ಅರ್ಧ ಗಂಟೆಯಲ್ಲಿ ಆರ್‍ಇ ಕ್ಲಾಸಿಕ್ 500 ಬೈಕ್‍ನಿಂದ ಪರಿವರ್ತನೆ ಆಯ್ತು ಪೆಗಾಸಸ್ 500 ಬೈಕ್.!
ಕಳೆದ ಎರಡು ವಾರಗಳಿಂದ ರಾಯಲ್ ಎನ್‍ಫೀಲ್ಡ್ ಪೆಗಾಸಸ್ 500 ಎಡಿಷನ್ ಬೈಕ್ ಅನ್ನು ಖರೀದಿಸಿದ ಗ್ರಾಹಕರು ನಿರಾಶೆಗೊಂಡ ಮಾಹಿತಿಯ ಬಗ್ಗೆ ಈಗಾಗಲೆ ನಾವು ನಿಮಗೆ ತಿಳಿಸಿದ್ದೇವೆ. ನಿರಾಶೆಗೊಂಡ ಗ್ರಾಹಕರು ಪೆಗಾಸಸ್ 500 ಬೈಕ್ ಅನ್ನು ಕಸದ ತೊಟ್ಟಿಗೆ ಎಸೆದಿರುವ ದೃಶ್ಯವನ್ನು ಸಹಾ ನಾವು ನೋಡಿದ್ದೇವೆ. ಆದರೆ ಇದೀಗ ಕೇವಲ 1000 ರೂಪಾಯಿಯ ಮೊತ್ತದಲ್ಲಿ ಒಬ್ಬಾತ ತನ್ನ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಬೈಕ್ ಅನ್ನು ಪೆಗಾಸಸ್ 500 ಎಡಿಷನ್ ಬೈಕ್‍ನಂತೆ ಕಾಣುವ ಹಾಗೆ ತಯಾರು ಮಾಡಿದ್ದಾನೆ.

ಹೌದು, ರಾಜಸ್ಥಾನದಲ್ಲಿನ ಸ್ಟಿಕ್ಕರ್ ಅಂಗಡಿಯಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಬೈಕ್ ಅನ್ನು ಕಡಿಮೆ ವೆಚ್ಚದಲ್ಲಿ ಸ್ಟಿಕ್ಕರ್‍ಗಳನ್ನು ಬದಲಾಯಿಸುವುದರೊಂದಿಗೆ, ಪೆಗಾಸಸ್ 500 ಬೈಕ್ ತರಹ ಕಾಣುವ ಹಾಗೆ ಮಾರ್ಪಾಡುಗಳನ್ನು ಮಾಡಿದ್ದಾನೆ ಎಂದರೆ ನೀವು ನಂಬಲೇಬೇಕು.

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಬೈಕಿನ ಪ್ಯುಯಲ್ ಟ್ಯಾಂಕ್‍ನ ಮೇಲಿರುವ ಸ್ಟಿಕ್ಕರ್‍ಗಳನ್ನು ಬದಲಾಯಿಸಿ, ಪೆಗಾಸಸ್ ಬೈಕ್‍ನಲ್ಲಿ ಬಳಸುವ ವಿಶೇಶ ಸಂಖ್ಯೆ ಮತ್ತು ಪೆಗಾಸಸ್ ಬೈಕ್‍ಗಳಲ್ಲಿ ಬಳಸಿದ ಚಿಹ್ನೆಯ ಸ್ಟಿಕ್ಕರ್‍ಗಳನ್ನು ಕ್ಲಾಸಿಕ್ 500 ಬೈಕಿಗೆ ಅಂಟಿಸಿದ್ದಾನೆ.

ಕೇವಲ ಅರ್ಧ ಗಂಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಬೈಕ್ ಪೆಗಾಸಸ್ 500 ಬೈಕ್ ಆಗಿ ಪರಿವರ್ತನೆ ಮಾಡಲಾಗಿದೆ. ಅಂತರ್ಜಾಲದಲ್ಲಿ ರಾಯಲ್ ಎನ್‍ಫೀಲ್ಡ್ ಪೆಗಾಸಸ್ ಬೈಕಿನ ಸ್ಪೆಷಲ್ ಗುರುತುಗಳನ್ನು ಡೌನ್‍ಲೋಡ್ ಮಾಡಿ ಅದನ್ನು ಕ್ಲಾಸಿಕ್ 500 ಬೈಕ್‍ನ ಫ್ಯುಯಲ್ ಟ್ಯಾಂಕ್‍ನ ಭಾಗಗಳಲ್ಲಿ ಅಂಟಿಸಲಾಗಿದೆ.

ಅಂಟಿಸಿದ ನಂತರ ಕ್ಲಾಸಿಕ್ 500 ಬೈಕ್ ಪೆಗಾಸಸ್ 500 ಬೈಕ್‍ನಂತೆ ರೂಪದಲ್ಲಿ ಪರಿವರ್ತನೆಯಾಗಿದೆ. ಈ ಕಾರ್ಯವನ್ನು ಕೇವಲ ಎರಡೂ ಬೈಕ್‍ಗಳಲ್ಲಿ ಯಾವ ಮಾದರಿಯ ಸ್ಟಿಕ್ಕರಿಂಗ್ ಮಾಡಲಾಗಿದೆ ಎಂದು ತಿಳಿದವರಿಗೆ ಮಾತ್ರ ಈ ಕಾರ್ಯ ಸುಲಭವಾಗುತ್ತದೆ.

ಏಕೆಂದರೆ ಮೂಲತಹ ರಾಯಲ್ ಎನ್‍ಫೀಲ್ಡ್ ಪೆಗಾಸಸ್ 500 ಎಡಿಷನ್ ಮಾಡಲ್ ಕೇವಲ ಸರ್ವೀಸ್ ಬ್ರೌನ್ ಮತ್ತು ಡ್ರಾಪ್ ಗ್ರೋನ್ ಎಂಬ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ರಾಯಲ್ ಎನ್‍ಫೀಲ್ಡ್ ಡೆಸರ್ಟ್ ಸ್ಟೋರ್ಮ್ ಸ್ಯಾಂಡ್ ಯೆಲ್ಲೊ ಬಣ್ಣವನ್ನು ಪಡೆದಿರುವುದರಿಂದ ಸುಲಭವಾಗಿ ಪರಿವರ್ತನೆ ಮಾಡಲಾಗಿದೆ.
MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಸೀಮಿತ ಆವೃತ್ತಿಯ ರಾಯಲ್ ಎನ್‍ಫೀಲ್ಡ್ ಪೆಗಾಸಸ್ ಡೆಸರ್ಟ್ ಸ್ಟಾರ್ಮ್ ಕ್ಲಾಸಿಕ್ 500 ರಂತೆಯೇ ಒಂದೇ ಮರಳಿನ ಹಳದಿ ಬಾಹ್ಯ ಬಣ್ಣವನ್ನು ಪಡೆದಿದೆ. ಡೀಕಲ್ ಬದಲಾವಣೆ ಮತ್ತು ಬ್ಲ್ಯಾಕ್ಡ್ ಔಟ್ ಎಂಜಿನ್, ಎಕ್ಸಾಸ್ಟ್ ಮತ್ತು ಚಕ್ರಗಳು ಹೊರತುಪಡಿಸಿ ಮೋಟಾರ್‍ಸೈಕಲ್ ಡಸರ್ಟ್ ಸ್ಟಾರ್ಮ್‍ಗೆ ಸದೃಶವಾಗಿದೆ.

ಆದರೆ ಡೆಸರ್ಟ್ ಸ್ಟಾರ್ಮ್ ಡೆಸರ್ಟ್ ಸ್ಟಾರ್ಮ್ ಹಳದಿ ಬಣ್ಣವನ್ನು ಪ್ರತಿಫಲಿಸುತ್ತದೆ. ಆದಾಗ್ಯೂ, ಪೆಗಾಸಸ್ ನೋಟ ಸುಮಾರು 500 ಎಡಿಷನ್ ಬೈಕ್‍ನಂತೆ ಕಂಡರೂ ಹೆಚ್ಚುವರಿಯಾಗಿ, ಪೆಗಾಸಸ್ 500 ಎಡಿಷನ್ ಮೋಟಾರ್‍ಸೈಕಲ್ ಕ್ಯಾನ್ವಾಸ್ ಬಟ್ಟೆ ಪ್ರವರ್ತಕ ಚೀಲಗಳು, ಹಿತ್ತಾಳೆಯ ಪಾಕೆಟ್ ಪಟ್ಟಿಗಳನ್ನು ಒಳಗೊಂಡಿದೆ.

ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಆಧಾರಿತ ಪೆಗಾಸಸ್ 500 ಎಡಿಷನ್ ಬೈಕ್‍ಗಳು ಮಾರುಕಟ್ಟೆಯಲ್ಲಿ ರೂ. 2.40 ಲಕ್ಷಕ್ಕೆ ಮಾರಾಟಗೊಳ್ಳುತಿದ್ದು, ಅದೇ ಗುಣಗಳನ್ನು ಮತ್ತು ಹೆಚ್ಚುವರಿಯಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿರುವ ಕ್ಲಾಸಿಕ್ 350 ಸಿಗ್ನಲ್ಸ್ ಎಡಿಷನ್ ಬೈಕ್‍ಗಳು ರೂ. 1.62 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಹೆಚ್ಚುವರಿಯಾಗಿ ಒಂದೇ ಗುಣಗಳನ್ನು ಹೊಂದಿರುವ್ ಈ ಬೈಕ್‍ಗಳ ನದುವೆ ಸುಮಾರು 70,000 ಬೆಲೆಯಲ್ಲಿ ಬದಲಾವಣೆ ಇದೆ.

ಆದರೆ, ಈ ಸ್ಟಿಕ್ಕರ್ ಅಂಗಡಿಯವರು ಕಡಿಮೆ ಬೆಲೆಯಲ್ಲಿ ಕ್ಲಾಸಿಕ್ ಡೆಸರ್ಟ್ ಸ್ಟೋರ್ಮ್ ಬೈಕ್ ಅನ್ನು ಪೆಗಾಸಸ್ 500 ಬೈಕ್ ಆಗಿ ಪರಿವರ್ತಿಸಿದ್ದು, ಇದು ರಾಯಲ್ ಎನ್‍ಫೀಲ್ಡ್ ಪೆಗಾಸಸ್ 500 ಎಡಿಷನ್ ಖರೀದಿದಾರರಿಗೆ ಹೆಚ್ಚು ಅಪೇಕ್ಷಣೀಯವಾಗಿದೆ.
ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು 499ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27.2-ಬಿಎಚ್‌ಪಿ ಮತ್ತು 41.3-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗೊಂಡ ರಾಯಲ್ ಎನ್‍ಫೀಲ್ಡ್ ಪೆಗಾಸಸ್ 500 ಬೈಕ್‍ನ ಚಿತ್ರಗಳು ಇಲ್ಲಿದೆ ನೋಡಿ..


Click it and Unblock the Notifications