ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಯಮಹಾ ಸಂಸ್ಥೆಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ 4-ಸ್ಪೋಕ್ ಆರ್‌ಎಕ್ಸ್ 100 ಬೈಕ್ ಹೊರತರುವ ಬಗ್ಗೆ ಹಲವಾರು ಬಾರಿ ಮಾಹಿತಿ ಹಂಚಿಕೊಂಡಿದ್ದರು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಸದ್ದುಗದ್ದವಿಲ್ಲದೆ ಎಕ್ಸ್‌ಟಿಜೆಡ್ 125 ಎನ್ನುವ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಹೌದು, ಯಮಹಾ ಸಂಸ್ಥೆಯು ಭಾರತದಲ್ಲಿ ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೆಲವು ಮಹತ್ವದ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, 125ಸಿಸಿಯಿಂದ 300ಸಿಸಿ ಎಂಜಿನ್ ಸಾಮರ್ಥ್ಯದ ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಿದ್ದಗೊಳಿಸುತ್ತಿದೆ. ಇವುಗಳಲ್ಲಿ ಇದೀಗ ಎಕ್ಸ್‌ಟಿಜೆಡ್ 125 ಕೂಡಾ ಪ್ರಮುಖವಾಗಿದ್ದು, ಯುವ ಬೈಕ್ ಸವಾರರ ಆಕರ್ಷಣೆಗೆ ಕಾರಣವಾಗಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಆರ್‌ಎಕ್ಸ್100 ಬೈಕ್ ಮರುಬಿಡುಗಡೆಗೊಳಿಸುವ ಕುರಿತಂತೆ ಕಳೆದ ವಾರದ ಹಿಂದಷ್ಟೇ ಎಕಾಮಿಕ್ಸ್ ಟೈಮ್ಸ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಮಹಾ ಇಂಡಿಯಾ ನೂತನ ಎಂಡಿ ಮೊಟೊಫುಮಿ ಶಿತಾರಾ ಅವರು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಮಹತ್ತರ ಬದಲಾವಣೆ ಮಾಡುತ್ತಿರುವುದಾಗಿ ಸುಳಿವು ನೀಡಿದ್ದರು.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಅದರಂತೆ ಇದೀಗ 125 ಸಿಸಿ ಎಂಜಿನ್ ಸಾಮರ್ಥ್ಯ ಎಕ್ಸ್‌ಟಿಜೆಡ್ 125 ಬೈಕ್ ಸಿದ್ದಗೊಳಿಸಿದ್ದು, ಪುಣೆ ಮತ್ತು ಮುಂಬೈ ಹೊರವಲಯಗಳಲ್ಲಿ ಹೊಸ ಬೈಕ್ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ಎಕ್ಸ್‌ಟಿಜೆಡ್ 125 ಬೈಕ್‌ಗಳು ಸ್ಟ್ರೀಟ್ ಪರ್ಫಾಮೆನ್ಸ್‌ಗೆ ಅಷ್ಟೇ ಅಲ್ಲದೇ ಆಫ್ ರೋಡ್‌ನಲ್ಲೂ ಕೌಶಲ್ಯ ಪ್ರದರ್ಶನ ಮಾಡಬಲ್ಲ ಗುಣಹೊಂದಿದ್ದು, ಬೈಕಿನ ವಿನ್ಯಾಸಗಳು ನೋಡುಗರನ್ನು ಮೊದಲ ನೋಟದಲ್ಲೇ ಸೆಳೆಯಬಲ್ಲವು.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಈ ಹಿಂದೆ ಮಾರುಕಟ್ಟೆಯಿಂದ ನಿರ್ಗಮಿಸಿದ ಹೀರೋ ನಿರ್ಮಾಣದ ಇಮ್‌ಪಲ್ಸ್ 150ಸಿಸಿ ಬೈಕ್ ಮಾದರಿಯಲ್ಲೇ ಸಿದ್ದಗೊಂಡಿರುವ ಯಮಹಾ ಎಕ್ಸ್‌ಟಿಜೆಡ್ 125 ಬೈಕ್ ಬಜೆಟ್ ಅಡ್ವೆಂಚರ್ ಬೈಕ್ ಎಂದು ಹೇಳಲಾಗಿದ್ದು, ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್ ಆಫ್ ರೋಡ್ ಬೈಕ್ ಸವಾರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಉದ್ದವಾದ ಆಸನ ವಿನ್ಯಾಸ, ಎತ್ತರಿಸಿದ ಮಡ್ ಗಾರ್ಡ್, ಹಿಂಬದಿಯ ಆಸನಕ್ಕೆ ಹೊಂದಿಕೊಂಡತ್ತಿರುವ ಎಕ್ಸಾಸ್ಟ್, ಸ್ಪೋರ್ಟಿ ಲುಕ್ ನೀಡುವ ಸ್ಪೋಕ್ ವೀಲ್ಹ್‌ಗಳು, ಅತಿ ಕಡಿಮೆ ಸಮಯದಲ್ಲಿ ವೇಗವನ್ನು ಪಡೆದುಕೊಳ್ಳಲು ನೆರವಾಗುವಂತೆ ತೂಕದಲ್ಲಿ ಇಳಿಕೆ ಮಾಡಲಾಗಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಎಕ್ಸ್‌ಟಿಜೆಡ್ 125 ಬೈಕ್‌ ಮಾದರಿಯು 118 ಕೆಜಿ ತೂಕವನ್ನು ಹೊಂದಿದ್ದು, ಮುಂಭಾಗದಲ್ಲಿ 21-ಇಂಚಿನ ಚಕ್ರಗಳನ್ನು ಹೊಂದಿದ್ದರೆ ಹಿಂಭಾಗದಲ್ಲಿ 18-ಇಂಚಿನ ಚಕ್ರಗಳನ್ನು ಪಡೆದುಕೊಳ್ಳುವ ಮೂಲಕ ಅಡ್ವೆಂಚರ್ ವೈಶಿಷ್ಟ್ಯತೆಗಳಿಗೆ ಮೆರಗು ತಂದಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಎಂಜಿನ್ ವೈಶಿಷ್ಟ್ಯತೆ

