ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಫೀಚರ್ಸ್...
ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತನ್ನ ಹೊಸ ಥಂಡರ್‍ಬರ್ಡ್ 350ಎಕ್ಸ್ ಮತ್ತು ಥಂಡರ್ಬರ್ಡ್ 500ಎಕ್ಸ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತನ್ನ ಹೊಸ ಥಂಡರ್‍ಬರ್ಡ್ 350ಎಕ್ಸ್ ಮತ್ತು ಥಂಡರ್ಬರ್ಡ್ 500ಎಕ್ಸ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

ಎಕ್ಸ್ ಶೋರಂ (ದೆಹಲಿ) ಪ್ರಕಾರ ಥಂಡರ್‍ಬರ್ಡ್ 350ಎಕ್ಸ್ ಬೈಕ್ ಮಾದರಿಯು 1.56 ಲಕ್ಷ ಮತ್ತು ಥಂಡರ್ಬರ್ಡ್ 500ಎಕ್ಸ್ ಬೈಕ್ ಮಾದರಿಯು 1.98 ಲಕ್ಷ ಬೆಲೆ ಪಡೆದಿದ್ದು, ಹೊರ ವಿನ್ಯಾಸಗಳನ್ನು ಹೊರತುಪಡಿಸಿ ತನ್ನ ರೆಗ್ಯುಲರ್ ಆರ್‍ಇ ಥಂಡರ್‍ಬರ್ಡ್ ಮಾದರಿಗಳ ಎಂಜಿನ್ ವೈಶಿಷ್ಟ್ಯತೆಗಳನ್ನೇ ಹೊಸ ಬೈಕಿನಲ್ಲೂ ಮುಂದುವರಿದೆ.

ಎಂಜಿನ್ ಸಾಮರ್ಥ್ಯ
ಥಂಡರ್‍ಬರ್ಡ್ 350ಎಕ್ಸ್ ಬೈಕ್ 346ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 19 ಬಿಹೆಚ್‍ಪಿ ಮಾತು 28 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ.

ಹಾಗೆಯೇ ಥಂಡರ್‍ಬರ್ಡ್ 500 ಎಕ್ಸ್ ಬೈಕ್ 499 ಸಿಸಿ ಏರ್ ಕೂಲ್ಡ್ ಫ್ಯುಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 27 ಬಿಹೆಚ್‍ಪಿ ಮತ್ತು 41.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಈ ಎರಡು ಬೈಕುಗಳ ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸಿಗೆ ಜೋಡಿಸಲಾಗಿದೆ.

ವೈಶಿಷ್ಟ್ಯತೆಗಳು
ಥಂಡರ್‍ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳು ಹೊಸ ಬಣ್ಣವನ್ನು ಪಡೆದಿದ್ದು, ಫ್ಯುಯಲ್ ಟ್ಯಾಂಕ್ ಮೇಲೆ ಗ್ಲಾಸ್ ಪೇಯಿಂಟ್ ನೀಡಲಾಗಿದೆ. ಬೈಕಿನ ಬೇರೆಲ್ಲಾ ಬಾಡಿ ಕಾಂಪೋನೆಂಟ್‍ಗಳಿಗೆ ಬ್ಲಾಕ್ ಪೆಯಿಂಟ್‍ನಿಂದ ಹೈಲೈಟ್ ಮಾಡಲಾಗಿದೆ.

ಜೊತೆಗೆ ಎಕ್ಸಾಸ್ಟ್ ಭಾಗವು ಸಟಿನ್ ಬ್ಲಾಕ್ ಬಣ್ಣ ಹೊಂದಿದ್ದು, ಡ್ರಿಫ್ಟರ್ ಬ್ಲೂ, ಗೇಟ್‍ವೇ ಆರೆಂಜ್, ರೋವಿಂಗ್ ರೆಡ್ ಮತ್ತು ವಿಂಸಿಕಲ್ ವೈಟ್ ಬಣ್ಣಗಳಲ್ಲಿ ದೊರೆಯಲಿದೆ.

ವಿಶೇಷ ಸೀಟ್ ವಿನ್ಯಾಸ
ಥಂಡರ್‍ಬರ್ಡ್ ಎಕ್ಸ್ ಸರಣಿಯ ಬೈಕ್‌ಗಳು ಹೊಸದಾಗಿ 'ಗನ್‍ಸ್ಲೈಡರ್' ಸೀಟ್ ವಿನ್ಯಾಸವನ್ನು ಪದೆದುಕೊಂಡಿವೆ. ಇದಲ್ಲದೆ ಹಳೆಯ ರೆಗ್ಯುಲರ್ ಥಂಡರ್‍ಬರ್ಡ್ ಬೈಕ್‍ಗಳಲ್ಲಿ ಕಾಣಬಹುದಾದ ಪಿಲ್ಲಿಯಾನ್ ಬ್ಯಾಕ್‍ರೆಸ್ಟ್ ಸೀಟ್‍ಗಳನ್ನು ಕಳೆದುಕೊಂಡಿದೆ.

ಈ ಬೈಕ್‍ಗಳು 9 ಸ್ಪೋಕ್ ಅಲಾಯ್ ವೀಲ್‍ಗಳನ್ನು ಪಡೆದಿದ್ದು, ರಾಯಲ್ ಎನ್‍ಫೀಲ್ಡ್ ಬೈಕುಗಳಲ್ಲಿ ಹಿಂದೆಂದೂ ಬಳಸಲಾಗದ ಎಂಆರ್‍ಎಫ್ ನಯ್ಲೋಗ್ರಿಪ್ ಜಪ್ಪರ್ ಟ್ಯೂಬ್‍ಲೆಸ್ ಟೈರ್‍ಗಳನ್ನು ಪಡೆದುಕೊಂಡಿರುವು ವಿಶೇಷವಾಗಿದೆ.

ಹೊಸ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕುಗಳು ಚಿಕ್ಕದಾದ ಹ್ಯಾಂಡಲ್‍ಬಾರ್‍ಗಳನ್ನು ಪಡೆದುಕೊಂಡಿದ್ದು, ರೆಗ್ಯುಲರ್ ಆವೃತ್ತಿಗಳಿಗಿಂತ ಕೊಂಚ ಮುಂಭಾದದಲ್ಲಿ ಅಳವಡಿಸಲಾಗಿದೆ. ಸಂಕ್ಷಿಪ್ತ ಹಿಂಭಾಗದ ಮಡ್ಗಾರ್ಡ್ ಹೊಸ ಗ್ರ್ಯಾಬ್ ರೈಲ್ ವಿನ್ಯಾಸವನ್ನು ಪಡೆದುಕೊಂಡಿವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳ ಬೈಕ್‍ಗಳಿದ್ದು, ಮಾರುಕಟ್ಟೆಯಲ್ಲಿ ವಿಭಿನ್ನತೆಗಾಗಿ ಹೊಸ ವೈಶಿಷ್ಟ್ಯಗಳು ಮತ್ತು ವಿನ್ಯಾಸದೊಂದಿಗೆ ಈ ಬೈಕನ್ನು ತಯಾರಿಸಲಾಗಿದೆ ಎಂದು ಹೇಳಲಾಗಿದೆ. ಹಿಂದಿನ ಮಾದರಿಗಳಿಗಿಂತ ಥಂಡರ್‍ಬರ್ಡ್ ಬೈಕ್ ಗಳು ಬೆಲೆಯಲ್ಲಿ ರೂ.8 ಸಾವಿರ ಹೆಚ್ಚಿರಲಿದೆ.


Click it and Unblock the Notifications








