ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್ ಆದ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ ಪೆಗಾಸಸ್ 500 ಬೈಕ್..
ಕಳೆದ ಮೇ 31ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಲಿಮಿಟೆಡ್ ಎಡಿಷನ್ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಇದೀಗ ಖರೀದಿಗಾಗಿ ಲಭ್ಯವಾಗಿದ್ದು, ನೆನ್ನೆ (ಜುಲೈ 25)ರಂದು ಆನ್‍ಲೈನ್‍ನಲ್ಲಿ ಸೇಲ್ ಆರಂಭವಾಗಿತ್ತು.
ಕಳೆದ ಮೇ 31ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಲಿಮಿಟೆಡ್ ಎಡಿಷನ್ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಇದೀಗ ಖರೀದಿಗಾಗಿ ಲಭ್ಯವಾಗಿದ್ದು, ನೆನ್ನೆ (ಜುಲೈ 25)ರಂದು ಆನ್‍ಲೈನ್‍ನಲ್ಲಿ ಸೇಲ್ ಆರಂಭವಾಗಿತ್ತು. ಸೇಲ್ ಆರಂಭಗೊಂಡ ಕೇವಲ 178 ಸೆಕೆಂಡುಗಳಲ್ಲಿ ಅಂದರೆ ಮೂರು ನಿಮಿಷಗಳೊಳಗೆ ಎಲ್ಲಾ ಬೈಕ್‍ಗಳು ಸೋಲ್ಡ್ ಔಟ್ ಆಗಿದೆ.

ಕ್ಲಾಸಿಕ್ 500 ಪೆಗಾನನ್ ಬೈಕ್‌ಗಳು ಲಿಮಿಟೆಡ್ ಎಡಿಷನ್ ಮಾದರಿಯಾಗಿದ್ದು, ಮಹಾರಾಷ್ಟ್ರ ಆನ್ ರೋಡ್ ಬೆಲೆಗಳ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ 2.49 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಕ್ಲಾಸಿಕ್ 500 ಪೆಗಾಸಸ್ ಬೈಕ್ ಲಿಮಿಟೆಡ್ ಎಡಿಷನ್ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯ ಬೈಕ್‌ಗಳು ಮಾತ್ರ ಮಾರಾಟಕ್ಕಿದ್ದು, ಇದರಿಂದಾಗಿಯೇ ವಿನೂತನ ಬೈಕ್ ಖರೀದಿಗೆ ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ಪೆಗಾಸಸ್ ಮೋಟಾರ್‍ಸೈಕಲ್‍ನ ಮಾರಾಟವು ರಾಯಲ್ ಎನ್‍ಫೀಲ್ಡ್ ಬ್ರ್ಯಾಂಡ್ ಅನ್ನು ಮತ್ತೊಮ್ಮೆ ಪ್ರಚೋದಿಸಲು ಮಹತ್ತರವಾದ ಮಹತ್ವಾಕಾಂಕ್ಷೆಯನ್ನು ತೋರಿಸಿದೆ. ಎಲ್ಲಾ ನಿರೀಕ್ಷೆಗಳಿಗೂ ಮೀರಿ 250 ಸೀಮಿತ ಆವೃತ್ತಿಯ ಪೆಗಾಸಸ್ ಮೋಟಾರ್‍ಸೈಕಲ್ ಅನ್ನು 178 ಸೆಕೆಂಡುಗಳ ದಾಖಲೆ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮುಕ್ತಾಯಗೊಳಿಸಲಾಯಿತು!

ನಾನು ಕ್ಲಾಸಿಕ್ ಪೆಗಾಸಸ್ ಲಿಮಿಟೆಡ್ ಆವೃತ್ತಿ ಮೋಟಾರು ಸೈಕಲ್ನ ಹೆಮ್ಮೆಯ ಮಾಲೀಕರಾಗಿದ್ದ ಎಲ್ಲಾ ಗ್ರಾಹಕರಿಗೆ ಅಭಿನಂದಿಸುತ್ತೇನೆ ಮತ್ತು ಅವರ ಬೆಂಬಲ ಮತ್ತು ಪೋಷಣೆಗೆ ಧನ್ಯವಾದಗಳು ಎಂದು ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಅಧ್ಯಕ್ಷರಾದ ರುದ್ರತೇಜ್ ಹೇಳಿಕೊಂಡಿದ್ದಾರೆ.

ಇದರಲ್ಲಿ ಭಾರತೀಯ ಮಾರುಕಟ್ಟೆಗಾಗಿ 250 ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳನ್ನು ಮಾತ್ರವೇ ಮಾರಾಟಕ್ಕಿದ್ದು, ಜುಲೈ 10ರಂದು ಹೊಸ ಬೈಕ್ ಖರೀದಿಗಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

2ನೇ ಮಹಾಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದ ಬ್ರಿಟಿಷ್ ಪ್ಯಾರಾಟೂರ್ಪ್‌ಗಳಾದ ಫ್ಲೈಯಿಂಗ್ ಫ್ಲಿಯಾ ಪ್ರೇರಣೆಯೊಂದಿಗೆ ಕ್ಲಾಸಿಕ್ 500 ಪೆಗಾಸಸ್ ಆವೃತ್ತಿಯನ್ನು ಹೊರತರಲಾಗಿದ್ದು, ಇದು ಆರ್‌ಇ ಸಂಸ್ಥೆಯ ಮತ್ತೊಂದು ಜನಪ್ರಿಯ ಡಬ್ಲ್ಯುಡಿ 125 ವಿನ್ಯಾಸಗಳ ಆಧಾರದೊಂದಿಗೆ ನಿರ್ಮಾಣವಾಗಿದೆ.

ಹೊಸ ಬೈಕ್ ವಿನ್ಯಾಸಗಳನ್ನು 2 ಸ್ಟೋಕ್ ಡಬ್ಲ್ಯುಡಿ 125 ಬೈಕ್ ಮಾದರಿಯಲ್ಲೇ ಅಭಿವೃದ್ದಿ ಮಾಡಲಾಗಿದ್ದು, ಮಿಲಟರಿ ವರ್ಷನ್ ಮಾದರಿಯಲ್ಲಿ ವಿವಿಧ ನಮೂನೆಯ ಸೌಲಭ್ಯಗಳನ್ನು ಹೊಂದಿರುವುದೇ ಈ ಬೈಕಿನ ಮತ್ತೊಂದು ವಿಶೇಷವಾಗಿದೆ.

ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು 499ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27.2-ಬಿಎಚ್‌ಪಿ ಮತ್ತು 41.3-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಹ್ಯಾಂಡಲ್ ಬಾರ್, ಹೆಡ್‌ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ಯಾನವಾಸ್ ಪ್ಯಾನಿಯರ್ಸ್ ಮತ್ತು ಫ್ಯೂಲ್ ಟ್ಯಾಂಕ್ ಮೇಲೆ ಪೆಗಾಸಸ್ ಲೊಗೊ ಬೈಕಿನ ಅಂದವನ್ನು ಹೆಚ್ಚಿಸಲಿದ್ದು, ಆಯಿವ್ ಡ್ರ್ಯಾಬ್ ಗ್ರಿನ್, ಸರ್ವಿಸ್ ಬ್ರೌನ್ ಬಣ್ಣಗಳಲ್ಲಿ ಲಭ್ಯವಿರಲಿವೆ.


Click it and Unblock the Notifications








