ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಬೈಕ್ ಬಿಡುಗಡೆಗೊಳಿಸಿದ ಮೂಹರ್ತವೇ ಸರಿ ಇರಲಿಲ್ಲ ಅಂತಾ ಕಾಣುತ್ತೆ. ಕಾರಣ, ಹೊಸ ಬೈಕ್ ಬಿಡುಗಡೆಯಾದ ದಿನದಿಂದಯೇ ಶುರುವಾಗಿರುವ ಆರ್‌ಇ ಸಂಸ್ಥೆ ಮತ್ತು ಗ್ರಾಹಕರ ನಡುವಿನ ಮುಸುಕಿನ ಗುದ್ದಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಮೋಸ ಆಗಿದೆ ಎನ್ನುವ ಗ್ರಾಹಕರ ದೂರಿಗೆ ಸಂಬಂಧಿಸಿದಂತೆ ರಾಯಲ್ ಎನ್‌ಫೀಲ್ಡ್ ಮತ್ತು ಗ್ರಾಹಕರ ನಡುವೆ ಕಿತ್ತಾಟ ತಾರಕಕ್ಕೇರಿದೆ. ಪೆಗಾಸಸ್ ಬೈಕ್ ಮಾಲೀಕರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಹಲವು ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಬೈಕ್ ಮಾಲೀಕನೊಬ್ಬ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಕಳೆದ ತಿಂಗಳ ಹಿಂದಷ್ಟೇ ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಬೈಕ್ ಮಾದರಿಗಳು ಮಾರಾಟಕ್ಕಿವೆ ಎಂದಿದ್ದೆ ತಡ, ಮುಗಿಬಿದ್ದು ಹೊಸ ಬೈಕ್ ಖರೀದಿ ಮಾಡಿದ ಗ್ರಾಹಕರು ಇದೀಗ ಯಾಕಾದ್ರು ಆ ಹೊಸ ಬೈಕ್ ಅನ್ನು ಖರೀದಿ ಮಾಡಿದೆವೋ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣ, ಪೆಗಾಸಸ್ ಬಿಡುಗಡೆ ನಂತರ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಅಂದ್ರೆ ನೀವು ನಂಬಲೇಬೇಕು.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಹೌದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿರುವ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾಲೀಕರು ಹೊಸ ಬೈಕ್ ವಿಚಾರದಲ್ಲಿ ಮೋಸದ ವ್ಯಾಪಾರ ನಡೆದಿದೆ ಅಂತಾ ಪ್ರತಿಭಟನೆ ನಡೆಸುತ್ತಿರುವುದಲ್ಲದೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಮೋಟಾರ್ ವೆಹಿಕಲ್ ಕಾಯ್ದೆಗೆ ವಿರುದ್ಧವಾಗಿ ಪೆಗಾಸಸ್ ಬೈಕ್ ಬಿಡುಗಡೆ ಮಾಡಿದೆಯಾ ಎನ್ನುವ ಅನುಮಾನ ಶುರುವಾಗಿದೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಲಿಮಿಟೆಡ್ ಎಡಿಷನ್ ಮಾದರಿಯಾಗಿರುವ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಜುಲೈ 30ರಂದು ಬಿಡುಗಡೆಯಾಗಿತ್ತು. ದೇಶಾದ್ಯಂತ ಕೇವಲ 250 ಬೈಕ್‌ಗಳನ್ನು ಮಾತ್ರವೇ ಮಾರಾಟ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರ ಅಳಲು.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಇದಕ್ಕೆ ಕಾರಣ, ಕಳೆದ ವಾರವಷ್ಟೇ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನವುದೇ ಪೆಗಾಸಸ್ ಮಾಲೀಕರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಇದರಿಂದ ಕೆರಳಿದ ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದ್ದು, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ಹೊಸ ಬೈಕ್ ವಾಪಸ್ ಪಡೆದು ಹಣ ಮರಳಿಸಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಮುಂಬೈ ಮೂಲದ ಧೀರಜ್ ಜರುವಾ ಎನ್ನುವವರು ರಾಯಲ್ ಎನ್‌ಫೀಲ್ಡ್ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪೆಗಾಸಸ್ ಬೈಕ್ ವಿಚಾರದಲ್ಲಿ ಆರ್‌ಇ ಅಸಡ್ಡೆ ಉತ್ತರಕ್ಕೆ ಬೇಸತ್ತು ಹೊಸ ಬೈಕ್ ಅನ್ನು ಕಸದ ರಾಶಿಗೆ ಸುರಿದು ಪ್ರತಿಭಟಿಸಿದ್ದು ಈಗ ಹಳೆಯ ವಿಚಾರ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಸಂಕಷ್ಟದಲ್ಲಿ ರಾಯಲ್ ಎನ್‌ಫೀಲ್ಡ್

ಆರ್‌ಟಿಐಗೆ ಅರ್ಜಿ ಸಲ್ಲಿಸಿರುವ ಪೆಗಾಸಸ್ ಬೈಕ್ ಮಾಲೀಕನೊಬ್ಬ 500ಸಿಸಿ ಬೈಕ್ ಮಾದರಿಯೊಂದು ಎಬಿಎಸ್ ಸೌಲಭ್ಯ ಇಲ್ಲದೆ ಬಿಡುಗಡೆಗೊಂಡಿರುವ ಬಗ್ಗೆ ಪ್ರಶ್ನೆ ಮಾಡಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮದಂತೆ 150ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಇರಲೇಬೇಕಾದ ಕಡ್ಡಾಯ ಸೌಲಭ್ಯಗಳಲ್ಲಿ ಒಂದಾಗಿರುವ ಎಬಿಎಸ್ ತಂತ್ರಜ್ಞಾನವು ಪೆಗಾಸಸ್ ಬೈಕ್ ಯಾಕಿಲ್ಲ ಎಂದು ದೂರು ನೀಡಿದ್ದಾರೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ವಾಸ್ತವವಾಗಿ ಹೇಳುವುದಾದರೆ, ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 2.49 ಲಕ್ಷ ಬೆಲೆ ಹೊಂದಿರುವ ಪೆಗಾಸಸ್ ಬೈಕ್‌ಗಳಲ್ಲಿ ಎಬಿಎಸ್ ಸೌಲಭ್ಯವೇ ಇಲ್ಲ. ಅದೇ ಕಳೆದ ವಾರ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ ಬೈಕ್‌ಗಳು ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 1.62 ಲಕ್ಷ ಬೆಲೆ ಹೊಂದಿದ್ದರೂ ಅವುಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಿರುವುದು ಪೆಗಾಸಸ್ ಮಾಲೀಕರಿಗೆ ಅಸಮಾಧಾನ ಉಂಟುಮಾಡಿದೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಹೀಗಾಗಿಯೇ ನಮ್ಮ ಬೈಕಿಗೂ ಕಡ್ಡಾಯವಾಗಿ ಎಬಿಎಸ್ ಸೌಲಭ್ಯವನ್ನು ಅಳವಡಿಕೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿರುವ ಗ್ರಾಹಕರು, ಎಬಿಎಸ್ ಸೌಲಭ್ಯ ಒದಗಿಸಿಕೊಡಲು ಸಾಧ್ಯವಿಲ್ಲವಾದ್ರೆ ನಮ್ಮ ಹಣ ವಾಪಸ್ ನೀಡಿ ಎಂದು ದೂರು ಸಲ್ಲಿಸಿದ್ದಾರೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ವಿವಾದದ ಬಗ್ಗೆ ಆರ್‌ಇ ಸ್ಪಷ್ಟನೆ

ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಆಧಾರದ ಮೇಲೆ ಬೆಲೆ ನಿಗದಿಪಡಿಸಿ ಸೌಲಭ್ಯವನ್ನು ನೀಡಲಾಗಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆಯಲ್ಲಿ ಅರ್ಥವೇ ಇಲ್ಲ ಎನ್ನುತ್ತಿರುವುದು ಗ್ರಾಹಕರನ್ನು ಮತ್ತಷ್ಟು ಕೆರಳಿಸಿದೆ.

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಹಾಗಾದ್ರೆ ರೂ. 2.49 ಲಕ್ಷ ಬೆಲೆ ಕೊಟ್ಟು ಪೆಗಾಸಸ್ ಖರೀದಿ ಮಾಡಿದ ಗ್ರಾಹಕರಿಗೂ ರೂ. 1.62 ಲಕ್ಷ ಕೊಟ್ಟು ಕ್ಲಾಸಿಕ್ ಸಿಗ್ನಲ್ 350 ಖರೀದಿ ಮಾಡುವ ಗ್ರಾಹಕರಿಗೂ ಏನು ವ್ಯತ್ಯಾಸ ಎಂದು ಪ್ರಶ್ನೆ ಹುಟ್ಟುಹಾಕಿದ್ದು, ಮುಂಬರುವ ದಿನಗಳಲ್ಲಿ ಈ ವಿವಾದಕ್ಕೆ ಯಾವ ರೀತಿ ಸ್ಪಂದನೆ ಸಿಗುತ್ತೊ ಗೊತ್ತಿಲ್ಲ.

MOST READ: ಪೆಟ್ರೋಲ್ ಕೊಳ್ಳಿರಿ, ಮೋಟಾರ್‌ಸೈಕಲ್ ಗೆಲ್ಲಿ.. ಇಂಧನ ಡೀಲರ್‌ಗಳಿಂದ ಭರ್ಜರಿ ಆಫರ್..!

ರಾಯಲ್ ಎನ್‌ಫೀಲ್ಡ್ ಮೋಸದ ವ್ಯಾಪಾರದ ವಿರುದ್ಧ ಸಿಡಿದೆದ್ದ ಪೆಗಾಸಸ್ ಬೈಕ್ ಮಾಲೀಕರು

ಒಟ್ಟಿನಲ್ಲಿ ವಿವಾದದ ಬಗ್ಗೆ ಅಸಡ್ಡೆ ತೋರುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಮಾಲೀಕರ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ ಎನ್ನುವಂತೆ ಹೇಳಿಕೆ ನೀಡುತ್ತಿದೆ. ಜೊತೆಗೆ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಹಣ ಪಾವತಿ ಮಾಡಿ ಎಬಿಎಸ್ ಪಡೆದುಕೊಳ್ಳಿ ಎನ್ನುವಂತಹ ದುರಹಂಕಾರಿ ವರ್ತನೆಯನ್ನು ಪ್ರದರ್ಶನ ಮಾಡುತ್ತಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.

Article Published On: Friday, September 14, 2018, 16:55 [IST]
English summary
Royal Enfield Pegasus 500 owners in India are a disappointed.
Read more on royal enfield off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+