ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

By Praveen Sannamani

ಭಾರತೀಯ ಮಾರುಕಟ್ಟೆಗಾಗಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಹೊಸ ಬೈಕ್‌ಗಳನ್ನು ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಹೊಸ ಬೈಕ್ ಬಿಡುಗಡೆಗೂ ಮುನ್ನ ಎಂಜಿನ್ ಕಾರ್ಯಕ್ಷಮತೆಯ ಪರೀಕ್ಷೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಹೊಸ ಬೈಕ್‌ಗಳು ಡ್ಯುಯಲ್ ಟೋನ್ ಬಣ್ಣದೊಂದಿಗೆ ಪ್ರಿಮಿಯಂ ಟಚ್ ಪಡೆದಿರುವುದು ಖಚಿತವಾಗಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ರೆಡ್ ಆ್ಯಂಡ್ ವೈಟ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಅಭಿವೃದ್ಧಿಯಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಸ್ಟೋರ್ಟಿ ಬ್ಲ್ಯಾಕ್ ಬಣ್ಣದಲ್ಲಿ ಸಿದ್ದವಾಗಿರುವ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿವೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಇದಲ್ಲದೇ 2017ರ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಹೊಸ ಮೋಟಾರ್ ಸೈಕಲ್‌ಗಳು ಕ್ರೋಮ್ ಬಣ್ಣದ ಯೋಜನೆಗಳನ್ನು ಹೊಂದಿದ್ದು, ರೆಟ್ರೊ ಕ್ಲಾಸಿಕ್ ಯುಗದ ಬೈಕುಗಳನ್ನು ನೆನಪಿಸುತ್ತವೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಕಳೆದ ಕೆಲದಿನಗಳ ಹಿಂದಷ್ಟೇ ಹೊಸೂರು ಬಳಿಯೂ ಕೂಡಾ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ. ಜೊತೆಗೆ ಆಸಕ್ತ ಗ್ರಾಹಕರಿಂದ ಈಗಾಗಲೇ ಮುಂಗಡ ಪಡೆದು ಬುಕ್ಕಿಂಗ್ ಕೂಡಾ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಇದೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಇನ್ನು ರಾಯಲ್ ಎನ್‌ಫೀಲ್ಡ್ ಅನಾವರಣಗೊಳಿಸಲಿರುವ ಹೊಸ ಬೈಕ್‌ಗಳು 647 ಸಿಸಿ ಪ್ಯಾರಲಲ್ ಏರ್/ ಆಯಿಲ್ ಎಂಜಿನ್ ಆಯ್ಕೆ ಪಡೆಯಲಿವೆ. ಸ್ಟ್ಯಾಂಡರ್ಡ್ ಸ್ಲಿಪ್ಪರ್ ಕ್ಲಚ್‌ನೊಂದಿಗೆ 47 ಬಿಎಚ್‌ಪಿ ಮತ್ತು 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಫಿಕ್ ಫೋರ್ಕ್ ಅಪ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಜರ್ಸ್, ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಈ ಮೂಲಕ ಗಂಟೆಗೆ 170ಕಿಮಿ ಟಾಪ್ ಸ್ಪೀಡ್ ಪಡೆದುಕೊಂಡಿವೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಬೆಲೆ (ಎಕ್ಸ್‌ಶೋರಂ ಪ್ರಕಾರ)

ಬಿಡುಗಡೆಗೂ ಮುನ್ನವೇ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ.3 ಲಕ್ಷದಿಂದ ರೂ.3.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಎರಡು ವಿಶೇಷ ಬೈಕ್ ಬಿಡುಗಡೆ

ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಅವಳಿ ಮೋಟಾರ್ ಸೈಕಲ್‌ಗಳು ಸಾಕಷ್ಟು ಭರವಸೆ ಹುಟ್ಟುಹಾಕಿದ್ದು, ಭವಿಷ್ಯದಲ್ಲಿ ಹೊಸ ಬೈಕ್‍‌ಗಳು ಗ್ರಾಹಕರನ್ನು ಯಾವ ರೀತಿ ಸೆಳೆಯುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Article Published On: Friday, August 10, 2018, 16:29 [IST]
English summary
Royal Enfield 650-Twins To Be Launched Next Month; Details Revealed.
Read more on royal enfield
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+