ವೆಸ್ಪಾ ಎಸ್‍ಎಕ್ಸ್ಎಲ್ 150 ಮತ್ತು 125 ಈಗ ಮೆತ್ತೆರಡು ಬಣ್ಣಗಳಲ್ಲಿ ಲಭ್ಯ..
ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಈಗಾಗಲೆ ತಮ್ಮ ವೆಸ್ಪಾ ಎಸ್‍ಎಕ್ಸ್ಎಲ್ 150 ಮತ್ತು 125 ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿತ್ತು.
ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಈಗಾಗಲೆ ತಮ್ಮ ವೆಸ್ಪಾ ಎಸ್‍ಎಕ್ಸ್ಎಲ್ 150 ಮತ್ತು 125 ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಈ ಸ್ಕೂಟರ್‍ಗಳು ಮೇಟ್ ರೆಡ್ ಮತ್ತು ಮೇಟ್ ಯೆಲ್ಲೊ ಎಂಬ ಮತ್ತೆರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಎರಡು ಬಣ್ಣಗಳಲ್ಲಿ ಬಿಡುಗಡೆಗೊಂಡ ವೆಸ್ಪಾ ಎಸ್‍ಎಕ್ಸ್ಎಲ್ 150 ಮತ್ತು 125 ಸ್ಕೂಟರ್‍ಗಳು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳೊಂದಿಗೆ ಮಾರಾಟಗೊಳ್ಳುತ್ತಿದ್ದು ಮೊದಲಬಾರಿಗೆ 2018ರ ಆಟೋ ಎಕ್ಸ್ ಪೊ ಮೇಳದಲ್ಲಿ ಮೊದಲಬಾರಿಗೆ ಈ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದವು.

ಹೊಸ ಬಣ್ಣಗಳನ್ನು ಪಡೆದ ವೆಸ್ಪಾ ಎಸ್‍ಎಕ್ಸ್ಎಲ್ 150 ಸ್ಕೂಟರ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 94,409 ಸಾವಿರಕ್ಕೆ ಮಾರಾಟಗೊಳ್ಳುತ್ತಿದ್ದು, ಇನ್ನು ಹೊಸ ಬಣ್ಣಗಳನ್ನು ಪದೆದ ವೆಸ್ಪಾ ಎಸ್‍ಎಕ್ಸ್ಎಲ್ 125 ಸ್ಕೂಟರ್‍ಗಳು ರೂ 88,313 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ವೆಸ್ಪಾ ಎಸ್‍ಎಕ್ಸ್ಎಲ್ 125 ಸ್ಕೂಟರ್ 125ಸಿಸಿ ಎಂಜಿನ್ ಸಹಾಯದಿಂದ 9.9 ಬಿಹೆಚ್‍ಪಿ ಮತ್ತು 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ವೆಸ್ಪಾ ಎಸ್‍ಎಕ್ಸ್ಎಲ್ 150 ಸ್ಕೂಟರ್‍ಗಳು 150ಸಿಸಿ ಎಂಜಿನ್ ಸಹಾಯದಿಂದ 11.4ಬಿಹೆಚ್‍ಪಿ ಮತ್ತು 11.5ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಲಾಗಿದೆ.

ಈ ಹಿಂದೆಯೆ ಪಿಯಾಜಿಯೊ ತಮ್ಮ ವೆಸ್ಪಾ ರೆಡ್ ಸ್ಪೆಷಲ್ ಎಡಿಶನ್ ಸ್ಕೂಟರ್ ಅನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 87,009 ಸಾವಿರಕ್ಕೆ ಮಾರಾಟ ಮಾಡುತಿದ್ದು, ವೆಸ್ಪಾ ರೆಡ್ ಸ್ಪೆಷಲ್ ಎಡಿಶನ್ ಸ್ಕೂಟರ್‍ಗಳು ವೆಸ್ಪಾ 125 ಸ್ಕೂಟರ್‍ಗಳನ್ನು ಆದರಿಸುತ್ತವೆ. ಮತ್ತು ಏಡ್ಸ್ (ಹೆಚ್‍ಐವಿ) ಯ ಬಗ್ಗೆ ಜನರಿಗೆ ಜಾಗರುಕೆತೆಯನ್ನು ಮೂಡಿಸುವ ಉದ್ದೇಶದಿಂದಾಗಿ ಬಿಡುಗಡೆಗೊಳಿಸಲಗಿತ್ತು ಎನ್ನಲಾಗಿದೆ.

ವೆಸ್ಪಾ ಸ್ಕೂಟರ್‍ಗಳು ಕ್ಲಾಸಿಕ್ ಮತ್ತು ಮಾಡರ್ನ್ ಶೈಲಿಯನ್ನು ಹೊಂದಿರುವಂತಹ ಸ್ಕೂಟರ್ ಆಗಿದ್ದು, ವೆಸ್ಪಾ ಎಸ್‍ಎಕ್ಸ್ಎಲ್ ಸ್ಕೂಟರ್‍ಗಳು ಮುಂಭಾಗದಲ್ಲಿ 200ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140ಎಂಎಂ ಡ್ರಮ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

ಇನ್ನು ಸ್ಕೂಟರ್‍ಗಳ ಸಸ್ಪೆಂಶನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಸಿಂಗಲ್ ಸೈಡ್ ಆರ್ಮ್ ಸಸ್ಪೆಂಶನ್ ಮತ್ತು ಹಿಂಭಾಗದಲ್ಲಿ ಡುಯಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‍ಗಳನ್ನು ಅಳವಡಿಸಲಾಗಿದೆ.

ಪಿಯಾಜಿಯೊ ವೆಸ್ಪಾ ಮೇಟ್ ರೆಡ್ ಹಾಗು ಮೆಟ್ ಯೆಲ್ಲೊ ಬಣ್ಣಗಳಲ್ಲಿ ತಮ್ಮ ಎಸ್‍ಎಕ್ಸ್ಎಲ್ 150 ಮತ್ತು 125 ಸ್ಕೂಟರ್‍ಗಳನ್ನು ಪ್ರದರ್ಶಿಸಲಾಗಿದ್ದು, ಇದೀಗ ವಾಹನಗಳ ಮಾರಾಟವನ್ನು ಹೆಚ್ಚಿಸಲು ಬಿಡುಗಡೆಗೊಳಿಸಿದೆ. ಇನ್ನು ಎಸ್‍ಎಕ್ಸ್ಎಲ್ ಸ್ಕೂಟರ್‍ಗಳು ಹೆಚ್ಚು ವೈಶಿಷ್ತ್ಯತೆಯನ್ನು ಪದೆದಿದೆ.


Click it and Unblock the Notifications








