ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

By Praveen Sannamani

ಜುಲೈ ತಿಂಗಳ ಅವಧಿಯಲ್ಲಿ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಬೈಕ್ ಮಾದರಿಗಳ ಮಾರಾಟದಲ್ಲಿ ಮುನ್ನಡೆ ಸಾಧಿಸಿದ್ದು, ಇದೀಗ ಅಗಸ್ಟ್ ಅವಧಿಯಲ್ಲೂ ಅಧಿಕ ಮಟ್ಟದ ಬೈಕ್ ಮಾರಾಟಕ್ಕಾಗಿ ತಂತ್ರ ರೂಪಿಸುತ್ತಿವೆ. ಹೀಗಾಗಿ ಗ್ರಾಹಕರ ಸೆಳೆಯುವ ಉದ್ದೇಶದಿಂದ ಆಕರ್ಷಕ ಡಿಸ್ಕೌಂಟ್‌ಗಳನ್ನ ಘೋಷಣೆ ಮಾಡಿದ್ದು, ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಉತ್ತಮ ಅವಕಾಶ ಎನ್ನಬಹುದು.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ದೇಶಿಯ ಮಾರುಕಟ್ಟೆ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಗಳಾದ ಸುಜುಕಿ, ಟಿವಿಎಸ್, ಬಜಾಜ್ ಮತ್ತು ಹೋಂಡಾ ಸೇರಿದಂತೆ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಗಳಾದ ಕವಾಸಕಿ, ಟ್ರಯಂಫ್ ಸಹ ತಮ್ಮ ಆಯ್ದ ಬೈಕ್‌ಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ್ದು, ಡಿಸ್ಕೌಂಟ್ ಆಫರ್‌ಗಳು ಆಯಾ ನಗರಗಳ ಮೇಲೆ ಬೈಕಿನ ಬೆಲೆಗಳು ನಿರ್ಧಾರವಾಗುತ್ತವೆ. ಇಲ್ಲಿ ನೀಡಲಾಗಿರುವ ಬೆಲೆಗಳು ಸಹ ಬೈಕ್ ಉತ್ಪಾದನಾ ಸಂಸ್ಥೆ ಮತ್ತು ಡೀಲರ್ಸ್‌ಗಳು ನೀಡುವ ಬೆಲೆಗಳನ್ನು ಆಧರಿಸಿ ಮಾಹಿತಿ ಸಿದ್ದಪಡಿಸಲಾಗಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಬಜಾಜ್ ಸಿಟಿ 100

ಅಗ್ಗದ ಬೆಲೆಯ ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಕಿಕ್ ಸ್ಟಾರ್ಟ್ ಆವೃತ್ತಿಗಳ ಮೇಲೆ ಬರೋಬ್ಬರಿ ರೂ. 9 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ 41 ಸಾವಿರ ಇದ್ದ ಬಜಾಜ್ ಸಿಟಿ 100 ಬೈಕ್ ಬೆಲೆಯು ರೂ. 32 ಸಾವಿರಕ್ಕೆ ಇಳಿಕೆಯಾಗಿದ್ದು, ಶೇ. 25 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ಬೈಕ್ ಮತ್ತಷ್ಟು ಜನಪ್ರಿಯತೆ ಹೊಂದುವ ನೀರಿಕ್ಷೆಯಲ್ಲಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಸುಜುಕಿ ಆಕ್ಸೆಸ್ 125

ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್‌ಗಳ ಪೈಕಿ ಸುಜುಕಿ ಆಕ್ಸೆಸ್ 125 ಕೂಡಾ ಒಂದು. ಅತ್ಯುತ್ತಮ ಎಂಜಿನ್ ಮತ್ತು ಮೈಲೇಜ್ ಹೊಂದಿರುವ ಆಕ್ಸೆಸ್ 125 ಸ್ಕೂಟರ್‌ಗಳ ಖರೀದಿ ಮೇಲೆ ಸದ್ಯ ರೂ. 7 ಸಾವಿರ ಡಿಸ್ಕೌಂಟ್ ದೊರಲಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಆಕ್ಸೆಸ್ 125 ಸ್ಕೂಟರ್‌ಗಳ ಮೇಲೆ ರೂ. 4,500 ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ದೇಶದ ಪ್ರಮುಖ ಮೆಟ್ರೋ ಸಿಟಿಗಳಾಗಿರುವ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿರುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ರೂ. 2,500 ಕ್ಯಾಶ್‌ಬ್ಯಾಕ್ ಸೌಲಭ್ಯ ಒದಗಿಸುತ್ತಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಟಿವಿಎಸ್ ಜೂಪಿಟರ್

ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ನಗರಪ್ರದೇಶದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಮಾರಾಟದಲ್ಲಿ ಮುನ್ನುಗ್ಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ 22 ಲಕ್ಷಕ್ಕೆ ತಲುಪಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಈ ಮೂಲಕ ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿರುವ ಜೂಪಿಟರ್ ಖರೀದಿಗೆ ಇಲ್ಲೊಂದು ಉತ್ತಮ ಅವಕಾಶವಿದ್ದು, ಜೂಪಿಟರ್ ಖರೀದಿಸುವ ಮೂಲಕ ರೂ. 4,300 ಕ್ಯಾಶ್‌ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಬಹುದು. ಡೀಲರ್ಸ್ ಮೂಲಕ ರೂ. 3 ಸಾವಿರ ಡಿಸ್ಕೌಂಟ್ ಸಿಕ್ಕಿದ್ದಲ್ಲಿ ಪೇಟಿಎಂ ನಿಂದ ಹಣ ಪಾವತಿ ಮಾಡಿದ್ದಲ್ಲಿ 1,300 ಕ್ಯಾಶ್ ಬ್ಯಾಕ್ ದೊರಲಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಹೋಂಡಾ ನವಿ

