2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ತನ್ನ ವಿನೂತನ ಕ್ಲಾಸಿಕ್ ಬೈಕ್ ಮಾದರಿಯಾದ 350 ಸ್ಪೆಷಲ್ ಎನ್ನುವ ಬೈಕ್ ಮಾದರಿಯೊಂದನ್ನು ಬಹಿರಂಗಗೊಳಿಸಿದೆ.

By Praveen Sannamani

ಮೊಟ್ಟ ಮೊದಲ ಬಾರಿಗೆ ಬಿಎಸ್ಎ ಮೋಟಾರ್ ಸೈಕಲ್ ಉತ್ಪಾದನಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಜೊತೆಗೂಡಿ ಕ್ಲಾಸಿಕ್ ಬೈಕ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದು, ಈ ಮಧ್ಯೆ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ತನ್ನ ವಿನೂತನ ಕ್ಲಾಸಿಕ್ ಬೈಕ್ ಮಾದರಿಯಾದ 350 ಸ್ಪೆಷಲ್ ಎನ್ನುವ ಬೈಕ್ ಮಾದರಿಯೊಂದನ್ನು ಬಹಿರಂಗಗೊಳಿಸಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಈ ಹಿಂದೆ 2016ರಲ್ಲಿ ಮಹೀಂದ್ರಾ ಸಂಸ್ಥೆಯು ಕ್ಲಾಸಿಕ್ ಲೆಜೆಂಡ್ ಪ್ರವೈಟ್ ಲಿಮಿಟೆಡ್‌‌ನ(ಬಿಎಸ್ಎ) ಶೇ.60ರಷ್ಟು ಷೇರು ಖರೀದಿ ಮಾಡುವ ಮೂಲಕ ವಿನೂತನ ಮಾದರಿಯ ಕ್ಲಾಸಿಕ್ ಬೈಕ್ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದು, ಬಿಎಸ್ಎ ಅಧೀನ ಸಂಸ್ಥೆಯಾಗಿರುವ ಜಾವಾ ಸಂಸ್ಥೆ ಕೂಡಾ ಮಹೀಂದ್ರಾ ಜೊತೆ ಒಟ್ಟಾಗಿ ಭಾರತದಲ್ಲಿ ತನ್ನ ದ್ವಿಚಕ್ರ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಜನೆಗೆ ಚಾಲನೆ ನೀಡಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಅಂದರೇ, ಜಾವಾ ಸಂಸ್ಥೆಯು ನಿರ್ಮಾಣ ಮಾಡುವ ಬೈಕ್‌ಗಳನ್ನು ಮಾರಾಟ ಮಾಡುವ ಹಕ್ಕು ಬಿಎಸ್‌ಎ ಸಂಸ್ಥೆಯ ಬಳಿಯಿದ್ದು, ಇದೀಗ ಬಿಎಸ್ಎ ಸಂಸ್ಥೆಯೇ ಮಹೀಂದ್ರಾ ಅಧೀನದಕ್ಕೆ ಬಂದ ಹಿನ್ನೆಲೆ ಜಾವಾ ಸಂಸ್ಥೆಯು ಕೂಡಾ ಮಹೀಂದ್ರಾ ಅಧೀನದಲ್ಲೇ ಕಾರ್ಯನಿರ್ವಹಿಸಲಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಇಷ್ಟು ದಿನಗಳ ಕಾಲ ಬಿಎಸ್ಎ ಸಂಸ್ಥೆಯ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕ್ಲಾಸಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾವಾ ಸಂಸ್ಥೆಯು ಇದೀಗ ಅತಿ ದೊಡ್ಡ ಆಟೋ ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಜೊತೆಗೂಡಿ ಅಗ್ಗದ ಬೆಲೆಯಲ್ಲಿ ಕ್ಲಾಸಿಕ್ ಬೈಕ್‌ಗಳನ್ನು ಪರಿಚಯಿಸುವ ತವಕದಲ್ಲಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಈ ಮಧ್ಯೆ ಯುರೋಪ್ ಮಾರುಕಟ್ಟೆಗಳಲ್ಲಿ 350 ಸ್ಪೆಷಲ್ ಎನ್ನುವ ಐಷಾರಾಮಿ ಕ್ಲಾಸಿಕ್ ಬೈಕ್‌ ಅನ್ನು ಅಭಿವೃದ್ಧಿಗೊಳಿಸಿ ಅನಾವರಣ ಮಾಡಿರುವ ಜಾವಾ ಸಂಸ್ಥೆಯು ರೆಟ್ರೋ ಮಾದರಿಯ ಬೈಕ್ ಮೂಲಕ ಗ್ರಾಹಕನ್ನು ಸೆಳೆಯುತ್ತಿದ್ದು, ಇದು ಈ ಹಿಂದಿನ 350 ಓಹೆಚ್‍‌ಸಿ ಮಾದರಿಯಲ್ಲೇ ಹೊಸ ಬೈಕ್ ಅನ್ನು ನಿರ್ಮಾಣ ಮಾಡಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ನೂತನ 350 ಸ್ಪೆಷಲ್ ಬೈಕ್‌ಗಳು ಯುರೋಪ್‌ನ ಝೆಕ್ ಉತ್ಪಾದಕರಿಂದ ಸಿದ್ದವಾದ ಮೂರನೇ ಮೋಟಾರ್ ಸೈಕಲ್ ಆವೃತ್ತಿಯಾಗಿದ್ದು, ಕ್ಲಾಸಿಕ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಪೈಪ್‌ಗಳು, ರೌಂಡ್ ಹೆಡ್ಲ್ಯಾಂಪ್ ಮತ್ತು ಬೈಕಿನ ಕ್ರೋಮ್‌‌ಗಳು ಬಹಳಷ್ಟು ವೈಶಿಷ್ಟ್ಯತೆಗಳನ್ನು ಪಡೆದಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಇನ್ನು ಬೈಕು ಹಿಂಭಾಗದ ಕೊನೆಯಲ್ಲಿ ಒಂದು ಫ್ಲಾಟ್ ಸೀಟ್ ಮತ್ತು ಬಮ್ ಸ್ಟಾಪ್‌ನೊಂದಿಗೆ ಕೆಫೆ ರೇಸರ್‌ನಂತೆ ವಿನ್ಯಾಸಗೊಳಿಸಲಾಗಿದ್ದು, ಒಟ್ಟಾರೆ ಜಾವಾ 350 ಸ್ಪೆಷಲ್ ಕ್ಲಾಸಿಕ್ ಬೈಕ್‌ಗಳು ಆಧುನಿಕ ಯುಗದ ವಿಶೇಷ ಮೋಟಾರ್ ಸೈಕಲ್ ಮಾದರಿಯಾಗಲಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಜಾವಾ 350 ಸ್ಪೆಷಲ್ ಬೈಕ್‌ಗಳು 277-ಬಿಎಚ್‌ಪಿ ಮತ್ತು 30.6-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ 397 ಸಿಸಿ ಸಮಾನಾಂತರ ಅವಳಿ ಎಂಜಿನ್ ಹೊಂದಿದ್ದು, ಇದೇ ಎಂಜಿನ್ ಅನ್ನು ಜಾವಾ 350 OHC ನಲ್ಲೂ ಬಳಕೆ ಮಾಡಲಾಗಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜಾವಾ ಸಂಸ್ಥೆಯು 350 ಸ್ಪೆಷಲ್ ಬೈಕ್‌ಗಳಲ್ಲಿ ಬಳಕೆ ಮಾಡುತ್ತಿರುವ ಎಂಜಿನ್‌ಗಳು ಚೀನಾದ ಮೂಲದ ಶಿನ್ರೇ ಸಿದ್ದಗೊಳಿದ್ದು, ಫ್ಯೂಲ್ ಇಂಜೆಕ್ಷನ್ ಸಿಸ್ಟಂಗಳನ್ನು ಡೆನ್ಫಿ ಸಂಸ್ಥೆಯಿಂದ ಎರವಲು ಪಡೆಯಲಾಗಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಈ ಮೂಲಕ ಯುರೋ 6 ವೈಶಿಷ್ಟ್ಯತೆಗಳೊಂದಿಗೆ ಸಿದ್ದವಾಗಿರುವ ಈ ಬೈಕ್ ಬರೋಬ್ಬರಿ 171 ಕೆ.ಜಿ ತೂಕ ಪಡೆದುಕೊಂಡಿದ್ದು, 17 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಜೊತೆಗೆ ಯುರೋ 6 ವಿನ್ಯಾಸದಿಂದಾಗಿ ಮಾಲಿನ್ಯ ಹೊರಸೂಸುವಿಕೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಸುರಕ್ಷೆಗಾಗಿ ಎಬಿಎಸ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಆದ್ರೆ ಜಾವಾ ಸಂಸ್ಥೆಯು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ತರುವ ಸಾಧ್ಯತೆ ಕಡಿಮೆ ಇದ್ದು, ತನ್ನ ಮತ್ತೆರಡು ಕ್ಲಾಸಿಕ್ ಬೈಕ್ ಮಾದರಿಗಳಾದ 350 OHC ಮತ್ತು 660 ವಿಂಟೇಜ್ ಬೈಕ್‌ಗಳನ್ನು ಮಹೀಂದ್ರಾ ಜೊತೆಗೂಡಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಈಗಾಗಲೇ ಜಾರಿಯಲ್ಲಿದೆ.

2018ರ ಜಾವಾ 350 ಸ್ಪೆಷಲ್ ಎಡಿಷನ್ ಭಾರತದಲ್ಲೂ ಬಿಡುಗಡೆಯಾಗುತ್ತಾ?

ಜೊತೆಗೆ ಬೈಕ್ ಉತ್ಪಾದನೆಯಲ್ಲಿ ತನ್ನದೇ ಬ್ರಾಂಡ್ ಸೃಷ್ಠಿಸಿರುವ ಜಾವಾ ಸಂಸ್ಥೆಯು ಈ ಹಿಂದೆಯೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೈಕ್ ಮಾದರಿಗಳನ್ನು ಪರಿಚಯಿಸಿ ಕಾರಣಾಂತರಗಳಿಂದ ದೇಶಿಯ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ತದನಂತರ ಬಿಎಸ್ಎ ಸಂಸ್ಥೆಯ ಜೊತೆ ಕೈಜೋಡಿಸಿದಲ್ಲದೇ ಇದೀಗ ಪುನಃ ಮಹೀಂದ್ರಾ ಮೂಲಕ ಭಾರತಕ್ಕೆ ವಾಪಸ್ ಬರುತ್ತಿದ್ದು, ಕ್ಲಾಸಿಕ್ ಬೈಕ್ ಪರಂಪರೆಯಲ್ಲಿ ಮತ್ತೊಮ್ಮೆ ಸದ್ದು ಮಾಡುವ ತವಕದಲ್ಲಿದೆ.

Most Read Articles

Kannada
Read more on auto news mahindra
English summary
2018 Jawa 350 Special Revealed In Europe.
Story first published: Wednesday, May 9, 2018, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X