ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಇಟಾಲಿಯನ್ ಮೂಲದ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ವಿನೂತನ ಆವೃತ್ತಿಯ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ವರದಿಗಳ ಪ್ರಕಾರ ಹೊಸ ಬೈಕ್ ಮಾದರಿಯು ಇದೇ ತಿಂಗಳು 11ರಂದು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಭಾರತದಲ್ಲಿ ಮೊದಲ ಬಾರಿಗೆ ಬೈಕ್ ಉತ್ಪಾದನೆ ಕೈಗೊಳ್ಳುತ್ತಿರುವ ಎಸ್‌ಡಬ್ಲ್ಯುಎಂ ಸಂಸ್ಥೆಯು ಕೆನೆಟಿಕ್ ಗ್ರೂಪ್ ಮೋಟಾರ್‌ರಾಯಲ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಮೊದಲ ಹಂತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಬೈಕ್ ಮಾದರಿಗಳ ಬಗೆಗೆ ಈಗಾಗಲೇ ಮಾಹಿತಿ ಹೊರಹಾಕಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಸುಧಾರಿತ ಇಟಾಲಿಯನ್ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಹೊಂದಿರುವ ಎಸ್‌ಡಬ್ಲ್ಯುಎಂ ಸೂಪರ್ ಡ್ಯುಯಲ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲಿದ್ದು, ಹೊಸ ಬೈಕ್ ಮಾದರಿಯು ಟಿ ಮತ್ತು ಎಕ್ಸ್ ಎನ್ನುವ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿವೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಎಸ್‌ಡಬ್ಲ್ಯುಎಂ ಸೂಪರ್ ಡ್ಯುಯಲ್ ಬೈಕ್‌ಗಳಲ್ಲಿ ಟಿ ವೆರಿಯೆಂಟ್‌ಗಳು ಆರಂಭಿಕ ಅಡ್ವೆಂಚರ್-ಟೂರರ್ ಬೈಕ್ ಮಾದರಿಗಳಾಗಿದ್ದಲ್ಲಿ, ಎಕ್ಸ್ ವೆರಿಯೆಂಟ್‌ಗಳು ಟಾಪ್ ಎಂಡ್ ‌ವೈಶಿಷ್ಟ್ಯತೆಗಳೊಂದಿಗೆ ಆಪ್ ರೋಡ್ ಬೈಕ್ ಪ್ರೇಮಿಗಳನ್ನು ಸೆಳೆಯಲಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಎಂಜಿನ್ ಸಾಮರ್ಥ್ಯ

ಹೊಸ ಮೋಟಾರ್ ಸೈಕಲ್‌ಗಳು 600ಸಿಸಿ ಸಾಮರ್ಥ್ಯದ ಡಿಒಹೆಚ್‌ಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 53.6-ಬಿಎಚ್‌ಪಿ ಮತ್ತು 53.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಆಪ್ ರೋಡ್ ಬೈಕ್ ಮಾದರಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಬೈಕ್‌ಗಳಲ್ಲಿ ಹಲವು ಮಾದರಿಯ ಆಪ್ ರೋಡ್‌ ಕೌಶಲ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿದ್ದು, 45ಎಂಎಂ ಸುತ್ತಳತೆಯ ಯುಎಸ್‌ಡಿ ಫ್ರಂಟ್ ಫೋಕ್ಸ್ ಮತ್ತು ರಿಯರ್ ಮೊನೊಶಾರ್ಕ್, ಫ್ರಂಟ್ 210ಎಂಎಂ ಮತ್ತು ರಿಯರ್ 220ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಹಾಗೆಯೇ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಬೈಕಿನ ಮುಂಭಾಗದ ಚಕ್ರದಲ್ಲಿ ಬ್ರಿಂಬೋ ನಿರ್ಮಾಣದ 300ಎಂಎಂ ಫ್ರಂಟ್ ಮತ್ತು 220ಎಂಎಂ ರಿಯರ್ ಸಿಂಗಲ್ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನಲ್ ಎಬಿಎಸ್ ಜೋಡಣೆ ಮಾಡಲಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಇದರೊಂದಿಗೆ ದುಬಾರಿ ಬೆಲೆಯ ಮೆಟ್ಲೈಜರ್ ಎನ್‌ಡ್ಯೂರೋ 3 ಸಹರಾ ಟೈರ್ ಸೌಲಭ್ಯವನ್ನು ಹೊಂದಿರುವ ಹೊಸ ಬೈಕ್‌ಗಳು ಆಪ್ ರೋಡ್‌ ಕೌಶಲ್ಯದ ಮೇಲೆ ಹೆಚ್ಚಿನ ಗಮನಹರಿಸಿದ್ದು, 12ವಿ ಚಾರ್ಜಿಂಗ್ ಸಾಕೇಟ್, ಸಣ್ಣದಾದ ವೀಂಡ್‌ಶೀಲ್ಡ್, ಹ್ಯಾಂಡ್ ಗಾರ್ಡ್, ಎಲ್‌ಇಡಿ ಸ್ಪೋರ್ಟ್‌ಲೈಟ್, ಎಂಜಿನ್ ಗಾರ್ಡ್ ಮತ್ತು 33-ಲೀಟರ್ ಸಾಮರ್ಥ್ಯದ ಅಲ್ಯುಮಿನಿಯಂ ಸೈಡ್ ಕೇಸ್ ನೀಡಲಾಗುತ್ತದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಬೈಕಿನ ಬೆಲೆಗಳು(ಅಂದಾಜು)

ವಿಶೇಷವಾಗಿ ಆಪ್ ರೋಡಿಂಗ್ ಪ್ರಿಯರಿಗಾಗಿಯೇ ಈ ಬೈಕ್ ಮಾದರಿಗಳು ಸಿದ್ಧಗೊಂಡಿದ್ದು, ಬೆಲೆಗಳು ಕೂಡಾ ಸ್ವಲ್ಪ ಮಟ್ಟಿಗೆ ದುಬಾರಿ ಎನ್ನಿಸಲಿವೆ. ಕೆಲವು ಸುದ್ದಿಮೂಲಗಳ ಪ್ರಕಾರ ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.5.50 ಲಕ್ಷದಿಂದ ರೂ. 6 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿದೆ ಆಪ್ ರೋಡ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

ಒಟ್ಟಿನಲ್ಲಿ ಹತ್ತು ವಿಶೇಷತೆಗಳೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ಕೆನೆಟಿಕ್ ಗ್ರೂಪ್‌ನೊಂದಿಗೆ ಸೇರಿ ಹೊಸ ಮಾದರಿಯ ಬೈಕ್ ಬಿಡುಗಡೆಗೊಳಿಸುತ್ತಿದ್ದು, ಸುಜುಕಿ ವಿ-ಸ್ಟೋಮ್ 650 ಎಕ್ಸ್‌ಟಿ ಅಡ್ವೆಂಚರ್ ಮತ್ತು ಕವಾಸಕಿ ವರ್ಸ್ಸಿ 650 ಬೈಕ್‌ಗಳಿಗೆ ತೀವ್ರ ನೀಡುವ ನೀರಿಕ್ಷೆಯಲ್ಲಿದೆ.

Most Read Articles

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಫೋಟೋ ಗ್ಯಾಲರಿ..!

Kannada
English summary
SWM Superdual T Adventure-Tourer Launch Details Revealed — To Rival The Suzuki V-Strom 650.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X