ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಕ್ಲಾಸಿಕ್ ಶೈಲಿ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍‍ಫೀಲ್ಡ್ ತಮ್ಮ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಟ್ವಿನ್ ಬೈಕ್‍‍ಗಳನ್ನು ಪರಿಚಯಿಸಲಿದ್ದು, ಇದೇ ಸೆಪ್ಟೆಂಬರ್ ತಿಂಗಳಿನ ಕೊನೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

By Rahul Ts

ಮೊದಲಿದೆ ಈ ಎರಡೂ ಬೈಕ್‍‍ಗಳು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಕ್ಯಾಲಿಫೋರ್ನಿಯಾದ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ನಂತರ ಈ ವರ್ಷದ ದೀಪವಾಳಿ ಹಬ್ಬದ ಸಮಯದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಈ ಎರಡೂ ಬೈಕ್‍‍ಗಳು ಮೊದಲಿಗೆ 2017ರಲ್ಲಿ ಬಹಿರಂಗಗೊಂಡಿದ್ದು, ಸಂಸ್ಥೆಯು ಮೊದಲನೆಯ ಅರ್ಧವಾರ್ಷಿಕ ಸಮಯದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದ್ದು, ಕಾರಣಾಂತರಗಳಿಂದ ಬಿಡುಗಡೆಗೊಳಿಸಲು ಆಗಲಿಲ್ಲ. ಆದರೇ ಇದೀಗ ಸಂಸ್ಥೆಯು ಕೊನೆಗು ಬಿಡುಗಡೆಯ ಅವಧಿಯನ್ನು ಬಹಿರಂಗಗೊಳಿಸಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಹಾಗು ಕಾಂಟಿನೆಂಟಲ್ ಜಿಟಿ 650 ಟ್ವಿನ್ ಬೈಕ್‍‍ಗಳಲ್ಲಿ 647ಸಿಸಿ, 4 ಸ್ಟ್ರೋಕ್ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಒದಗಿಸಲಾಗಿದೆ. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಈ ಬೈಕ್‍‍ಗಳು 47ಬಿಹೆಚ್‍‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಏರ್ ಕೂಲ್ಡ್ ಮತ್ತು ಆಯಿಲ್ ಕೂಲ್ಡ್ ಎಂಜಿನ್ ಪರಿಮಾಣದಲಿದ್ದು, ಸಿಂಗಲ್ ಸಿಲೆಂಡರ್ ಕ್ಯಾಮ್‍‍ಶಾಫ್ಟ್ ಮತ್ತು 4 ವೇಲ್ವ್ ಹೆಡ್‍‍ಗಳನ್ನು ಪಪಡೆದುಕೊಂಡಿರಲಿದೆ. ಎಂಜಿನ್ 270 ಡಿಗ್ರಿ ಕ್ರಾಂಕ್ ಅನ್ನು ಹೊಂದಿದ್ದು, 6ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್‍‍ನ ವಿಶೇಷತೆ ಏನೆಂದರೆ ಈ ಇಷ್ಟು ಸಾಮರ್ಥ್ಯದ ಎಂಜಿನ್ ಅನ್ನು ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಮೊದಲ ಬಾರಿಗೆ ತಮ್ಮ ಬೈಕ್‍‍ಗಳಲ್ಲಿ ಬಳಸುತ್ತಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಎರಡು ಬೈಕ್‍‍ಗಳು 190ಎಮ್ಎಮ್ ಉದ್ದ, 12.5 ಲೀಟರ್ ಫ್ಯುಯಲ್ ಟ್ಯಾಂಕ್ ಮತ್ತು ಒಟ್ಟಾರೆಯಾಗಿ 199 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ. ಮತ್ತು ಈ ಬೈಕ್‍‍ಗಳ ಮುಂಭಾಗದಲ್ಲಿ 41ಎಮ್ಎಮ್ ಟೆಲಿಸ್ಕೋಪಿಕ್ ಫೊರ್ಕ್ಸ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಸಂಸ್ಪೆಂಷನ್‍‍ಗಳನ್ನು ಒದಗಿಸಲಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 320ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಈ ಬೈಕ್‍‍ನ ಚಾಸಿಸ್ ಅನ್ನು ಹ್ಯಾರಿಸ್ ಪರ್ಫಾರ್ಮೆನ್ಸ್ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಎರಡೂ ಬೈಕ್‍‍ಗಳಲ್ಲಿ ನೀಡಲಾಗಿದೆ.

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಹೊಸ ಬೈಕ್‍‍ಗಳು..

ಹೊಸದಾಗಿ ಬಿಡುಗಡೆಗೊಳ್ಳುವ ರಾಯಲ್ ಎನ್‍‍ಫೀಲ್ಡ್ ಟ್ವಿನ್ಸ್ ಬೈಕ್‍‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕರ ರೂ. 3 ರಿಂದ 3.50 ಲಕ್ಷದ ಬೆಲೆಯನ್ನು ಪಡೆದುಕೊಂಡಿರಲಿದ್ದು, ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಹಾರ್ಲೆ ಡೇವಿಡ್‍‍ಸನ್ ಸ್ಟ್ರೀಟ್ 750 ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Article Published On: Saturday, August 4, 2018, 16:47 [IST]
English summary
Royal Enfield Interceptor 650 & Continental GT 650 twins: Indian & international launch timelines unmasked.
Read more on royal enfield
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+