ಆಟೋ ಎಕ್ಸ್ ಪೋ 2018: ಟಿವಿಎಸ್ ಮೊದಲ ಕ್ರೂಸರ್ ಬೈಕ್ ಝೆಪ್ಲಿನ್ ಅನಾವರಣ
ಟಿವಿಎಸ್ ಮೋಟಾರ್ಸ್ ಇದೀಗ ಕ್ರೂಸರ್ ಬೈಕ್ ಮಾದರಿಗಳ ನಿರ್ಮಾಣಕ್ಕೆ ಕೈ ಹಾಕಿದ್ದು, ಮೊದಲ ಪ್ರಯತ್ನದಲ್ಲೇ ವಿನೂತನ ವಿನ್ಯಾಸದ ಝೆಪ್ಲಿನ್ ಬೈಕ್ ಅನ್ನು ಅಭಿವೃದ್ಧಿಗೊಳಿಸಿ ಅನಾವರಣ ಮಾಡಿದೆ.
ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಟಿವಿಎಸ್ ಮೋಟಾರ್ಸ್ ಇದೀಗ ಕ್ರೂಸರ್ ಬೈಕ್ ಮಾದರಿಗಳ ನಿರ್ಮಾಣಕ್ಕೆ ಕೈ ಹಾಕಿದ್ದು, ಮೊದಲ ಪ್ರಯತ್ನದಲ್ಲೇ ವಿನೂತನ ವಿನ್ಯಾಸದ ಝೆಪ್ಲಿನ್ ಬೈಕ್ ಅನ್ನು ಅಭಿವೃದ್ಧಿಗೊಳಿಸಿ ಅನಾವರಣ ಮಾಡಿದೆ.

ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್‌ಗಳಿಗೆ ಯುವ ಸಮುದಾಯ ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್‌ಗೆ ಪ್ರತಿಸ್ಪರ್ಧಿಯಾಗಿ ಟಿವಿಎಸ್ ಮೋಟಾರ್ಸ್ ಕೂಡಾ ಝೆಪ್ಲಿನ್ ಎನ್ನುವ ಕ್ರೂಸರ್ ಬೈಕ್ ಅನ್ನು ನಿರ್ಮಾಣ ಮಾಡಿದೆ.

ದೆಹಲಿಯಲ್ಲಿ ನಡೆದಿರುವ 2018ರ ಆಟೋ ಎಕ್ಸ್ ಪೋದಲ್ಲಿ ಝೆಪ್ಲಿನ್ ಪ್ರದರ್ಶನ ಮಾಡಲಾಗಿದ್ದು, ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಈ ಬೈಕ್‌ಗಳು ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಹೀಗಾಗಿ ಝೆಫ್ಲಿನ್ ಬೈಕ್‌ಗಳನ್ನು ಸ್ಟಾರ್ಟ್ ಮಾಡುವಾಗ ಎಲೆಕ್ಟ್ರಿಕ್ ಎಂಜಿನ್ ಮೂಲಕ ಶುರುವಾಗಿ ತದನಂತರವಷ್ಟೇ ಪೆಟ್ರೋಲ್ ಎಂಜಿನ್‌ಗೆ ವರ್ಗಾವಣೆಯಾಗುತ್ತಿದೆ. ಇದಕ್ಕಾಗಿಯೇ ಈ ಬೈಕ್‌ಗಳಲ್ಲಿ 48ಕೆವಿ ಮೋಟಾರ್ ಎಂಜಿನ್ ಜೋಡಣೆ ಮಾಡಲಾಗಿದೆ.

ಇದರಿಂದಾಗಿ ಕ್ರೂಸರ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿರುವ ಝೆಪ್ಲಿನ್ ಬೈಕ್‌ಗಳು ಇ-ಬೂಸ್ಟ್ ಆಯ್ಕೆಯೊಂದಿಗೆ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಲಿವೆ.

ಎಂಜಿನ್ ಸಾಮರ್ಥ್ಯ
220 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಝೆಪ್ಲಿನ್ ಬೈಕ್‌ಗಳು, ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್‌ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿದೆ.

ಇನ್ನು ಝೆಪ್ಲಿನ್ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಲೈಟ್ ವೇಟ್ ಟ್ಯೂಬ್ ಲೇಸ್ ಟೈರ್, ಸ್ಪೋರ್ಕ್ ಚಕ್ರಗಳು, ಡ್ಯುಯಲ್ ಎಬಿಎಸ್ ಚಾನೆಲ್ ಮತ್ತು 41ಎಂಎಂ ಯುಎಸ್‌ಡಿ ಫ್ರಂಟ್ ಪೋರ್ಕ್ ಒದಗಿಸಲಾಗಿದೆ.

ಈ ಮೂಲಕ ಬಜಾಜ್ ಅವೆಂಜರ್ 220 ಕ್ರೂಸರ್ ಬೈಕ್ ತೀವ್ರ ಪೈಪೋಟಿ ನಡೆಸಲಿರುವ ಝೆಪ್ಲಿನ್ ಬೈಕ್‌ಗಳು ಹೊಸದಾಗಿ ಬಿಡುಗಡೆಯಾದ ಯುಎಂ ಮೋಟಾರ್ ಕ್ರೂಸರ್ ಬೈಕ್‌ಗಳಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಹೊಂದಿದೆ.


Click it and Unblock the Notifications








