ಹೊಸ ಆಫ್ರಿಕನ್ ಟ್ವಿನ್ ಅಡ್ವೆಂಚರ್ ಬೈಕ್‍ಗಾಗಿ ಬುಕ್ಕಿಂಗ್ ಶುರು ಮಾಡಿದ ಹೋಂಡಾ..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಈ ಹಿಂದೆಯೆ ತಮ್ಮ ಆಫ್ರಿಕಾ ಟ್ವಿನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಈ ಹಿಂದೆಯೆ ತಮ್ಮ ಆಫ್ರಿಕಾ ಟ್ವಿನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇದೀಗ ಮತ್ತೊಮ್ಮೆ ಮುಂದಿನ ತಲೆಮಾರಿನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಇದೇ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿರುವ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಈ ಹಿಂದೆ ಬಿಡುಗಡೆಗೊಂಡ ಪ್ರಸ್ಥುತ ತಲೆಮಾರಿನ ಆಫ್ರಿಕಾ ಬೈಕ್‍ನಂತೆಯೆ ಸೀಮಿತ ಸಂಖ್ಯೆಯಲ್ಲಿ ಕೇವಲ 50 ಮಂದಿ ಗ್ರಾಹಕರು ಮಾತ್ರ ಬುಕ್ಕಿಂಗ್ ಮಾಡಬಹುದಾಗಿದೆ.

ಹೊಸ ಆವೃತ್ತಿಯ ಹೋಂಡಾ ಆಫ್ರಿಕ ಟ್ವಿನ್ ಬೈಕ್ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 13.23 ಲಕ್ಷಕ್ಕೆ ನಿಗಧಿಪಡಿಸಲಾಗಿದೆ. ಗ್ರಾಹಕರು ಈ ಬೈಕ್ ಖರೀದಿಗಾಗಿ ದೇಶದಲ್ಲಿನ ಪ್ರಸ್ಥುತ 22 'ಹೋಂಡಾ ವಿಂಗ್ ವರ್ಲ್ಡ್' ಡೀಲರ್‍ಗಳ ಹತ್ತಿರ ಬುಕ್ಕಿಂಗ್ ಮಾಡಬಹುದಾಗಿದ್ದು, ಜೊತೆಗೆ ಆಯ್ಕೆಯಾದ ಗ್ರಾಹಕರು ಮೋಟೊ ಜಿಪಿ ರೇಸ್ ಅನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶವನ್ನು ಕೂಡ ಪಡೆಯಲಿದ್ದಾರೆ.

ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍ಗಳು ಭಾರತಕ್ಕೆ ಕಂಪ್ಲೀಟ್ಲಿ ನೇಕ್ಡ್ ಡೌನ್ ಯೂನಿಟ್ ಮುಖಾಂತರ ಬರಲಿದ್ದು, ನಂತರ ಭಾರತದಲ್ಲಿನ ಪ್ಲಾಂಟ್‍ನಲ್ಲಿ ತಯಾರಿಸಲಾಗುತ್ತದೆ. ಆದರೆ ಭಾರತಕ್ಕೆ ಎಷ್ಟು ಸೀಮಿತ ಕೇವಲ 50 ಬೈಕ್‍ಗಳು ಮಾತ್ರ ಬರಲಿದೆ.

ಮುಂದಿನ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಹಳೆಯ ಮಾದರಿಗಿಂತ ಕೊಂಚ ಬದಲಾವಣೆಗಳನ್ನು ಕಂಡಿದೆ. ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಇನ್ಸ್ಟ್ರೂಮೆಂಟ್ ಡಿಸ್ಪ್ಲೇಯ ಸ್ಥಾನವನ್ನು ಬದಲಾಯಿಸಲಾಗಿದ್ದು, ಇದು ಫುಟ್ ಪೆಗ್‍ನ ಮೇಲೆ ನಿಂತಿರುವಾಗ ಉತ್ತಮವಾದ ನೋಟವನ್ನು ನೀಡಲು ಸಹಕರಿಸುತ್ತವೆ.

ಪ್ರಸ್ಥುತ ತಲೆಮಾರಿನ ಆಫ್ರಿಕಾ ಬೈಕ್‍ನಂತೆಯೆ ಹೊಸ ಹೋಂಡಾ ಅಫ್ರಿಕಾ ಟ್ವಿನ್ ಬೈಕ್ 998ಸಿಸಿ ಪ್ಯಾರಲಲ್ ಟ್ವಿನ್ ಏಂಜಿನ್ ಅನ್ನು ಪಡೆದುಕೊಂಡಿದೆ. ಆದರೆ ಹೊಸ ಬೈಕ್ ಉದ್ದವಾದ ಏರ್‍ಬಾಕ್ಸ್ ಪಡೆದುಕೊಂಡಿದ್ದು, ಜೊತೆಗೆ ಹಗುರವಾದ ಬ್ಯಾಲೆನ್ಸರ್ ಶಾಫ್ಟ್ ಅನ್ನು ಪಡೆದಿದೆ.

ಪ್ರಸ್ಥುತ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಬೈಕ್‍ಗಳು 998ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 81ಬಿಹೆಚ್‍ಪಿ ಮತ್ತು 92ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಆಫ್ರಿಕಾ ಟ್ವಿನ್ ಬೈಕ್ 4 ರೈಡಿಂಗ್ ಮೋಡ್ ಮತ್ತು ಏಳು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆದಿದ್ದು, ಬ್ರಿಡ್ಜ್ ಸ್ಟೋನ್ ಟೈರ್ಸ್, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 256ಎಂಎಂ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

ಇದು ಮಾತ್ರವಲ್ಲದೆ ಎಲ್ಇಡಿ ಹೆಡ್‍ಲ್ಯಾಂಪ್ಸ್, ಟೈಲ್ ಗೇಟ್ಸ್ ಮತ್ತು ಟರ್ನ್ ಇಂಡಿಕೇಟರ್‍ಗಳನ್ನು ಪಡೆದಿದ್ದು, ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಹೋಂಡಾದ ಸೆಲೆಕ್ಟಿಬಲ್ ಟಾರ್ಕ್ ಕಂಟ್ರೋಲ್, ಎಬಿಎಸ್, ಯೂನಿಕ್ ಇನ್ಕ್ಲೈನ್ ಡಿಟೆಕ್ಷನ್ ಫೀಚರ್ ಮತ್ತು ಟ್ರಾಕ್ಷನ್ ಅನ್ನು ಅಭಿವೃದ್ದಿಗೊಳಿಸಲು 'ಜಿ-ಸ್ವಿಚ್' ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಆಫಿಕನ್ ಟ್ವಿನ್ ಬೈಕ್‍ಗಳು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಟ್ರಯಂಫ್ ಟೈಗರ್, ಡುಕಾಟಿ ಮಲ್ಟಿಸ್ಟ್ರಾಡಾ 950 ಮತ್ತು ಬಿಎಮ್‍ಡಬ್ಲ್ಯೂ ಆರ್1200ಜಿಎಸ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








