2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

ಭಾರತೀಯ ಮಾರುಕಟ್ಟೆಯು ಮಧ್ಯಮ ಗಾತ್ರದ ಬೈಕ್ ಮತ್ತು ಸ್ಕೂಟರ್ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರಲ್ಲೂ ಕಳೆದ ಅಗಸ್ಟ್ ಅವಧಿಯಲ್ಲಿ ಮಾರಾಟಗೊಂಡಿರುವ ಟಾಪ್ 10 ಬೈಕ್‌ಗಳ ಪಟ್ಟಿಯು ಅಚ್ಚರಿಗೆ ಕಾರಣವಾಗಿದೆ. 2018ರ ಅವಧಿಯಲ್ಲಿನ ಇತರೆ ತಿಂಗಳಲ್ಲಿ ಮಾರಾಟಗೊಂಡ ಬೈಕ್ ಸಂಖ್ಯೆಗಳಿಗಿಂತ ಅಗಸ್ಟ್ ಅವಧಿಯಲ್ಲಿ ಅತಿ ಬೈಕ್‌ಗಳು ಮಾರಾಟವಾಗಿದ್ದು, ಟಾಪ್ 1ರಲ್ಲಿ ಅಚ್ಚರಿ ಹೆಸರು ಕೇಳಿಬಂದಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮೋಟಾರ್‌ಸೈಕಲ್ ಮತ್ತು ಹೀರೋ ಮೋಟೊಕಾರ್ಪ್ ಸಂಸ್ಥೆಯ ನಡುವೆ ಭಾರೀ ಪೈಪೋಟಿ ಇದ್ದು, ಕಳೆದ ಕೆಲ ತಿಂಗಳಿನಿಂದ ಅಗ್ರಸ್ಥಾನದಲ್ಲಿದ್ದ ಹೀರೋ ಸ್ಲೈಂಡರ್ ಈ ಬಾರಿ ಆಕ್ಟಿವಾ ಸ್ಕೂಟರ್ ಅಬ್ಬರದ ಮುಂದೆ ನೆಲಕಚ್ಚಿದೆ. ಆದರೂ ಟಾಪ್ 5ರ ಪಟ್ಟಿಯಲ್ಲಿ 3 ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ಸ್ಪೈಂಡರ್, ಹೆಚ್‌ಎಫ್ ಡಿಲಕ್ಸ್ ಮತ್ತು ಪ್ಯಾಷನ್ ಬೈಕ್‌ಗಳ ಮಾರಾಟದಲ್ಲಿನ ತನ್ನ ಜನಪ್ರಿಯತೆಯನ್ನ ಇದುವರೆಗೂ ಕಳೆದುಕೊಂಡಿಲ್ಲ. ಹಾಗಾದ್ರೆ ಟಾಪ್ 10 ಪಟ್ಟಿಯಲ್ಲಿ ಬೈಕ್‌ಗಳು ಯಾವವು?ಮತ್ತು ಅಗಸ್ಟ್ ಅವಧಿಯಲ್ಲಿ ಮಾರಾಟಗೊಂಡ ಬೈಕ್‌ಗಳು ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

01. ಹೋಂಡಾ ಆಕ್ಟಿವಾ

ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ಆಕ್ಟಿವಾ 5ಜಿ ಸ್ಕೂಟರ್‌ಗಳು ಸದ್ಯ ಯುವ ಸಮುದಾಯದ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಸ್ಪೈಂಡರ್ ಬೈಕ್‌ಗಳನ್ನು ಹಿಂದಿಕ್ಕುವ ಮೂಲಕ ಅಗಸ್ಟ್ ಅವಧಿಯಲ್ಲಿ ಹೋಂಡಾ ಸಂಸ್ಥೆಯು 3,10,851 ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಮೂಲಕ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

02. ಹೀರೋ ಸ್ಪೈಂಡರ್

ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪೈಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ಅಗಸ್ಟ್ ಅವಧಿಯಲ್ಲಿ ಆಕ್ಟಿವಾ ಸ್ಕೂಟರ್ ಮಾರಾಟಕ್ಕಿಂತ ಕಡಿಮೆ ಬೇಡಿಕೆಯನ್ನು ಪಡೆದುಕೊಂಡಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವ ಮೂಲಕ 2,47,116 ಬೈಕ್‌ಗಳನ್ನು ಮಾರಾಟ ಮಾಡಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

03. ಹೀರೋ ಹೆಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ಅಗಸ್ಟ್ ತಿಂಗಳಿನಲ್ಲಿ ಬರೋಬ್ಬರಿ 1,83,716 ಬೈಕ್‌ಗಳನ್ನ ಮಾರಾಟವಾಗುವ ಮೂಲಕ ಟಾಪ್ 3 ಸ್ಥಾನಕ್ಕೆರಿದ್ದು, ಕೆಲವು ತಿಂಗಳಿನಿಂದಲೂ ಟಾಪ್ 10ರ ಪಟ್ಟಿಯಲ್ಲಿ 3 ಅಥವಾ 4 ಸ್ಥಾನದಲ್ಲೇ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

04. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ಅಗಸ್ಟ್ ತಿಂಗಳಿನಲ್ಲಿ 1,08,790 ಬೈಕ್‌ಗಳು ಮಾರಾಟವಾಗಿದ್ದು, ತಾಂತ್ರಿಕವಾಗಿ ಅತ್ಯುತ್ತಮ ಮಟ್ಟದಲ್ಲಿರುವ ಹೋಂಡಾ ಸಿಬಿ ಶೈನ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

05. ಹೀರೋ ಪ್ಯಾಶನ್

ಅಗಸ್ಟ್ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 82,681 ಪ್ಯಾಶನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಶನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ ಟಿಆರ್ ಮತ್ತು ಪ್ರೊ ಐಎಸ್3 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

06. ಬಜಾಜ್ ಸಿಟಿ 100

ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್ ಒಟ್ಟು 3 ವಿವಿಧ ನಮೂನೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಸಿಟಿ ಬೈಕ್‌ಗಳು ಅಗಸ್ಟ್ ಅವಧಿಯಲ್ಲಿ 82,424 ಬೈಕ್‌ಗಳು ಮಾರಾಟಗೊಂಡಿವೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

07. ಟಿವಿಎಸ್ ಜೂಪಿಟರ್

ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ ನಂತರದ ಸ್ಥಾನದಲ್ಲಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 7ನೇ ಸ್ಥಾನದಲ್ಲಿದ್ದು, ಅಗಸ್ಟ್ ಅವಧಿಯಲ್ಲಿ 79,223 ಸ್ಕೂಟರ್‌ಗಳು ಮಾರಾಟವಾಗಿವೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

08. ಹೀರೋ ಗ್ಲ್ಯಾಮರ್

ಅಗಸ್ಟ್ ಅವಧಿಯಲ್ಲಿ ಬರೋಬ್ಬರಿ 74,097 ಹೀರೋ ಗ್ಲ್ಯಾಮರ್ ಬೈಕ್‌ಗಳು ಮಾರಾಟಗೊಂಡಿದ್ದು, ಕಳೆದ ಎರಡು ತಿಂಗಳ ಹಿಂದಿನ ಬೈಕ್ ಮಾರಾಟಕ್ಕೆ ಹೋಲಿಕೆ ಮಾಡಿದಾಗ ಸಿಟಿ 100 ಬೈಕಿಗಿಂತ ಕಡಿಮೆ ಮಾರಾಟ ದಾಖಲೆ ಮಾಡಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

09. ಟಿವಿಎಸ್ ಎಕ್ಸ್ಎಲ್ ಸೂಪರ್

ಗ್ರಾಮೀಣ ವಿಭಾಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟಿವಿಎಸ್ ಎಕ್ಸ್‌ಎಲ್ ಸೂಪರ್ ಬೈಕ್‌ಗಳು ಮಾರಾಟದಲ್ಲಿ ಇತರೆ ಜನಪ್ರಿಯ ಬೈಕ್‌ಗಳನ್ನೇ ಹಿಂದಿಕ್ಕಿದ್ದು, ಅಗಸ್ಟ್ ಅವಧಿಯಲ್ಲಿ ಒಟ್ಟು 70,883 ಬೈಕ್‌ಗಳು ಮಾರಾಟಗೊಳ್ಳುವ ಮೂಲಕ 9 ಸ್ಥಾನಕ್ಕೆ ಬಡ್ತಿ ಪಡೆದಿದೆ.

2018ರ ಅಗಸ್ಟ್‌ನಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿ ಹೀಗಿದೆ ನೋಡಿ..!

10. ಬಜಾಜ್ ಪಲ್ಸರ್

ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದರಲ್ಲಿ ಪಲ್ಸರ್ 135 ಮತ್ತು ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ಅಗಸ್ಟ್ ಅವಧಿಯಲ್ಲಿ ಬಜಾಜ್ ಸಂಸ್ಥೆಯು 70,051 ಬೈಕ್‌ಗಳನ್ನ ಮಾರಾಟ ಮಾಡಿದೆ.

More from DriveSpark

ಸದ್ಯ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಟಿವಿಎಸ್ ಹೊಚ್ಚ ಹೊಸ ರೆಡಿಯಾನ್ ಬೈಕ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..

Article Published On: Tuesday, September 25, 2018, 20:08 [IST]
English summary
Top-Selling Bikes In India August 2018: Honda Activa 5G Widens Gap Between Hero Splendor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+