ದೇಶದ ಜನಪ್ರಿಯ ಬೈಕ್ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ ಸಂಸ್ಥೆಯು ತನ್ನ ನವಿ ಸ್ಕೂಟರ್ ಮೇಲೆ ರೂ.5 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ. ಹೋಂಡಾ ಸಂಸ್ಥೆಯು ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಈ ಆಫರ್ ಪರಿಚಯಿಸಿದ್ದು, ಕಾಲೇಜ್ ಸಂಸ್ಥೆಯಿಂದ ಸೂಕ್ತ ದಾಖಲೆಯನ್ನು ಒದಗಿಸಿದ್ದಲ್ಲಿ ಮಾತ್ರವೇ ಈ ಸೌಲಭ್ಯ ಪಡೆಯಬಹುದು.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಕಳೆದ ವಾರಷ್ಟೇ ಹೋಂಡಾ ನವಿ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದು, ಹಳೆಯ ನವಿ ಸ್ಕೂಟರ್ ಮೇಲೆ ಮಾತ್ರವೇ ಡಿಸ್ಕೌಂಟ್ ನೀಡಲಾಗುತ್ತಿದ್ದೆ. ಒಂದು ವೇಳೆ ನೀವು ಕಾಲೇಜ್ ವಿದ್ಯಾರ್ಥಿಯಾಗಿದ್ದಲ್ಲಿ ಇದು ಖರೀದಿಗೆ ಉತ್ತಮ ಅವಕಾಶ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಬಜಾಜ್ ಪಲ್ಸರ್ ಆರ್‌ಎಸ್ 200

ಸ್ಪೋರ್ಟಿ ಲುಕ್ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಿರುವ ಪಲ್ಸರ್ ಆರ್‌ಎಸ್ 200 ಬೈಕ್ ಮಾದರಿಗಳ ಮೇಲೆ ಗರಿಷ್ಠವಾಗಿ ರೂ. 5 ಸಾವಿರ ಡಿಸ್ಕೌಂಟ್ ದೊರೆಯಲಿದ್ದು, ಇದು ಹೊಸ ವರ್ಷನ್ ಪಲ್ಸರ್ ಆರ್‌ಎಸ್ 200 ಖರೀದಿ ಮೇಲೆ ಆಫರ್ ಬೆಲೆಗಳು ಅನ್ವಯಿಸುವುದಿಲ್ಲ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು 180

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಿಂದ ಜನಪ್ರಿಯತೆಯನ್ನು ಕಂಡ ಟಿವಿಎಸ್ ಸಂಸ್ಥೆಯು ಇತ್ತೀಚೆಗೆ 2018ರ ಅಪಾಚೆ ಆರ್‍‍ಟಿಆರ್ 160 4ವಿ ಮತ್ತು ಅಪಾಚೆ ಆರ್‍‍ಟಿಆರ್ 180 4ವಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಹಳೆಯ ವರ್ಷನ್‌ಗಳ ಖರೀದಿ ಮೇಲೆ ಗರಿಷ್ಠವಾಗಿ ರೂ. 5 ಸಾವಿರ ಡಿಸ್ಕೌಂಟ್ ದೊರಲಿದೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಸೂಪರ್ ಬೈಕ್‌ಗಳ ಮೇಲೆ ಡಿಸ್ಕೌಂಟ್

ಕೇವಲ ಸಾಮಾನ್ಯ ಮಾದರಿಯ ಬೈಕ್ ಮಾದರಿಗಳಲ್ಲದೇ ಸೂಪರ್ ಬೈಕ್ ಮಾದರಿಗಳಾದ ಟ್ರಯಂಫ್ ಆಯ್ದ ಬೈಕ್‌ಗಳ ಮೇಲೆ ರೂ.25 ಸಾವಿರ, ಕವಾಸಕಿ ಜೆಡ್1000 ಬೈಕ್ ಮೇಲೆ 4.5 ಲಕ್ಷ ಮತ್ತು ಕವಾಸಕಿ ಜೆಡ್900 ಬೈಕ್‌ಗಳ ಮೇಲೆ ರೂ. 97 ಸಾವಿರ ಡಿಸ್ಕೌಂಟ್ ಲಭ್ಯವಿವೆ.

ಬೈಕ್ ಖರೀದಿದಾರರಿಗೆ ಸಿಹಿಸುದ್ದಿ- ಪ್ರಮುಖ ಬೈಕ್‌ಗಳ ಮೇಲೆ ಭಾರೀ ಡಿಸ್ಕೌಂಟ್..

ಇತರೆ ಬೈಕ್‌ಗಳ ಮೇಲಿನ ಡಿಸ್ಕೌಂಟ್

ಮೇಲೆ ಹೇಳಲಾದ ಬೈಕ್‌ ಮತ್ತು ಸ್ಕೂಟರ್‌ಗಳ ಮೇಲೆ ಅಷ್ಟೇ ಅಲ್ಲದೇ ಹೀರೋ, ಯಮಹಾ, ಮಹೀಂದ್ರಾ ಮತ್ತು ಎಪ್ರಿಲಿಯಾ ಸಂಸ್ಥೆಗಳ ಆಯ್ದ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್‌ಗಳಿದ್ದು, ಪೇಟಿಯಂ ಮೂಲಕ ಹಣ ಪಾವತಿಸಿ ರೂ. 1,000 ದಿಂದ ರೂ. 2,500 ತನಕ ಡಿಸ್ಕೌಂಟ್ ಪಡೆಯಬಹುದು.

More from DriveSpark

Article Published On: Saturday, August 11, 2018, 18:58 [IST]
English summary
Best new bikes discounts in august.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+