ಬಿಡುಗಡೆಗೊಂಡ ಸ್ಥಳಿಯವಾಗಿ ತಯಾರಿಸಲ್ಪಟ್ಟ ಕವಾಸಕಿ ನಿಂಜಾ 300 ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ಸ್ಥಳಿಯವಾಗಿ ಉತ್ಪಾದಿಸಲಾದ ನಿಂಜಾ 300 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಬಾರಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ಸ್ಥಳಿಯವಾಗಿ ಉತ್ಪಾದಿಸಲಾದ ನಿಂಜಾ 300 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಬಾರಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಬಿಡುಗಡೆಗೊಂಡ ಈ ಬೈಕ್‍ನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.98 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಹೊಸ ಕವಾಸಕಿ ನಿಂಜಾ 300 ಎಬಿಎಸ್ ಬೈಕ್ ಹೊಸ ಗ್ರಾಫಿಕ್ಸ್ ಮತ್ತು ಹೊಸ ಬಣ್ಣವನ್ನು ಪಡೆದಿದ್ದು, ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಅನ್ನು ಸ್ಥಳಿಯವಾಗಿ ತಯಾರಿಸಲ್ಪಟ್ಟ ಕಾರಣ ಔಟ್‍ಗೋಯಿಂಗ್ ಮಾಡಲ್‍ಗಿಂರ ದರದಲ್ಲಿ ರೂ. 62,000 ಸಾವಿರ ಕಡಿಮೆಯಿದೆ.

2018ರ ಹೊಸ ಕವಾಸಕಿ ನಿಂಜಾ 300 ಎಬಿಎಸ್ ಲೈ ಗ್ರೀನ್/ಇಬೊನಿ ಮತ್ತು ಕ್ಯಾಂಡಿ ಪ್ಲಾಸ್ಮಾ ಬ್ಲೂ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ. ಇದಲ್ಲದೆ ಬೈಕ್‍ನ ಫೈರಿಂಗ್ ಮೇಲೆ ನಿಂಜಾ ಚಿಹ್ನೆ, ಡ್ಯುಯಲ್ ಹೆಡ್‍ಲ್ಯಾಂಪ್, ಶರ್ಪ್ ಎಂಡ್ ಮತ್ತು ವಿಂಡ್ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಕವಾಸಕಿ ನಿಂಜಾ 300 ಎಮ್‍ಆರ್‍ಎಫ್ ಟೈರ್ ಮತ್ತು ಎಂಡ್ಯೂರನ್ಸ್ ಬ್ರೇಕ್‍ಗಳನ್ನು ಪಡೆದುಕೊಂಡಿದೆ. ಬೈಕಿನ ಸೀಟ್ ಅನ್ನು ಹಳೆಯ ಮಾದರಿಗಿಂತ 5ಎಮ್ಎಮ್ ಕಡಿಮೆ ನೀಡಿದ್ದು, ಒಟ್ಟಾರೆಯಾಗಿ 179 ಕೇಜಿ ತೂಕವನ್ನು ಪಡೆದುಕೊಂಡಿದೆ.

ಎಜಿನ್ ಸಾಮರ್ಥ್ಯ
2018ರ ಕವಾಸಕಿ ನಿಂಜಾ 300 ಎಬಿಎಸ್ ಬೈಕ್ 296ಸಿಸಿ ಪ್ಯಾರಲಲ್ ಟ್ವಿನ್ ಸಿಲೆಂಡರ್ ಎಂಜಿನ್ ಸಹಾಯದಿಂದ 38ಬಿಹೆಚ್‍ಪಿ ಮತ್ತು 27ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸ್ಥಳಿಯವಾಗಿ ತಯಾರಿಸಲ್ಪಟ್ಟ ಕವಾಸಕಿ ನಿಂಜಾ 300 ಬೈಕ್ ಮುಂಭಾಗದಲ್ಲಿ 37ಎಮ್ ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅನ್ನು ಪಡೆದುಕೊಂದಿದೆ.

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕವಾಸಕಿ ನಿಂಜಾ 300 ಬೈಕ್‍ನ ಮುಂಭಾಗದಲ್ಲಿ 290ಎಮ್ಎಮ್ ಪೆಟೆಲ್ ಡಿಸ್ಕ್ ಬ್ರೇಕ್‍ನೊಂದಿಗೆ ಡ್ಯುಯಲ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ 220ಎಮ್ಎಮ್ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕವಾಸಕಿ ಸಂಸ್ಥೆಯು ಭಾರತ ದೇಶದಲ್ಲೆ ಜೋಡಿಸಲ್ಪಟ್ಟ ನಿಂಜಾ 300 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಈ ಬಾರಿ ಸುರಕ್ಷತೆಗಾಗಿ ಎಬಿಎಸ್ ಅನ್ನು ಅಳವಡಿಸಲಾಗಿದೆ. ತನ್ನ ಹಿಂದಿನ ಮಾದರಿಗಿಂತ ಹೊಸ ಗ್ರಾಫಿಕ್ಸ್ ಮತ್ತು ಬಣ್ಣವನ್ನು ಪಡೆದಿದ್ದು, ಬೇರೆಲ್ಲಾ ಅಂಶಗಳನ್ನು ಹಾಗೆಯೆ ಮುಂದಿವರೆಸಲಾಗಿದೆ.

ಬಿಡುಗಡೆಗೊಂಡ ಕವಾಸಕಿ ನಿಂಜಾ 300 ಬೈಕ್ ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಟೆಮ್ ಆರ್‍ಸಿ 390, ಟಿವಿಎಸ್ ಅಪಾಚೆ ಆರ್‍ಆರ್ 310, ಯಮಹಾ ಆರ್3 ಮತ್ತು ಬೆನೆಲ್ಲಿ 302ಆರ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications