ಲೀಕ್ ಆಯ್ತು ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್ ವಿವರಗಳ ಮಾಹಿತಿ..
ಜನಪ್ರಿಯ ರಾಯಲ್ ಎನ್‍ಫೀಲ್ಡ್ ತಮ್ಮ ಇಂಟರ್‍ಸೆಪ್ಟರ್ 650 ಹಾಗು ಕಾಂಟಿನೆಂಟಲ್ ಜಿಟಿ650 ರೆಟ್ರೋ ಬೈಕ್‍ಗಳನ್ನು ಬಿಡುಗಡೆಗೊಳಿಸಿಸುವ ಯೋಜನೆಯಲಿದ್ದು, ಇದೀಗ ಈ ಬೈಕ್‍ಗಳವಿವರಗಳು ಸೋರಿಕೆಯಾಗಿದೆ. ಬಿಡುಗಡೆಗೊಳ್ಳಲಿರುವ ರಾಯಲ್ ಎನ್‍ಫೀಲ್ಡ
ಜನಪ್ರಿಯ ರಾಯಲ್ ಎನ್‍ಫೀಲ್ಡ್ ತಮ್ಮ ಇಂಟರ್‍ಸೆಪ್ಟರ್ 650 ಹಾಗು ಕಾಂಟಿನೆಂಟಲ್ ಜಿಟಿ650 ರೆಟ್ರೋ ಬೈಕ್‍ಗಳನ್ನು ಬಿಡುಗಡೆಗೊಳಿಸಿಸುವ ಯೋಜನೆಯಲಿದ್ದು, ಇದೀಗ ಈ ಬೈಕ್‍ಗಳವಿವರಗಳು ಸೋರಿಕೆಯಾಗಿದೆ. ಬಿಡುಗಡೆಗೊಳ್ಳಲಿರುವ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾದ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಮೊದಲ ಬಾರಿಗೆ 2017ರಲ್ಲಿ ನಡೆದ ಇಐಸಿಎಂಎ ಮೋಟರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಮಾಹಿತಿಗಳ ಪ್ರಕಾರ ಮುಂಬರುವ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಈ ಬೈಕ್‍ಗಳು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಮ್ಯಾನುವಲ್‍ನಲ್ಲಿ, ಇಂಟರ್‍ಸೆಪ್ಟರ್ 650 ಬೈಕ್ 202 ಕೆಜಿ ತೂಕ ಮತ್ತು ಕಾಂಟಿನೆಂಟಲ್ ಜಿಟಿ ಬೈಕ್ 198 ಕೆಜಿ ತೂಕವನ್ನು ಪಡೆದುಕೊಂಡಿರಲಿದೆ. ಇಂಟರ್‍ಸೆಪ್ಟರ್ 650 13.7 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿರಲಿದ್ದು, ಇನ್ನು ಕಾಂಟಿನೆಂಟಲ್ ಜಿಟಿ 650 ಬೈಕ್ 12.5 ಲೀಟರ್‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿರಲಿದೆ.

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳಲ್ಲಿ 648 ಏರ್-ಕೂಲ್ಡ್ ಪ್ಯಾರಲಲ್ ಟ್ವಿನ್ ಸಿಲೆಂಡರ್ ಅನ್ನು ಪಡೆದುಕೊಂಡಿದ್ದು, ಇವು 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರಲಿದೆ. ಎರಡೂ ಬೈಕ್‍ಗಳ ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 41ಎಮ್ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 320ಎಮ್ಎಮ್ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 240ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಬೋಷ್‍ನಿಂದ ಪಡೆದ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ650 ಬೈಕ್‍ಗಳು 1024ಎಮ್ಎಮ್ ಎತ್ತರ, 789ಎಮ್ಎಮ್ ಅಗಲವನ್ನು ಪಡೆದಿದೆ. ಇನ್ನು ಇಂಟರ್‍ಸೆಪ್ಟರ್ 650 ಬೈಕ್‍ಗಳು 1165ಎಮ್ಎಮ್ ಎತ್ತರ, 744ಎಮ್ಎಮ್ ಅಗಲವನ್ನು ಪಡೆದುಕೊಂಡಿರಲಿದೆ. ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳಲ್ಲಿ 174 ಎಮ್ಎಮ್‍ನ ಗ್ರೌಂಡ್ ಕ್ಲಿಯರೆನ್ಸ್ ಹಾಗು 1400ಎಮ್ಎಮ್‍ನ ವ್ಹೀಲ್ ಬೇಸ್ ಅನ್ನು ನೀಡಲಾಗಿದೆ.

ಮೊದಲಿಗೆ ಈ ಬೈಕ್‍ಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಈ ಎರಡು ಬೈಕ್‍ಗಳಲ್ಲಿ ಬದಲಾವಣೆಗಳೆಂದರೆ ಕಾಂಟಿನೆಂಟಲ್ ಜಿಟಿ650 ಬೈಕ್ ಕೇಫ್ ರೇಸರ್ ಬೈಕ್ ಆದರೇ, ಇನ್ನು ಇಂಟರ್‍ಸೆಪ್ಟರ್ 650 ಒಂದು ಸ್ಟ್ರೀಟ್ ಬೈಕ್ ವಿನ್ಯಾಸವನ್ನು ಹೊಂದಿರಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಕಾಂಟಿನೆಂಟಲ್ ಜಿಟಿ650 ಹಾಗು ಇಂಟರ್‍ಸೆಪ್ಟರ್ 650 ಬೈಕ್‍ಗಳ ಬುಕ್ಕಿಂಗ್ ಅನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸುವ ಯೋಜನೆಯಲಿದ್ದು, ಈ ಬೈಕಿನ ಬಿಡುಗಡೆಯ ಕುರಿತಾಗಿ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ. 650 ಟ್ವಿನ್ ಬೈಕ್‍ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಪೈಪೋಟಿ ಇಲ್ಲವೆಂದು ಹೇಳಲಾಗುತ್ತಿದೆ.


Click it and Unblock the Notifications