ಮೇಲೆ ಹೇಳಿದ ಹಾಗೆ 125ಸಿಸಿ ವಿಭಾಗದಲ್ಲಿ ಮಾರಾಟಗೊಳ್ಳುವ ಎಕ್ಸ್‌ಟಿಜೆಡ್ 125 ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 124ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 12.5-ಬಿಎಚ್‌ಪಿ ಮತ್ತು 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಬಿಡುಗಡೆಯಾಗಲಿರುವ ಹೊಸ ಆರ್‌ಎಕ್ಸ್100 ಬೈಕ್ ಹೇಗಿರಲಿವೆ ಗೊತ್ತಾ?

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಇನ್ನು ಎಕ್ಸ್‌ಟಿಜೆಡ್ 125 ಬೈಕ್ ಅಡ್ವೆಂಚರ್ ಮಾದರಿಯಾಗಿರುವುದಿಂದ ಲಗೇಜ್ ರಾಕ್, ಫ್ರಂಟ್ ಡಿಸ್ಕ್ ‌ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್, ಆಫ್ ರೋಡ್ ಕೌಶಲ್ಯಕ್ಕೆ ಸಹಕಾರಿಯಾಗಬಲ್ಲ ಬಟನ್ ಟೈರ್ ಸೌಲಭ್ಯವು ಇದರಲ್ಲಿದೆ.

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಬೈಕ್ ಬೆಲೆ(ಅಂದಾಜು)

ಮುಂಬರುವ 2019ರ ಎಪ್ರಿಲ್ ಹೊತ್ತಿಗೆ ಬಿಡುಗಡೆಯ ಉದ್ದೇಶಕ್ಕಾಗಿ ಹೊಸ ಎಕ್ಸ್‌ಟಿಜೆಡ್ 125 ಬೈಕ್ ಮಾದರಿಯನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಯಮಹಾ ಸಂಸ್ಥೆಯು ಬೆಲೆ ಕುರಿತಂತೆ ಮಾಹಿತಿ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಅಂದಾಜು ಬೆಲೆಗಳ ಪ್ರಕಾರ ರೂ. 99 ಸಾವಿರದಿಂದ ರೂ.1.15 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಆರ್‌ಎಕ್ಸ್100 ಇಲ್ಲ ಅಂದ್ರೆ ಏನಾಯ್ತು ಎಕ್ಸ್‌ಟಿಜೆಡ್ 125 ಬಿಡುಗಡೆ ಮಾಡಲಿದೆ ಯಮಹಾ..!

ಇದು ಸದ್ಯ ಮಾರುಕಟ್ಟೆಯಲ್ಲಿರುವ ಕೆಟಿಎಂ 125 ಮತ್ತು ಹೀರೋ ಸಂಸ್ಥೆಯ ಎಕ್ಸ್‌ಪಲ್ಸ್ 200 ಬೈಕಿಗೂ ಪೈಪೋಟಿ ನೀಡುವ ಗುಣಹೊಂದಿದ್ದು, ಬಿಡುಗಡೆಯ ನಂತರ ಆರ್‌ಎಕ್ಸ್ 100 ಬೈಕಿನಂತೆಯೇ ಇದು ಸಹ ಭಾರೀ ಜನಪ್ರಿಯತೆ ಹೊಂದುವ ನೀರಿಕ್ಷೆಯಿದೆ.

Article Published On: Saturday, December 15, 2018, 14:39 [IST]
English summary
Yamaha Adventure Bike In India: Spy Pics Of Yamaha XTZ 125 Raise Expectations. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+