ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್
ಇದೇ ಮೊದಲ ಬಾರಿಗೆ ಕವಾಸಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೇ ನಿರ್ಮಾಣ ಮಾಡಿ ಬಿಡುಗಡೆ ಮಾಡಿದೆ.
ಇದೇ ಮೊದಲ ಬಾರಿಗೆ ಕವಾಸಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲೇ ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದು, ಬೈಕ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ.

ಕವಾಸಕಿ ಬಿಡುಗಡೆ ಮಾಡಿರುವ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು ಕ್ರಮವಾಗಿ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.12.80 ಲಕ್ಷ ಮತ್ತು ರೂ. 16.10 ಲಕ್ಷ ಬೆಲೆ ಹೊಂದಿದ್ದು, ಹೊಸ ಬೈಕ್‌ಗಳ ಖರೀದಿಗಾಗಿ ಇದೀಗ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಲಿಮಿಟೆಡ್ ಎಡಿಷನ್ ಹಿನ್ನೆಲೆ ಜುಲೈ ಅಂತ್ಯದ ತನಕ ಮಾತ್ರ ಬುಕ್ಕಿಂಗ್‌ಗೆ ಅವಕಾಶವಿದ್ದು, ತದನಂತರವಷ್ಟೇ ಹೊಸ ಬೈಕ್‌ಗಳ ಉತ್ಪಾದನಾ ಪ್ರಕ್ರಿಯೆ ಆರಂಭವಾಗಲಿದೆ.

ಹೀಗಾಗಿ ಆಸಕ್ತ ಗ್ರಾಹಕರಿಗೆ ಕಳೆದ 2 ತಿಂಗಳಿನಿಂದಲೇ ಬುಕ್ಕಿಂಗ್‌ಗೆ ಅವಕಾಶ ನೀಡಿರುವ ಕವಾಸಕಿ ಇಂಡಿಯಾ ಸಂಸ್ಥೆಯು ಲೋಕಲ್ ಅಸೆಂಬ್ಲಿ ಪ್ರೇರಣೆಯ ಹೊಸ ಬೈಕ್‌ಗಳನ್ನು ಪರಿಚಯಿಸುತ್ತಿರುವುದಾಗಿ ಹೇಳಿಕೊಂಡಿತ್ತು.

ಹೊಸ ಬೈಕ್‌ಗಳ ಎಂಜಿನ್ ಸಾಮರ್ಥ್ಯ
ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು 998ಸಿಸಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಫೌರ್ ಸಿಲಿಂಡರ್ ಎಂಜಿನ್ ಹೊಂದಿದ್ದು, 197-ಬಿಎಚ್‌ಪಿ ಮತ್ತು 113.4-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಜೊತೆಗೆ ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಎಂಜಿನ್ ವಿಭಾಗದಲ್ಲಿ ಎರಡು ಮಾದರಿಗಳು ಒಂದೇ ಆಗಿದ್ದರೂ ಬೈಕಿನಲ್ಲಿ ನೀಡಲಾಗಿರುವ ಕೆಲವು ಐಷಾರಾಮಿ ಫಿಚರ್ಸ್‌ಗಳು ಭಿನ್ನತೆಯನ್ನು ಹೊಂದಿವೆ ಎನ್ನಬಹುದು.

ಬೈಕಿನ ವೈಶಿಷ್ಟ್ಯತೆಗಳು
ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳಲ್ಲಿ ಕವಾಸಕಿ ಲಾಂಚ್ ಕಂಟ್ರೊಲರ್, ಕವಾಸಕಿ ಟ್ರಾನ್ಷನ್ ಕಂಟ್ರೊಲರ್, ಕವಾಸಕಿ ಬ್ರೇಕಿಂಗ್ ಕಂಟ್ರೊಲರ್, ಕ್ವಿಕ್ ಶಿಫ್ಟರ್, ಕಾರ್ನರ್ ಮ್ಯಾನೆಜ್‌ಮೆಂಟ್ ಫಂಕ್ಷನ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯ ಹೊಂದಿವೆ.

ನಿಂಜಾ ಜೆಡ್ಎಕ್ಸ್-10ಆರ್ ಮಾದರಿಗಳಲ್ಲಿ ಕೆಆರ್‌ಟಿ ವೆರಿಯೆಂಟ್ ಖರೀದಿಗೆ ಲಭ್ಯವಿದ್ದು, ಗ್ರೀನ್ ಬಣ್ಣದ ಪೇಂಟ್ ಸ್ಕೀಮ್ ಹೊಂದಿದೆ. ಹಾಗೆಯೇ ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳು ಸಹ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ 3 ವಿವಿಧ ವೆರಿಯೆಂಟ್‌ಗಳ ಜೊತೆ ಜೊತೆಗೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿವೆ.

ಈ ಬಗ್ಗೆ ಮಾತನಾಡಿರುವ ಕವಾಸಕಿ ಇಂಡಿಯಾ ಎಂಡಿ ಯುಟಾಕಾ ಯಮಾಶಿಟ್ ಅವರು 'ಹೊಸ ಬೈಕ್‌ಗಳು ವಿಶಿಷ್ಟವಾದ ಎಂಜಿನಿಯರಿಂಗ್ ಪರಂಪರೆಯನ್ನು ಹೊಂದಿದ್ದು, ಹೊಸದಾಗಿ ಸ್ಥಾಪಿಸಲಾದ ಆರ್ & ಡಿ ಹೊಸ ನಿಂಜಾ ಸ್ಥಳೀಯ ಉತ್ಪನ್ನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ.

ಹೀಗಾಗಿಯೇ ದುಬಾರಿ ಬೆಲೆಯ ನಿಂಜಾ ಜೆಡ್ಎಕ್ಸ್-10ಆರ್ ಮತ್ತು ಜೆಡ್ಎಕ್ಸ್-10ಆರ್‌ಆರ್ ಬೈಕ್‌ಗಳನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಲು ಯಶಸ್ವಿಯಾಗಿರುವ ಕವಾಸಕಿ ಸಂಸ್ಥೆಯು ಸೂಪರ್ ಬೈಕ್ ಮಾರಾಟದಲ್ಲಿ ಸುಜುಕಿ, ಬಿಎಂಡಬ್ಲ್ಯು, ಯಮಹಾ ಮತ್ತು ಹೋಂಡಾ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡಲಿದೆ.


Click it and Unblock the Notifications








