ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇಂಧನದ ಬೆಲೆಯು ಏರಿಕೆಯಾಗುತ್ತಲೆ ಇದೆ. ಕಳೆದ ಎರಡು ವಾರಗಳಲ್ಲಿ ಇಂಧನ ಬೆಲೆಗಳು ಐದು ವರ್ಶದ ಗರಿಷ್ಠವನ್ನು ತಲುಪಿದೆ.

By Rahul Ts

ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇಂಧನದ ಬೆಲೆಯು ಏರಿಕೆಯಾಗುತ್ತಲೆ ಇದೆ. ಕಳೆದ ಎರಡು ವಾರಗಳಲ್ಲಿ ಇಂಧನ ಬೆಲೆಗಳು ಐದು ವರ್ಶದ ಗರಿಷ್ಠವನ್ನು ತಲುಪಿದೆ. ಈ ಸಮಯದಲ್ಲಿ ದ್ವಿಚಕ್ರ ವಾಹನಗಳ ಮೇಲೆ ಅಧಾರವಾಗಿರುವ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ನಿಯಂತ್ರಣವೆ ಇಲ್ಲದೆ ಏರಿಕೆಯಾಗುತ್ತಿರುವ್ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ಮೈಲೇಜ್ ನೀಡುವ ಬೈಕ್‍‍ಗಳನ್ನು ಆಯ್ಕೆ ಮಾಡಿಕೊಳ್ಳುವುದು. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ಭಾರತ ದೇಶದ 5 ಬೆಸ್ಟ್ ಮೈಲೇಜ್ ಬೈಕ್‍‍ಗಳ ಬಗ್ಗೆ ತಿಳಿಯಿರಿ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ಹೀರೋ ಹೆಚ್ಎಫ್ ಬೈಕ್

ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಜಪಾನ್ ವಾಹನ ತಯಾರಿಕರಿಗೆ ಟಾಂಗ್ ನೀಡಲು ಎಂಟ್ರಿ ಲೆವೆಲ್ ಮೋಟಾರ್‍‍ಸೈಕಲ್ ಸೆಗ್ಮೆಂಟ್‍‍ನಲ್ಲಿ ಹೆಚ್‍ಎಫ್ ಸಿರೀಸ್ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದೆ. ಹೆಚ್ಎಫ್ ಸಿರೀಸ್ ಪ್ರಸ್ಥುತ ಮಾರುಕಟ್ಟೆಯಲ್ಲಿ ಹೆಚ್ಎಫ್ ಡಾನ್, ಹೆಚ್ಎಫ್ ಡೀಲಕ್ಸ್ ಮತ್ತು ಹೆಚ್‍ಎಫ್ ಡೀಲಕ್ಸ್ ಇಕೊ ಎಂಬ ವೇಯಂಟ್‍‍ಗಳಲ್ಲಿ ಲಭ್ಯವಿದೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ತಾಂತ್ರಿಕವಾಗಿ ಹೀರೋ ಹೆಚ್ಎಫ್ ಸಿರೀಸ್ ಬೈಕ್ 97.2 ಸಿಸಿ ಏರ್ ಕೂಲ್ಡ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 8.36 ಬಿಹೆಚ್‍‍ಪಿ ಮತ್ತು 8.05 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮೈಲೇಜ್ ಮತ್ತು ಬೆಲೆ

ಹೀರೋ ಹೆಚ್‍ಎಫ್ ಸಿರೀಸ್ ಮೈಲೇಜ್ ಲೀಟರ್‍‍ಗೆ 88.5 ಕಿಲೋಮೀಟರ್.

ಹೀರೋ ಹೆಚ್ಎಫ್ ಸಿರೀಸ್ ಪ್ರಾರಂಭಿಕ ಬೆಲೆ ರೂ. 38,777 ಸಾವಿರ

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ಟಿವಿಎಸ್ ಸ್ಪೋರ್ಟ್ಸ್

ಹೊಸೂರು ಕೇಂದ್ರವಾಗಿ ದ್ವಿಚಕ್ರ ವಾಹನಗಳನ್ನು ಉತ್ಪತ್ತಿ ಮಾಡುತ್ತಿರುವ ದಕ್ಷಿಣ ಭಾರತದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್‍‍ನ ಸ್ಪೋರ್ಟ್ಸ್ ಬೈಕ್ ಟಿವಿಎಸ್ ಸಂಸ್ಥೆಯ ಬೆಸ್ಟ್ ಮೈಲೇಜ್ ನೀಡುವ ಬೈಕ್ ಆಗಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ತಾಂತ್ರಿಕವಾಗಿ ಟಿವಿಎಸ್ ಸ್ಪೋರ್ಟ್ಸ್ ಬೈಕ್ 99.7 ಸಿಸಿ, ಸಿಂಗಲ್ ಸಿಲೆಂಡರ್ ಡ್ಯೂರಾ ಲೈಫ್ ಪೆಟ್ರೋಲ್ ಎಂಜಿನ್ ಸಹಾಯದಿಂದ 7.4 ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟಿವಿಎಸ್ ಸ್ಪೋರ್ಟ್ಸ್ ಮೈಲೇಜ್ - ಲೀಟರ್‍‍ಗೆ 95 ಕಿಲೋಮೀಟರ್

