ಬಹಿರಂಗವಾಯ್ತು ಟ್ರಯಂಫ್ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕಿನ ಬಿಡುಗಡೆ ಮಾಹಿತಿ..
ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಟ್ರಯಂಫ್ ಮೋಟಾರ್ ಸೈಕಲ್ ತನ್ನ ಹೊಸ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್‌ನ್ನು ಈ ಹಿಂದೆ 2017ರ ಬೈಕ್ ವೀಕ್ ಮೇಳದಲ್ಲಿ ಬಹಿರಂಗಪಡಿಸುವ ಮೂಲಕ ಐಷಾರಾಮಿ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು
ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಟ್ರಯಂಫ್ ಮೋಟಾರ್ ಸೈಕಲ್ ತನ್ನ ಹೊಸ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್‌ನ್ನು ಈ ಹಿಂದೆ 2017ರ ಬೈಕ್ ವೀಕ್ ಮೇಳದಲ್ಲಿ ಬಹಿರಂಗಪಡಿಸುವ ಮೂಲಕ ಐಷಾರಾಮಿ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು. ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಬೈಕಿನ ಬಿಡುಗಡೆ ಮಾಹಿತಿ ಕೂಡಾ ಬಹಿರಂಗವಾಗಿದೆ.

ಇದೇ ತಿಂಗಳ 27ರಂದು ಭಾರತದಲ್ಲಿ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬಿಡುಗಡೆಗೊಳಿಸುವ ಬಗ್ಗೆ ಟ್ರಯಂಫ್‌ನಿಂದ ಮಾಹಿತಿ ದೊರೆತಿದ್ದು, ಆಧುನಿಕ ಕ್ಲಾಸಿಕ್ ಬೈಕ್ ಸರಣಿಯಲ್ಲಿ ಇದು ಹೊಸ ಸಂಚಲನಕ್ಕೆ ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೊಸ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್ ಮಾದರಿಯು ಜನಪ್ರಿಯ ಬಾಬರ್ ಆವೃತ್ತಿಯನ್ನು ಆಧರಿಸಲಿದ್ದು, ಹೈಯರ್ ಸ್ಪೆಕ್ ಕಾಂಪೋನೆಂಟ್ಸ್ ನೊಂದಿಗೆ ಬರಲಿದೆ. ಬೈಕಿನ ಮುಂಭಾಗದ ವಿನ್ಯಾಸವು ಕೂಡಾ ಸಾಂಪ್ರದಾಯಿಕ ಶೈಲಿಯನ್ನು ಹೊಂದಿರುವಂತಹ ಕ್ಲಾಸಿಕ್ ರೌಂಡ್ ಹೆಡ್ ಲ್ಯಾಂಪ್ ಅನ್ನು ಪಡೆದಿದೆ.

ಇಷ್ಟೇ ಅಲ್ಲದೆ ಸ್ಪೀಡ್ ಮಾಸ್ಟರ್ ಬೈಕಿನ ಕ್ರೋಮ್ ಟ್ರೀಟ್ಮೆಂಟ್ ಬೈಕಿಗೆ ಕ್ಲಾಸಿಕ್ ರೂಪವನ್ನು ನೀಡಿದ್ದು, ಬಾಬರ್ ಬ್ಲಾಕ್ ಬಣ್ಣದ ಹಾಗೆಯೇ ಬೈಕ್ ಸ್ಕೋಮ್ ಮತ್ತು ಬಿಳಿ ಆಕ್ಸೆಂಟ್ ಪಾಲಿಷ್ಡ್ ಅಲ್ಯುಮಿನಿಯಂ ಸೀಟ್ ಅನ್ನು ಪಡಿದಿದೆ. ಜೊತೆಗೆ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಕೂಡ ಬೈಕಿಗೆ ರೆಟ್ರೊ ಲುಕ್ ನೀಡಿದೆ.

