೊಂದಿದ್ದರೂ, ಎಬಿಎಸ್‌ಗೆ ಇರುವ ಮಾನ್ಯತೆ ಸಿಬಿಎಸ್‌ಗೆ ಇಲ್ಲ. ವಾಸ್ತವವಾಗಿ ಸಿಬಿಎಸ್ ಕೂಡಾ ಬೈಕಿನ ಬ್ರೇಕಿಂಗ್ ವಿಭಾಗದಲ್ಲಿ ಅದ್ಬುತ ಕಾರ್ಯನಿರ್ವಹಣೆ ಹೊಂದಿದ್ದು, ಎಬಿಎಸ್‌ನಂತೆಯೇ ಕಾರ್ಯನಿರ್ವಹಿಸಬಲ್ಲದು.

MOST READ:ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಅದು ಹೇಗೆ ಅಂದ್ರೆ, ಬೈಕ್ ಸವಾರರು ಚಾಲನೆ ವೇಳೆ ತುರ್ತು ಸಂದರ್ಭಗಳು ಎದುರಾದಾಗ ಬೈಕ್ ನಿಯಂತ್ರಿಸಲು ಸಡನ್ ಆಗಿ ಬ್ರೇಕ್ ಒತ್ತುವುದು ಕಾಮನ್. ಈ ವೇಳೆ ಬೈಕ್ ಸ್ಕಿಡ್ ಆಗುವ ಸಾಧ್ಯತೆಗಳು ಕೂಡಾ ಹೆಚ್ಚು. ಹೀಗಿರುವಾಗ ಬೈಕಿನಲ್ಲಿರುವ ಎಬಿಎಸ್ ಸೌಲಭ್ಯದಂತೆಯೇ ಸಿಬಿಎಸ್ ಸೌಲಭ್ಯವು ಕೂಡಾ ಬೈಕ್ ಸವಾರರ ಸಹಾಯಕ್ಕೆ ಬರಲಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಬೈಕ್ ಸವಾರರು ಮುಂದಿನ ಚಕ್ರದ ಬ್ರೇಕ್ ಒತ್ತಿದ್ದಲ್ಲಿ ಅದು ಹಿಂದಿನ ಚಕ್ರದ ಬ್ರೇಕ್ ಮೇಲೂ ನಿಯಂತ್ರಣ ಹೊಂದಿರಲಿದ್ದು, ಹಿಂದಿನ ಚಕ್ರದ ಬ್ರೇಕ್ ಒತ್ತಿದಾಗ ಮುಂದಿನ ಚಕ್ರದ ಬ್ರೇಕ್ ಮೇಲೂ ಅನ್ವಯವಾಗುವಂತೆ ಸಿಬಿಎಸ್ ಸೌಲಭ್ಯವನ್ನ ಜೋಡಣೆ ಮಾಡಲಾಗಿರುತ್ತೆ. ಹೀಗಾಗಿ ಬೈಕ್ ಸ್ಕೀಡ್ ಆಗುವ ಸಾಧ್ಯತೆ ತುಂಬಾ ವಿರಳ ಎನ್ನಬಹುದು.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಹೀಗಾಗಿ ದುಬಾರಿ ಬೆಲೆಯ ಎಬಿಎಸ್ ಬದಲಾಗಿ ಅಗ್ಗದ ಬೆಲೆಗೆ ಲಭ್ಯವಾಗುವ ಸಿಬಿಎಸ್ ಜೋಡಣೆ ಮಾಡುವ ಬಗ್ಗೆಯು ಚಿಂತನೆ ನಡೆಸಿರುವ ಕೆಟಿಎಂ ಸಂಸ್ಥೆಯು ಗ್ರಾಹಕರ ಆದ್ಯತೆ ಮೇರೆಗೆ ಸಿಬಿಎಸ್ ಬೇಕೋ ಅಥವಾ ಎಬಿಎಸ್ ಬೇಕೋ ಎನ್ನುವುದನ್ನ ನಿರ್ಧರಿಸಲಿದೆ.

MOST READ:ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಒಂದು ವೇಳೆ ಎಬಿಎಸ್ ಅಳವಡಿಕೆ ಹೊಂದಿದ್ದಲ್ಲಿ 125 ಡ್ಯೂಕ್ ಬೆಲೆ ತುಸು ದುಬಾರಿ ಎನ್ನಿಸಲಿದ್ದು, ಎಂಟ್ರಿ ಲೆವಲ್ ಬೈಕಿಗೆ ಯಾವೆಲ್ಲಾ ಅಗತ್ಯ ತಾಂತ್ರಿಕ ಸೌಲಭ್ಯ ಬೇಕೋ ಅದೆಲ್ಲವೂ ಬೇಬಿ ಡ್ಯೂಕ್‌ನಲ್ಲಿ ಇರಲಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಬೈಕಿನ ಬೆಲೆಗಳು(ಅಂದಾಜು)

ಸದ್ಯ 200 ಡ್ಯೂಕ್ ಬೈಕ್ ಮಾದರಿಯು ಎಕ್ಸ್‌ಶೋರಂ ಪ್ರಕಾರ ರೂ. 1.51 ಲಕ್ಷಕ್ಕೆ ಮಾರಾಟವಾಗುತ್ತಿದ್ದು, ಎಂಜಿನ್ ಸಾಮರ್ಥ್ಯವನ್ನು ಹೊರತುಪಡಿಸಿ ಇತರೆ ತಾಂತ್ರಿಕ ಸೌಲಭ್ಯಗಳಲ್ಲಿ ಸಮಾನಾಗಿರುವ 125 ಡ್ಯೂಕ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 98 ಸಾವಿರದಿಂದ ರೂ.1.05 ಲಕ್ಷ ಬೆಲೆ ಹೊಂದುವ ನೀರಿಕ್ಷೆಯಿದೆ.

ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿರುವ ಕೆಟಿಎಂ 125 ಡ್ಯೂಕ್ ಬೆಲೆ ಎಷ್ಟು ಗೊತ್ತಾ?

ಈ ಮೂಲಕ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಯಮಹಾ ಎಫ್‌ಜೆಡ್25 ಬೈಕ್‌ಗಳಿಗೆ ಪೈಪೋಟಿ ನೀಡಲಿರುವ 125 ಡ್ಯೂಕ್‌ ಬೈಕ್, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೀರೋ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕಿಗೂ ಟಕ್ಕರ್ ನೀಡಲಿದೆ.

ಕೆಟಿಎಂ 125 ಡ್ಯೂಕ್ ಬೈಕಿನ ಮತ್ತಷ್ಟು ಚಿತ್ರಗಳಿಗಾಗಿ ಫೋಟೋ ಗ್ಯಾಲರಿ ನೋಡಿ..!

Kannada
Read more on ktm duke
English summary
KTM 125 Duke To Be Introduced In India — Launch Details Revealed.
Story first published: Monday, October 15, 2018, 18:59 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more