ಟಿವಿಎಸ್ ಸ್ಪೋರ್ಟ್ಸ್ ಪ್ರಾರಂಭಿಕ ಬೆಲೆ ರೂ 40.035 ಸಾವಿರ

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ಬಜಾಜ್ ಪ್ಲಾಟಿನಾ 100ಇಎಸ್

ಬಜಾಜ್ ಪ್ಲಾಟಿನಾ 100ಇಎಸ್ ಬೈಕ್ ಅನ್ನು ಸಿಟಿ100 ಬೈಕ್‍‍ಗಿಂತ ಮೇಲಿನ ಸ್ಥಾನದಲ್ಲಿ ಇರಿಸಲಾಗಿದೆ. ಎರಡು ಬೈಕ್‍‍ಗಳು ಎಷ್ಟೊ ಬಿಡಿ ಭಾಗಗಳನ್ನು ಹಂಚಿಕೊಂಡಿದ್ದರೂ ಇವೆರಡರ ನಡುವೆ ಕೊಂಚ ವ್ಯತ್ಯಾಸವಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಶನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಶಾಕ್ ಅಬ್ಸಾರ್ಬರ್‍‍ಗಳನ್ನು ಪಡೆದುಕೊಂಡಿದೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ತಾಂತ್ರಿಕವಾಗಿ ಬಜಾಜ್ ಪ್ಲಾಟಿನಾ ಬೈಕ್‍‍ನಲ್ಲಿ 102ಸಿಸಿ ಸಿಂಗಲ್ ಸಿಲೆಂಡರ್ 2 ವೇಲ್ವ್ ಡಿಟಿಎಸ್-ಐ ಮತ್ತು ಎಕ್ಸಾಸ್ಟ್ ಎಂಜಿನ್ ಸಹಾಯದಿಂದ 7.8 ಬಿಹೆಚ್‍‍ಪಿ ಮತ್ತು 8.34 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಜಾಜ್ ಪ್ಲಾಟಿನಾ 100ಇಎಸ್ ಮೈಲೇಜ್ ಲೀಟರ್‍‍ಗೆ 96.9 ಕಿಲೋಮೀಟರ್

ಬಜಾಜ್ ಪ್ಲಾಟಿನಾ 100ಇಎಸ್ ಪ್ರಾರಂಭಿಕ ಬೆಲೆ 47.667 ಸಾವಿರ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ಬಜಾಜ್ ಸಿಟಿ 100

ಬಜಾಜ್ ಆಟೋ ಲೈನ್‍ಅಪ್‍ನಿಂದ ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಲ್ಲಿ ಬಜಾಜ್ ಸಿಟಿ 100 ಕೂಡಾ ಒಂದು. ಬಜಾಜ್ ಸಿಟಿ 100 ಪ್ಲಾತಿನಾ 100ಎಎಸ್‍‍ನಂತೆಯೆ ಸಸ್ಪೆಂಷನ್ ಮತ್ತು ಇನ್ನಿತರೆ ಫೀಚರ್‍‍ಗಳನ್ನು ಪಡೆದುಕೊಂಡಿದೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ತಾಂತ್ರಿಕವಾಗಿ ಇದರಲ್ಲಿರುವ 102ಸಿಸಿ ಸಿಂಗಲ್ ಸಿಲೆಂಡರ್ 2 ವೇಲ್ವ್ ಎಂಜಿನ್ ಸಹಾಯದಿಂದ 7.7 ಬಿಹೆಚ್‍‍ಪಿ ಮತ್ತು 8.34ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರಸ್ಥುತ ಈ ಬೈಕ್ ಸಿಟಿ 100ಬಿ. ಸಿಟಿ 100ಕೆಎಸ್ ಮತ್ತು ಸಿಟಿ 100ಇಎಸ್ ಅಲಾಯ್ ಎಂಬ ವೇರಿಯಂಟ್‍‍ಗಳಲ್ಲಿ ಲಭ್ಯವಿದೆ.

ಬಜಾಜ್ ಸಿಟಿ 100 ಮೈಲೇಜ್ ಲೀಟರ್‍‍ಗೆ 99.1 ಕಿಲೋಮೀಟರ್

ಬಜಾಜ್ ಸಿಟಿ 100 ಪ್ರಾರಂಭಿಕ ಬೆಲೆ ರೂ. 31,226 ಸಾವಿರ

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್

ಮೈಲೇಜ್ ವಿಭಾಗದಲ್ಲಿ ಸ್ಪ್ಲೆಂಡರ್ ಸೋಲನ್ನೆ ಕಂಡದ ಚ್ಯಾಂಪಿಯನ್ ಆಗಿ ನಿಂತಿದೆ. ಗುರ್ಗಾವ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‍ ಪರಿಚಯಿಸಿದ ಸ್ಪ್ಲೆಂಡರ್ ಬೈಕ್ ಐ3ಎಸ್ ಟೇಕ್ನಾಲಜಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ಭಾರತ ದೇಶದ 5 ಬೆಸ್ಟ್ ಮೈಲೇಜ್ ನೀಡುವ ಬೈಕ್‍‍ಗಳಿವು..

ತಾಂತ್ರಿಕವಾಗಿ ಹೀರೋ ಸ್ಪ್ಲೆಂಡರ್ ಬೈಕ್ 97.2ಸಿಸಿ ಏರ್ ಕೂಲ್ಡ್ ಎಂಜಿನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 8.1 ಬಿಹೆಚ್‍‍ಪಿ ಮತ್ತು 8.05 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಗೇ‍‍ರ್‍‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ,

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಮೈಲೇಜ್ ಲೀಟರ್‍‍ಗೆ 102 ಕಿಲೋಮೀಟರ್

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ ಪ್ರಾರಂಬಿಕ ಬೆಲೆ ರೂ. 52.300 ಸಾವಿರ

Most Read Articles

Kannada
Read more on top 5 mileage bikes
English summary
Top 5 most fuel efficient bikes in india
Story first published: Friday, June 1, 2018, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X