2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟ್ರಿಕಾ ಬಿಡುಗಡೆ ಸಜ್ಜುಗೊಂಡಿದ್ದು, ಮೊದಲಿದೆ ಯುರೋಪ್ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ.

By Rahul Ts

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟ್ರಿಕಾ ಬಿಡುಗಡೆ ಸಜ್ಜುಗೊಂಡಿದ್ದು, ಮೊದಲಿದೆ ಯುರೋಪ್ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ. ಆಕ್ಟೊಬರ್ ತಿಂಗಳಿನಲ್ಲಿ ಯುರೋಪಿಯನ್ ದೇಶಗಳಲ್ಲಿ ಈ ವೆಸ್ಪಾ ಎಲೆಕ್ಟ್ರಿಕಾ ಸ್ಕೂಟರ್‍‍ನ ಬುಕ್ಕಿಂಗ್ ಅನ್ನು ಶುರು ಮಾಡಲಿದೆ ಎನ್ನಲಾಗಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ವೆಸ್ಪಾ ತಮ್ಮ ಎಲೆಕ್ಟ್ರಿಕಾ ಎಂಬ ವಿದ್ಯುತ್ ಸ್ಕೂಟರ್ ಅನ್ನು ಪ್ರದರ್ಶನಗೊಳಿಸುವ ಮೂಲಕ ಸ್ಕೂಟರ್ ಆವೃತ್ತಿಗಳಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆ ಇದ್ದು, ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಸಂಸ್ಥೆಯು ಸುಳಿವು ನೀಡಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಧೀರ್ಘಕಾಲದ 2.6- ಬಿಹೆಚ್‌ಪಿ ಪವರ್ ಔಟ್ ಪುಟ್ ಮತ್ತು 5.2-ಬಿಹೆಚ್ ಪಿ ಪೀಕ್ ಪವರ್ ಹೊಂದಿದ್ದು, 4.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರಲಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ಇನ್ನು ಈ ಬೈಕ್ ಎರಡು ಆವೃತ್ತಿಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಸ್ಟಾಂಡರ್ಡ್ ಆವೃತ್ತಿಯು 100 ಕಿಲೋ ಮೀಟರ್ ರೈಡಿಂಗ್ ರೇಂಜ್ ಮತ್ತು ಎಲೆಕ್ಟ್ರಿಕ್ ಎಕ್ಸ್ 200 ಕಿಲೋಮೀಟರ್ ರೈಡಿಂಗ್ ರೇಂಜ್‌ನ್ನು ಹೊಂದಿದ್ದು, 30km/h ಇಕೊ ಮೋಡ್ ನಲ್ಲಿ ಟಾಪ್ ಸ್ಪೀಡ್ 30km/h ವರೆಗು ಚಲಾಯಿಸಬಹುದಾಗಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ವೆಸ್ಪಾ ಎಲೆಕ್ಟ್ರಿಕ್ ಫುಲ್ ಆಕ್ಸಿಲಾರೇಟರ್ ಆಯ್ಕೆ ಮತ್ತು ರಿವರ್ಸ್ ಮೋಡ್ ಅನ್ನು ಪಡೆದಿದ್ದು, ಸ್ಕೂಟರಿನ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆಧುನಿಕ ಉಪಕರಣಗಳಿಂದ ವಿನ್ಯಾಸಗೊಂಡಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ಈ ಹೊಸ ಸ್ಕೂಟರ್ 4.3 ಇಂಚಿನ ಕನೆಕ್ಟಿವಿಟಿ ಟಿಎಫ್ ಟಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲೈಟ್, ಅಂಡರ್ ಸೀಟ್ ಸ್ಟೋರೇಜ್, 12 ಇಂಚಿನ ಮುಂದಿನ ಹಾಗು 11 ಇಂಚಿನ ಹಿಂದಿನ ಚಕ್ರಗಳನ್ನು ಹೊಂದಿದೆ. ಈ ಸ್ಕೂಟಾರ್ ಇಟಲಿಯಲ್ಲಿ ತಯಾರಾಗಲಿದ್ದು ಮೊದಲಿಗೆ ಯುರೋಪಿಯನ್ ದೇಶಗಳಲ್ಲಿ ಮಾರಾಟಗೊಳಿಸಲಾಗುತ್ತದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ವೆಸ್ಪಾ ಎಲೆಕ್ಟ್ರಿಕ್ ಕ್ಲಾಸಿಕ್ ರೆಟ್ರೊ ಶೈಲಿಯ ವಿನ್ಯಾಸ ಮತ್ತು ಮುಂದುವರಿದ ತಂತ್ರಜ್ಞಾನದ ಪರಿಪೂರ್ಣ ಮಿಶ್ರಣವಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಅದರ ಪರಿಕಲ್ಪನೆಯ ರೂಪದಲ್ಲಿ, ಶೀಘ್ರದಲ್ಲೇ ಏಶಿಯನ್ ರಾಷ್ಟ್ರಗಳ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ರಾಷ್ಟ್ರದಲ್ಲಿ ಈಗಾಗಲೆ ಅಥೆರ್ ಎನರ್ಜಿ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಹೆಚ್ಚು ಸದ್ದು ಮಾಡುತ್ತಿದು, ತಮ್ಮದೇಯಾದ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಕೂಡಾ ಒದಗಿಸಲಾಗುತ್ತಿದೆ. ಹೀಗಿರುವಾಗ ಇಟಾಲಿಯನ್ ವಾಹನ ಸಂಸ್ಥೆಯಾದ ಪಿಯಾಜಿಯೊ ತಮ್ಮ ಎಲೆಕ್ಟ್ರಿಕಾ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಾವ ಹಂತಕ್ಕೆ ಜನಪ್ರಿಯತೆಯನ್ನು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ವೆಸ್ಪಾ ಸಂಸ್ಥೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್..

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್‍‍ನ ಬೆಲೆಯ ಕುರಿತಾಗಿ ಸಂಸ್ಥೆಯು ಮಾಹಿತಿಯನ್ನು ಹೊರ ಹಾಕಲಿಲ್ಲವಾದರೂ, ವೆಸ್ಪಾ ಸ್ಕೂಟರ್‍‍ಗಳ ಟಾಪ್ ಎಂಡ್ ಮಾಡಲ್‍‍‍ನ ಬೆಲೆಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. 2020ರೊಳಗೆ ಭಾರತೀಯ ಮಾರುಕಟ್ಟೆಯಲ್ಲಿ ಬಹುತೇಕ ವಿದ್ಯುತ್ ವಾಹಗಳ ದರ್ಬಾರು ಶುರುವಾಗಲಿದ್ದು, ಎಲ್ಲಾ ವಾಹನ ತಯಾರಕ ಸಂಸ್ಥೆಗಳು ವಿದ್ಯುತ್ ವಾಹನಗಳನ್ನು ತಯಾರಿಸುವ ಕಾರ್ಯದಲ್ಲಿದ್ದಾರೆ.

Source : engadget

More from DriveSpark

Article Published On: Wednesday, August 29, 2018, 13:05 [IST]
English summary
Vespa's first electric scooter goes on sale in Europe this October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+