ಹೊಸ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಬೈಕ್ 1200 ಸಿಸಿ 270 ಡಿಗ್ರಿ ಕ್ರಾಂಕ್, ಲಿಕ್ವಿಡ್ ಕೋಲ್ಡ್ ಪ್ಯಾರಾಲಲ್ ಟ್ವಿನ್ ಎಂಜಿನ್ ಹೊಂದಿದ್ದು, 76-ಬಿಹೆಚ್ ಪಿ ಮತ್ತು 106-ಎನ್ಎಂ ಟಾರ್ಕನ್ನು ಉತ್ಪಾದನಾ ಸಾಮಥ್ಯ ಹೊಂದಿದೆ.

ಇನ್ನು ಬೈಕ್ 16-ಇಂಚಿನ ಅವೊನ್ ಕೋಬ್ರ ಹೊಂದಿರುವ ವೈರ್ ಸ್ಪೋಕ್ ವೀಲ್ ಗಳನ್ನು ಪಡೆದಿದ್ದು, ಟೂ-ಸ್ಟೆಪ್ ಸೀಟ್ ಮತ್ತು 12 ಲೀಟರ್ ಫ್ಯುಯಲ್ ಟ್ಯಾಂಕನ್ನು ಹೊಂದಿದೆ.

ಅಲ್ಲದೆ ಎಂಜಿನ್ ಕೂಲಿಂಗ್ ಫಿನ್ಸ್, ಕಾರ್ಬ್ರೊರೇಟರ್ ಶೈಲಿಯ ಬಾಡಿ, ರಬ್ಬರ್ ಫೋರ್ಕ್ ಗೈಟರ್ಸ್ ಮತ್ತು ಕಂಚಿನ ಬ್ಯಾಡ್ಜ್ ಬೈಕಿನ ರೆಟ್ರೋ ಮೋಡಿಯನ್ನು ಹೆಚ್ಚಿಸಿವೆ ಎನ್ನಬಹುದು.

ಇನ್ನು ಸ್ಫೀಡ್ ಮಾಸ್ಟರ್ ಬೈಕ್‌ಗಳು ಎರಡು ರೈಡಿಂಗ್ ಮೋಡ್ ವೈಶಿಷ್ಟ್ಯತೆಯೊಂದಿಗೆ ಎಬಿಎಸ್, ಕ್ರೂಸ್ ನಿಯಂತ್ರಕ ಮತ್ತು ಸ್ವಿಚೆಬಲ್ ಟ್ರಾಕ್ಷನ್ ನಿಯಂತ್ರಣವನ್ನು ಪಡೆದಿದ್ದು, 310 ಎಂಎಂ ಡ್ಯುಯಲ್-ಪಿಸ್ಟೋನ್ ಪಡೆದ ಡ್ಯುಯಲ್-ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಬೈಕ್ 245.5 ಕೆಜಿ ತೂಕ ಹೊಂದಿದ್ದು, 12 ಲೀಟರ್ ಫ್ಯುಯಲ್ ಟ್ಯಾಂಕನ್ನು ಪಡೆದಿದೆ.

ಹೊಸ ಟ್ರಯಂಫ್ ಬೋನ್ವಿಲ್ಲೆ ಸ್ಪೀಡ್ ಮಾಸ್ಟರ್ ಕ್ಲಾಸಿಕ್ ರೆಟ್ರೊ ಶೈಲಿ ಮತ್ತು ಬಾಬರ್ ವಿನ್ಯಾಸದ ಪರಿಪೂರ್ಣ ಮಿಶ್ರಣವಾಗಿದ್ದು, ಆಧುನಿಕ ಕ್ಲಾಸಿಕ್ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ಅನ್ನು ಅಭಿವೃದ್ಧಿ ಮಾಡಲಾಗಿದೆ.

ಇನ್ನು ಹೊಸ ಬೈಕ್ ಬೆಲೆಯು ಎಕ್ಸ್ ಶೋರಂ ಪ್ರಕಾರ 10 ರಿಂದ 11ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ಹೊಸ ಬೈಕಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications