ಬಿಡುಗಡೆಗೊಂಡ ಕವಾಸಕಿ ನಿಂಜಾ ಸರಣಿಯ ಮತ್ತೊಂದು ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತನ್ನ 2019ರ ನಿಂಜಾ 1000 ಬೈಕ್ ಅನ್ನು ಬುಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ತನ್ನ 2019ರ ನಿಂಜಾ 1000 ಬೈಕ್ ಅನ್ನು ಬುಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಳೆಯ ಮಾದರಿಗಿಂತ ಹೊಸ ನಿಂಜಾ 100 ಬೈಕ್ ವಿನ್ಯಾಸದಲ್ಲಿ ನವೀಕರಣವನ್ನು ಪಡೆದುಕೊಂಡಿದೆ.

2019ರ ನಿಂಜಾ 1000 ಬೈಕ್ ಔಟ್‍ಗೋಯಿಂಗ್ ಮಾಡಲ್‍ನ ಸ್ಥಾನವನ್ನು ಭರ್ತಿ ಮಾಡಲಿದ್ದು, ಮೇಲೆ ಹೇಳಿರುವ ಹಾಗೆ ಕೇವಲ ವಿನ್ಯಾಸದಲ್ಲಿ ಮಾತ್ರ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್ ಕೇವಲ ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಕವಾಸಕಿ ನಿಂಜಾ 1000 ಬೈಕ್ ಅನ್ನು ಸೆಮಿ ಕ್ನಾಕ್ಡ್ ಡೌನ್ ಯೂನಿಟ್ ಮುಖಾಂತರ ಭಾರತಕ್ಕೆ ಆಮದು ಮಾಡಲಾಗಿದ್ದು, ಬೈಕಿನ ಇನ್ನಿತರೆ ಉಪಕರಣಗಳನ್ನು ಪುಣೆಯಲ್ಲಿನ ಪ್ಲ್ಯಾಂಟ್‍ನಲ್ಲಿ ಒಟ್ಟುಗೂಡಿಸಲಾಗುತ್ತದೆ.

ನಾವು ನಮ್ಮ ಪಾಲುದಾರರಿಗೆ ಸಂತೋಷದ ವಿಷಯವನ್ನು ತಿಳಿಸಲು ಇಚ್ಛಿಸುತ್ತೇವೆ. 2019ರ ನಿಂಜಾ 1000 ಬೈಕ್ ಇನ್ನಿತರೆ ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ವೇಳೆಯಲ್ಲೆ ಭಾರತೀಯ ಮಾರಕಟ್ಟೆಯಲ್ಲಿಯು ಬಿಡುಗಡೆಗೊಳಿಸಿದ್ದೇವೆ. ದೇಶದ ಮಾರುಕಟ್ಟೆಯಲ್ಲಿ ಗ್ರಾಹಕರು ಕವಾಸಕಿ ನಿಂಜಾ 1000 ಬೈಕ್‍ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಎಂದು ಕವಾಸಕಿ ಇಂಡಿಯಾದ ವ್ಯವಸ್ಥಾಪಕ ನಿರ್ಧೇಶಕರಾದ ಯುಟಕ ಯಮಶಿಟ ಹೇಳಿಕೊಂಡಿದ್ದಾರೆ.

ಪ್ರಯಾಣಿಕರ ಸುರಕ್ಷತೆಗಾಗಿ 2019ರ ಕವಾಸಕಿ ನಿಂಜಾ 1000 ಬೈಕಿನಲ್ಲಿ ಎಬಿಎಸ್ ಮತ್ತು 3 ಸ್ಟೇಜ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಅಳವಡಿಸಲಾಗಿದ್ದು, ಡ್ಯುಯಲ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಚಿನ್ ಸ್ಪಾಯ್ಲರ್ ಮತ್ತು ಸ್ಲಿಪ್ಪರ್ ಕ್ಲಚ್ ಎಂಬ ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಹೊಸ ಕವಾಸಕಿ ನಿಂಜಾ 1000 ಬೈಕ್ 1,043 ಸಿಸಿ ಇನ್-ಲೈನ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 140 ಬಿಹೆಚ್‍ಪಿ ಮತ್ತು 111ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೊಡಿಸಲಾಗಿದೆ.

ಕವಾಸಕಿ ನಿಂಜಾ 1000 ಬೈಕ್ 19 ಲೀಟರ್ ಫ್ಯುಯಲ್ ಟ್ಯಾಂಕ್ ಮತ್ತು 239 ಕೆಜಿ ತೂಕವನ್ನು ಪಡೆದಿದ್ದು, ಮುಂಭಾಗದಲ್ಲಿ ಡ್ಯುಯಲ್ 300ಎಮ್ಎಮ್ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 240ಎಮ್ಎಮ್ ಪೆಟಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ನಿಂಜಾ 1000 ಬೈಕ್ ಮೂರು ವಿವಿದ ಟ್ಯಾಕ್ಷನ್ ಕಂಟ್ರೋಲ್ ಮೋಡ್‍ಗಳನ್ನು ಪಡೆದಿದ್ದು, ಮೊದಲನೆಯ ಎರಡು ಮೋಡ್‍ಗಳು ಸ್ಪೋರ್ಟಿ ರೈಡಿಂಗ್ ಪರ್ಫಾರ್ಮೆನ್ಸ್ ಅನ್ನು ಮತ್ತು ಮೂರನೆಯ ಮೋಡ್ ಬೈಕಿನ ಸ್ಥಿರತೆ ಮತ್ತು ಜಾರು ಮೇಲ್ಮೈಗಳನ್ನು ಅಭಿವೃಧಿಗೊಳಿಸುತ್ತವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೊಸದಾಗಿ ಬಿಡುಗಡೆಗೊಂಡ 2019ರ ಕವಾಸಕಿ ನಿಂಜಾ 1000 ಬೈಕ್ ಹಿಂದಿನ ತಲೆಮಾರಿನ ಮಾಡಲ್‍ಗಿಂತ ವಿನ್ಯಾಸದಲ್ಲಿ ನವೀಕರಣವನ್ನು ಪಡೆದಿದ್ದು, ಮಾರಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಬಿಎಮ್‍ಡಬ್ಲ್ಯೂ ಎಸ್ 1000 ಆರ್, ಸುಜುಕಿ ಜಿಎಸ್‍ಎಕ್ಸ್ ಎಸ್1000 ಮತ್ತು ಡುಕಾಟಿ ಸೂಪರ್‍ಸ್ಪೋರ್ಟ್ ಬೈಕ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಇನ್ನು ಹೊಸ ಬೈಕಿನ ಖರೀದಿಗಾಗಿ ಕವಾಸಕಿ ಸಂಸ್ಥೆಯ ಅಧೀಕೃತ ಡೀಲರ್‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications