ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ನೆನ್ನೆಯಷ್ಟೆ ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍ ಅನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.62 ಲಕ್ಷಕ್ಕೆ ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ತಮ್ಮ ಎಬಿಎಸ್ ಪ್ರೇರಿತ ಕ್ಲಾಸಿಕ್ 500 ಮತ

By Rahul Ts

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ನೆನ್ನೆಯಷ್ಟೆ ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍ ಅನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.62 ಲಕ್ಷಕ್ಕೆ ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ತಮ್ಮ ಎಬಿಎಸ್ ಪ್ರೇರಿತ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಹೌದು, ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍‍ಗಳನ್ನು ಬಿಡುಗಡೆಯ ಸಮಾರಂಭದಲ್ಲಿ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯ ಅದ್ಯಕ್ಷರಾದ ರುದ್ರತೇಜ್ ಸಿಂಗ್ ಅವರು ಎಬಿಎಸ್ ಪ್ರೇರಿತ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತೆವೆ ಎಂದು ಹೇಳಿಕೊಂಡಿದ್ದಾರೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ರಾಯಲ್ ಎನ್‍‍ಫೀಲ್ಡ್ ಎಬಿಎಸ್ ಅನ್ನು ಕೇವಲ ಕ್ಲಾಸಿಕ್ 500 ಶ್ರೇಣಿಯ ಬೈಕ್‍‍ಗಳಲ್ಲಿ ಮಾತ್ರ ಅಳವಡಿಸಲಿದ್ದು, ಥಂಡರ್‍‍ಬರ್ಡ್ 500 ಬೈಕ್‍‍ಗಳಲ್ಲಿ ಸಧ್ಯಕ್ಕೆ ಅಳವಡಿಸುವುದಿಲ್ಲ ಎಂದು ಹೇಳಲಾಗಿದೆ. ಸಂಸ್ಥೆಯಲ್ಲಿನ ಎಲ್ಲಾ ಬೈಕ್‍‍ಗಳಿಗೆ 2019ರ ಏಪ್ರಿಲ್ ಒಳಗೆ ಎಬಿಎಸ್ ಅನ್ನು ಅಳವಡಿಸುವ ಯೋಜನೆಯಲ್ಲಿದೆ. ಹಿಮಾಲಯನ್ 500 ಬೈಕ್‍‍ಗಳು ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯಲ್ಲಿನ ಪ್ರಮುಖ ಬೈಕ್ ಆಗಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಇದಲ್ಲದೆ ಸಂಸ್ಥೆಯು ಎಬಿಎಸ್ ಪ್ರೇರಿತ ಕ್ಲಾಸಿಕ್ 500 ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ ನಂತರವು ನಾನ್-ಎಬಿಎಸ್ ಕ್ಲಾಸಿಕ್ 500 ಬೈಕ್‍ಗಳ ಸ್ಟಾಕ್ ಖಾಲಿಯಾಗುವ ವರೆಗೆ ಮಾರಾಟದಲ್ಲಿರುತ್ತದೆ ಎಂದು ಹೇಳಿದೆ. 2019ರ ಏಪ್ರಿಲ್ ಶುರುವಾಗುವುದರ ಒಳಗೆ ತಮ್ಮ ಎಲ್ಲಾ ಬೈಕ್‍‍ಗಳಿಗೆ ಎಬಿಎಸ್ ಅನ್ನು ಅಳವಡಿಸಲು ಸಂಸ್ಥೆಯು ತೀರ್ಮಾನಿಸಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್‍‍ಗಳು 499ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27.2 ಬಿಹೆಚ್‍‍ಪಿ ಮತ್ತು 41.3 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಮತ್ತೊಂದು ಕಡೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು 411ಸಿಸಿ ಏರ್-ಕೂಲ್ಡ್, ಫ್ಯುಯಲ್ ಎಂಜೆಕ್ಟೆಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 24.5 ಬಿಹೆಚ್‍‍ಪಿ ಮತ್ತು 32ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಈಗಾಗಲೆ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಆಳವಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇದೀಗ ಎಬಿಎಸ್ ಅನ್ನು ಅಳವಡಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019 ಏಪ್ರಿಲ್ 1ರಿಂದ 125ಸಿಸಿಕ್ಕಿಂತ ಮೇಲ್ಪಟ್ಟ ಎಲ್ಲಾ ದ್ವಿಚಕ್ರ ವಾಹಗಳಲ್ಲಿ ಕಡ್ಡಾಯವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಬೇಕೆಂದು ಕೇಂದ್ರ ಸರ್ಕಾರವು ಆದೇಷ ನೀಡಿದೆ. ಈ ನಿಟ್ಟಿನಲ್ಲಿ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಸರ್ಕಾರ ನೀಡಿದ ಡೆಡ್‍‍ಲೈನ್ ಒಳಗೆ ತಮ್ಮ ಬೈಕ್‍‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಮುಂದಾಗಿದೆ.

ಮುಂದಿನ ತಿಂಗಳು ಆರ್‍ಇ ಸಂಸ್ಥೆಯ ಮತ್ತೆರಡು ಬೈಕ್‍‍ಗಳು ಬಿಡುಗಡೆ..

ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಿದ ನಂತರ ಹಿಮಾಲಯನ್ ಮತ್ತು ಕ್ಲಾಸಿಕ್ 500 ಮೋಟರ್‍‍ಸೈಕಲ್ ಸವಾರಿಯು ಸುರಕ್ಷಿತವಾಗಿರಲಿದೆ ಮತ್ತು ಒಟ್ಟಾರೆ ಬ್ರೇಕಿಂಗ್‍‍ನ ಕಾರ್ಯಕ್ಷಮತೆಯು ಉತ್ತಮವಾಗಿರಲಿದೆ.

Article Published On: Wednesday, August 29, 2018, 12:00 [IST]
English summary
Royal Enfield Classic 500 ABS And Himalayan ABS Launch Details Revealed.
Read more on royal enfield
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+