ಕ್ಲಾಸಿಕ್ 350 ಪೆಗಾಸಸ್ ಲಿಮಿಟೆಡ್ ಎಡಿಷನ್ ಬಿಡುಗಡೆಗೆ ಸಜ್ಜಾದ ರಾಯಲ್ ಎನ್‌ಫೀಲ್ಡ್
ಕಳೆದ ತಿಂಗಳ ಹಿಂದಷ್ಟೇ ತನ್ನ ವಿನೂತನ ಕ್ಲಾಸಿಕ್ 500 ಪೆಗಾಸಸ್ ಬೈಕ್ ಪರಿಚಯಿಸುವ ಮೂಲಕ ಕ್ಲಾಸಿಕ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೀಗ ಪೆಗಾಸಸ್ ಲಿಮಿಟೆಡ್ ಎಡಿಷನ್‌ಗಳಲ್ಲಿ ಕ್ಲಾಸಿಕ್ 350 ಬೈಕ್ ಮಾದರಿಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳನ್ನು ಮಾಡಿದ ಸಂದರ್ಭದಲ್ಲಿ ಲಕ್ಷಾಂತರ ಗ್ರಾಹಕರು ಕ್ಲಾಸಿಕ್ 350 ಪೆಗಾಸಸ್ ಬೈಕ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ತನ್ನ ನೆಚ್ಚಿನ ಗ್ರಾಹಕರಿಗೆ ಸಿಹಿಸುದ್ದಿ ನೀಡಿರುವ ಆರ್‌ಇ ಸಂಸ್ಥೆಯು ಇದೇ ತಿಂಗಳು ಕೊನೆಯಲ್ಲಿ ಲಿಮಿಟೆಡ್ ಎಡಿಷನ್ ಕ್ಲಾಸಿಕ್ 350 ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ.

ಸದ್ಯ ಮುಂಬೈ ಎಕ್ಸ್‌ಶೋರಂ ಪ್ರಕಾರ ರೂ 2.49 ಲಕ್ಷಕ್ಕೆ ಬಿಡುಗಡೆಯಾಗಿದ್ದ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಗ್ರಾಹಕರ ಕೈ ಸೇರಿದ್ದು, ಲಿಮಿಟೆಡ್ ಎಡಿಷನ್ ಹಿನ್ನೆಲೆಯಲ್ಲಿ ಖರೀದಿಗಿದ್ದ ಕೇವಲ 250 ಬೈಕ್‌ಗಳು ದಾಖಲೆ ಎನ್ನುವಂತೆ ಕೇವಲ 3 ನಿಮಿಷದಲ್ಲಿ ಮಾರಾಟಗೊಂಡಿದ್ದವು.

ಹೀಗಾಗಿ ಕ್ಲಾಸಿಕ್ 350 ಪ್ರಿಯರಿಗೂ ಹೊಸ ಅವಕಾಶ ನೀಡಲು ಮುಂದಾಗಿರುವ ಆರ್‌ಇ ಸಂಸ್ಥೆಯು ಕ್ಲಾಸಿಕ್ 350 ಪೆಗಾಸಸ್ ಲಿಮಿಟೆಡ್ ಎಡಿಷನ್ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತಿದ್ದು, ತಾಂತ್ರಿಕ ಅಂಶಗಳ ಕುರಿತಾದ ಟೆಸ್ಟ್ ರೈಡ್‌ಗಾಗಿ ಹೊಸ ಬೈಕ್‌ಗಳನ್ನ ಈಗಾಗಲೇ ಸಾರ್ವಜನಿಕವಾಗಿ ಪರೀಕ್ಷಾರ್ಥ ಕಾರ್ಯಗಳನ್ನ ಮುಗಿಸಲಾಗಿದೆಯೆಂತೆ.

ಇನ್ನು 2ನೇ ಮಹಾಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದ ಬ್ರಿಟಿಷ್ ಪ್ಯಾರಾಟೂರ್ಪ್‌ಗಳಾದ ಫ್ಲೈಯಿಂಗ್ ಫ್ಲಿಯಾ ಪ್ರೇರಣೆಯೊಂದಿಗೆ ಕ್ಲಾಸಿಕ್ ಬೈಕ್ ಸರಣಿಯಲ್ಲಿ ಪೆಗಾಸಸ್ ಆವೃತ್ತಿಯನ್ನು ಹೊರತರುತ್ತಿರುವ ಆರ್‌ಇ ಸಂಸ್ಥೆಯು ಮತ್ತೊಂದು ಜನಪ್ರಿಯ ಡಬ್ಲ್ಯುಡಿ 125 ವಿನ್ಯಾಸಗಳನ್ನು ಆಧರಿಸಿ ಹೊಸ ಬೈಕ್‌ಗಳನ್ನು ಅನ್ನು ಅಭಿವೃದ್ಧಿ ಮಾಡಿದೆ.

