ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಬೈಕ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಸೂಪರ್ ಬೈಕ್‌ಗಳ ನಿರ್ಮಾಣದತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಮೊದಲ ಹಂತದಲ್ಲೇ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಈ ಬಗ್ಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಮುನ್ಸೂಚನೆ ನೀಡಿದ್ದು, ಎಲ್ಲಾ ಮಾದರಿಯ ಪ್ರದೇಶಗಳಲ್ಲೂ ಸರಾಗ ಚಾಲನೆಗೆ ಅನುಕೂಲಕರವಾಗುವಂತೆ ಹೊಸ ಬೈಕ್ ಅಭಿವೃದ್ಧಿ ಮಾಡಿರುವ ಬಗ್ಗೆ ಸೂಚನೆ ನೀಡಿದೆ.

Recommended Video - Watch Now!
2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಇದಲ್ಲದೇ ಮಹೀಂದ್ರಾ ನಿರ್ಮಾಣ ಮಾಡಿರುವ ಮೊಜೊ ಯುಟಿ300 ಬೈಕ್‌ಗಳು ಈಗಾಗಲೇ ಡೀಲರ್ಸ್ ಯಾರ್ಡ್ ಕೂಡಾ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ತಲುಪಲಿದೆ. ಈ ಮೂಲಕ ಜನಪ್ರಿಯ ಬಜಾಜ್ ಡೋಮಿನಾರ್ 400 ಹಿಂದಿಕ್ಕುವ ತವಕದಲ್ಲಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಹೀಗಾಗಿ ಮಹೀಂದ್ರಾ ಬಿಡುಗಡೆ ಮಾಡಲಿರುವ ಮೊಜೊ ಯುಟಿ300 ಮಾದರಿಯು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಈ ಹಿಂದಿನ ಯುಟಿ300 ಮಾದರಿಗಿಂತ ಹೆಚ್ಚುವರಿ ಗುಣಮಟ್ಟದ ಬಾಹ್ಯ ವಿನ್ಯಾಸಗಳನ್ನು ಹೊಂದಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಜೊತೆಗೆ ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಮೊಜೊ ಯುಟಿ300 ಬೈಕ್ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಬೈಕ್ ಮುಂಭಾಗದಲ್ಲಿ ನೀಡಲಾಗಿರುವ ಕರ್ನವರ್ಷನಲ್ ಟೆಲಿಸ್ಕೋಪಿಕ್ ಪೋರ್ಕ್ಸ್, ಫ್ಯೂಲ್ ಇಂಜಕ್ಷನ್ ಟೆಕ್ನಾಲಜಿ ಜೋಡಣೆ ಮಾಡಲಾಗಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಇನ್ನು ಮಹೀಂದ್ರಾ ಸಿದ್ದಪಡಿಸಿರುವ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಕಡಿಮೆ ದರಕ್ಕೆ ಲಭ್ಯವಾಗಲಿದ್ದು, ಈ ಹಿನ್ನೆಲೆ ಕೆಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಕೈ ಬಿಡಲಾಗಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಈ ಮೂಲಕ ಅಗ್ಗದ ಬೆಲೆಯಲ್ಲೇ ಉತ್ತಮ ಬೈಕ್ ಸಿದ್ದಪಡಿಸುವಲ್ಲಿ ವಿನೂತನ ಪ್ರಯತ್ನ ಮಾಡಿರುವ ಮಹೀಂದ್ರಾ ಸಂಸ್ಥೆಯು ಎಂಆರ್‌ಎಫ್ ಟೈರ್, ರಿ ಡಿಸೈನ್ ಸೀಟುಗಳು ಮತ್ತು ರೆಟ್ರೋ ಲುಕ್ ಮಾದರಿಯ ಹೆಡ್ ಲ್ಯಾಂಪ್‌ಗಳು ಸೂಪರ್ ಬೈಕ್ ಸವಾರರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿವೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

295-ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಮೊಜೊ ಯುಟಿ300 ಬೈಕ್ ಮಾದರಿಯು 27-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು ಎಂದು ಮಹೀಂದ್ರಾ ಹೇಳಿಕೊಂಡಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಬೆಲೆ (ಎಕ್ಸ್ ಶೋರಂ ಪ್ರಕಾರ)

ಮೊಜೊ ಯುಟಿ300 ಬೈಕ್ ಬೆಲೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲ ಮೂಲಗಳ ಪ್ರಕಾರ ಹೊಸ ಬೈಕ್ ಮಾದರಿಯು ರೂ.1.4 ಲಕ್ಷದಿಂದ ರೂ.1.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಡೋಮಿನಾರ್ 400 ಪ್ರತಿಸ್ಪರ್ಧಿಯಾಗುತ್ತಾ?

ಒಂದು ವೇಳೆ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಮೊಜೊ ಯುಟಿ300 ಮಾದರಿಯು ಡೋಮಿನಾರ್ 400 ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300 ಟೀಸರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಸಂಪೂರ್ಣ ಮುಗ್ಗರಿಸಿದ್ದ ಮಹೀಂದ್ರಾ ಸದ್ಯ ಮೊಜೊ ಯುಟಿ300 ಮೂಲಕ ಮತ್ತೆ ಹೊಸ ಅಧ್ಯಾಯ ಶುರು ಮಾಡುವ ತವಕದಲ್ಲಿದ್ದು, ಫೆಬ್ರುವರಿ ಮೊದಲ ವಾರ ಇಲ್ಲವೇ ಮಾರ್ಚ್‌ನಲ್ಲಿ ಹೊಸ ಬೈಕ್ ಬಿಡುಗಡೆಯಾಗುವುದು ನಿಶ್ಚಿತವಾಗಿದೆ.

Kannada
Read more on mahindra mojo
English summary
Mahindra Mojo UT300 Teased Ahead Of Launch.
Story first published: Friday, March 2, 2018, 14:30 [IST]
ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more