ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಆಸ್ಟ್ರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕೆಟಿಎಮ್ ತಮ್ಮ ಆರ್‍‍ಸಿ 200 ಸೂಪ‍‍ರ್‍‍ಸ್ಪೋರ್ಟ್ಸ್ ಬೈಕ್‍ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ.

By Rahul Ts

ಆಸ್ಟ್ರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕೆಟಿಎಮ್ ತಮ್ಮ ಆರ್‍‍ಸಿ 200 ಸೂಪ‍‍ರ್‍‍ಸ್ಪೋರ್ಟ್ಸ್ ಬೈಕ್‍ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದ್ದು, ಈಗಾಗಲೆ ಬಿಳಿ ಬಣ್ಣದಲ್ಲಿ ದೊರೆಯುತ್ತಿರುವ ಈ ಬೈಕ್ ಇನ್ಮುಂದೆ ಕಪ್ಪು ಬಣ್ಣದಲ್ಲಿಯೂ ಕೂಡಾ ಖರೀದಿಗೆ ಲಭ್ಯವಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ದೆಹಲಿಯ ಎಕ್ಸ್ ಶೋರಂ ಪ್ರಕಾರ ಕಪ್ಪು ಬಣ್ಣದ ಆರ್‍‍ಸಿ 200 ಬೈಕಿನ ಬೆಲೆಯನ್ನು ರೂ. 1.77 ಲಕ್ಷಕ್ಕೆ ನಿಗಧಿಪಡಿಸಲಾಗಿದ್ದು, ಆರ್‍‍ಸಿ 390 ಬೈಕಿನ ಕಲರ್ ಸ್ಕೀಮ್ ಅನ್ನು ಹೋಲುತ್ತದೆ. ಆದ್ರೆ ಈ ಬೈಕಿನಲ್ಲಿ ಆರಂಜ್ ಮತ್ತು ಬಿಳಿಬಣ್ಣದ ಪಟ್ಟಿಯನ್ನು ಅದಲು ಬದಲು ಮಾಡಲಾಗಿದೆ. ಮತ್ತು ಈ ಬೈಕ್ ಟೈಲ್‍‍ಭಾಗವನ್ನು ಬಿಳಿ ಬಣ್ಣದ ಗ್ರಾಫಿಕ್ಸ್ ಅನ್ನು ಪಡೆದಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಹೊಸ ಬಣ್ಣವನ್ನು ಹೊರತು ಪಡಿಸೆ ಬೇರೆಲ್ಲಾ ವೈಶಿಷ್ಟ್ಯಗಳು ಹಾಗೆಯೆ ಇರಲಿದ್ದು, ತಾಂತ್ರಿಕವಾಗಿ 199.5 ಸಿಸಿ ಲಿಕ್ವಿದ್ ಕೂಲ್ಡ್, ಸಿಂಗಲ್ ಸಿಲೆಂಡರ್ ಏಂಜಿನ್ ಸಹಾಯದಿಂದ 25ಬಿಹೆಚ್‍‍ಪಿ ಮತ್ತು 19.2 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಕೆಟಿಎಮ್ ಆರ್‍‍ಸಿ 200 ಬೈಕ್ ಅಪ್‍‍ಸೈಡ್ ಡೌನ್ ಫೋರ್ಕ್ಸ್ ನ್ನು ಮುಂಭಾಗದಲ್ಲಿ ಪಡೆದಿದ್ದು, ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅನ್ನು ಪಡೆದುಕೊಂಡಿದೆ. ಬೈಕಿನ ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು, ಭಾರತೀಯ ಮಾರುಕಟ್ಟೇಯಲ್ಲಿ ಲಭ್ಯವಿರುವ ಈ ಬೈಕ್ ಎಬಿಎಸ್ ಅನ್ನು ಕಳೆದುಕೊಂಡಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಕೆಟಿಎಮ್ ಆರ್‍‍ಸಿ 200 ಬೈಕ್ ಪ್ರೀಮಿಯಮ್ ಫೀಚರ್‍‍ಗಳನ್ನು ಪಡೆದುಕೊಂಡಿದೆ, ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಕಿಲ್ ಆನ್ ಹ್ಯಾಂಡಲ್‍‍ಬಾರ್ ಪಡೆದಿದ್ದು, ಎಕ್ಸಾಸ್ಟ್ ಅನ್ನು ಸೀಟ್‍‍ನ ಕೆಳಗೆ ಅಳವಡಿಸಲಾಗಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

2017ರ ಕೆಟಿಎಮ್ ಆರ್‍‍ಸಿ 200 ಬೈಕಿನ ಕಪ್ಪು ಬಣ್ಣದ ವೇರಿಯಂಟ್‍‍ನ ಖರೀದಿಗಾಗಿ ಗ್ರಾಹಕರು ನಿಮ್ಮ ಹತ್ತಿರದ ಕೆಟಿಎಮ್ ಅಧಿಕೃತ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಕೆ.ಟಿ.ಎಂ ಆರ್‍‍ಸಿ 200 ರೇಸ್-ಬ್ರೀಡ್ ಬೈಕ್‍‍ಗಳಾಗಿದ್ದು, ಕೆಟಿಎಂ ಆರ್‍‍ಸಿ 200 ಸಂಸ್ಥೆಯಲ್ಲಿ ಬಂಡವಾಳದ ಮಹತ್ವದ ಭಾಗವನ್ನು ಹೊಂದಿದೆ ಮತ್ತು ನಾವು ನಮ್ಮ ಗ್ರಾಹಕರನ್ನು ಹೆಚ್ಚುವರಿಯಾಗಿ ವಿಸ್ತರಿಸಲುಕಪ್ಪು ಬಣ್ಣದ ಕೆಟಿಎಮ್ ಆರ್‍‍ಸಿ 200 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದೇವೆ ಎಂದು ಬಜಾಜ್ ಆಟೊ ಸಂಸ್ಥೆಯ ಅಮಿತ್ ನಂದಿ ಹೇಳಿಕೊಂಡಿದ್ದಾರೆ.

ಕೆಟಿಎಮ್ ಆರ್‍‍ಸಿ 200 ಬೈಕ್ ಈಗ ಹೊಸ ಬಣ್ಣದಲ್ಲಿ ಲಭ್ಯ..

ಕೆಟಿಎಮ್ ಸಂಸ್ಥೆಯು ಕಪ್ಪು ಬಣ್ಣದ ಆರ್‍‍ಸಿ 200 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಬಿಳಿ ಬಣ್ಣದ ಆರ್‍‍ಸಿ 200 ಬೈಕ್‍‍ಗಿಂತ ಕಪ್ಪು ಬಣ್ಣದ ಆರ್‍‍ಸಿ 200 ಬೈಕ್ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿದ್ದು ಎಂಟ್ರಿ ಲೆವೆಲ್ ಟ್ರಾಕ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, June 21, 2018, 13:43 [IST]
English summary
KTM RC 200 Black Colour Variant Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+