ಸೇನೆಗಳಲ್ಲಿ ಹೆಚ್ಚಾಗಿ ಬಳಕೆಯಾಗಿದ್ದ ಫ್ಲೈಯಿಂಗ್ ಫ್ಲಿಯಾ ಖ್ಯಾತಿಯ 2 ಸ್ಟೋಕ್ ಡಬ್ಲ್ಯುಡಿ 125 ಬೈಕ್ ಮಾದರಿಯಲ್ಲೇ ಕ್ಲಾಸಿಕ್ ಪೆಗಾಸಸ್ ಬೈಕ್‌ಗಳನ್ನು ಹೊರತರುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ನೀರ್ದಿಷ್ಟ ಸಂಖ್ಯೆಯ ಸ್ಪೆಷಲ್ ಎಡಿಷನ್ ಬೈಕ್‌ಗಳನ್ನು ಹೊರತರುತ್ತಿದೆ.

ಹೊಸ ಬೈಕ್ ವಿನ್ಯಾಸಗಳನ್ನು 2 ಸ್ಟೋಕ್ ಡಬ್ಲ್ಯುಡಿ 125 ಬೈಕ್ ಮಾದರಿಯಲ್ಲೇ ಅಭಿವೃದ್ದಿ ಮಾಡಲಾಗಿದ್ದು, ಮಿಲಟರಿ ವರ್ಷನ್ ಮಾದರಿಯಲ್ಲಿ ವಿವಿಧ ನಮೂನೆಯ ಸೌಲಭ್ಯಗಳನ್ನು ಹೊಂದಿರುವುದೇ ಈ ಬೈಕಿನ ಮತ್ತೊಂದು ವಿಶೇಷವಾಗಿದೆ.

ಎಂಜಿನ್ ಸಾಮರ್ಥ್ಯ
ಕ್ಲಾಸಿಕ್ 350 ಪೆಗಾಸಸ್ ಬೈಕ್‌ಗಳು 346-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿವೆ.

ಹೀಗಾಗಿ ಭಾರತದಲ್ಲಿ ಮಾರಾಟವಾಗುವ ಕ್ಲಾಸಿಕ್ 350 ಪೆಗಾಸಸ್ ಆವೃತ್ತಿಗಳು ಸಾಮಾನ್ಯ 350 ಬೈಕಿಗಿಂತ ಯಾವುದೇ ವಿಶೇಷತೆ ಹೊಂದಿಲ್ಲವಾದರೂ, ಬೈಕಿನ ಬಣ್ಣ, ಗ್ರಾಫಿಕ್ಸ್ ಡಿಸೈನ್ ಮತ್ತು ವಿವಿಧ ಬೀಡಿಭಾಗಗಳು ವಿಶೇಷ ಬಣ್ಣದ ಆಯ್ಕೆ ಹೊಂದಿವೆ.

ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳ ಮಾದರಿಯಲ್ಲೇ ಕ್ಲಾಸಿಕ್ 350 ಪೆಗಾಸಸ್ ಬೈಕ್‌ಗಳು ಸಹ ಬ್ರೌನ್ ಬಣ್ಣಗಳಲ್ಲಿ ಮಾತ್ರವೇ ಲಭ್ಯವಾಗುವ ಸಾಧ್ಯತೆಗಳಿದ್ದು, ಸ್ಪೋಕ್ ವೀಲ್ಹ್, ಡ್ಯುಯಲ್ ಡಿಸ್ಕ್ ಬ್ರೇಕ್ ವ್ಯವಸ್ಥೆಯೊಂದಿಗೆ 194 ಕೆ.ಜಿ ತೂಕವನ್ನು ಹೊಂದಿರುವ ಹೊಸ ಬೈಕ್‌ಗಳ ಸಾಮಾನ್ಯ ಮಾದರಿಗಿಂತ ರೂ. 20 ಸಾವಿರದಿಂದ ರೂ.25 ಸಾವಿರ ಹೆಚ್ಚುವರಿಯಾಗುವ ಸಾಧ್ಯತೆಯಿದೆ.
Source: Overdrive


Click it and Unblock the Notifications