ಏರೋಕ್ಸ್ 155 ಸ್ಕೂಟರ್ ಅನ್ನು ಶೋರಂನಲ್ಲಿ ಪ್ರದರ್ಶಿಸಿದ ಯಮಹಾ..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ಹೊಸ ಸ್ಕೂಟರ್ ಅನ್ನು ಪ್ರದರ್ಶಿಸಿದೆ. ನೋಡಲು ಹೊಸದಾಗಿ ಮತ್ತು ಆಕರ್ಷಕವಾಗಿದ್ದು ಗ್ರಾಹಕರು ಇದನ್ನು ಕೊಳ್ಳಲು ಮುಂದಾದರು.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ಹೊಸ ಸ್ಕೂಟರ್ ಅನ್ನು ಪ್ರದರ್ಶಿಸಿದೆ. ನೋಡಲು ಹೊಸದಾಗಿ ಮತ್ತು ಆಕರ್ಷಕವಾಗಿದ್ದು ಗ್ರಾಹಕರು ಇದನ್ನು ಕೊಳ್ಳಲು ಮುಂದಾದರು. ಆದರೆ ಇದು ಕೇವಲ ಪ್ರದರ್ಶನಕ್ಕಷ್ಟೆ ಮಾರಾಟಕ್ಕಿಲ್ಲ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಯಮಹಾ ತಮ್ಮ ಏರೋಕ್ಸ್ 155 ಸ್ಕೂಟರ್ ಅನ್ನು ಗ್ರಾಹಕರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲ್ಲು ಇದನ್ನು ಪ್ರದರ್ಶಿಸಲಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್‍ಗಳ ಮಾರಾಟದಲ್ಲಿ ಮೊದಲನೆಯ ಸ್ಥಾನವನ್ನು ಪಡೆದ ಹೋಂಡಾ ಸಂಸ್ಥೆಯನ್ನು ಹಿಂದಿಕ್ಕಲು ಈ ಸ್ಕೂಟರ್ ಅನ್ನು ಶೀಘ್ರವೆ ಮಾರುಕಟ್ಟೆಗೆ ಪರಿಚಯಿಸಲಿದೆ.

ಇದೇ ವರ್ಷ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳಕ್ಕೆ ಬರುವ ಮುನ್ನವೆ ಎಂಜಿನ್ ಕಾರ್ಯಕ್ಷಮತೆಯನ್ನು ತಿಳಿಯಲು ಸ್ಪಾಟ್ ಟೆಸ್ಟಿಂಗ್ ಕೂಡಾ ಮಾಡಲಾಗಿತ್ತು. ಅಷ್ಟೆ ಅಲ್ಲದೆ ಮಲೇಷಿಯಾ, ಫಿಲಿಫೈನ್ಸ್, ವಿಯಾಟ್ನಮ್ ಮತ್ತು ಇಂಡೋನೇಶಿಯಾ ಮಾರುಕಟ್ಟೆಗಳಲ್ಲಿ ಈಗಾಗಲೆ ಈ ಸ್ಕೂಟರ್ ಮಾರಾಟಗೊಳ್ಳುತ್ತಿದೆ.

ಯಮಹಾ ಶೋರಂನಲ್ಲಿ ಪ್ರದರ್ಶಿಸಲಾದ ಏರೋಕ್ಸ್ 155 ಸ್ಕೂಟರ್ ಟ್ವಿನ್ ಐ ಎಲ್ಇಡಿ ಹೆಡ್‍ಲ್ಯಾಂಪ್ಸ್, ಎಲ್ಇದಿ ಟೈಲ್ ಲ್ಯಾಂಪ್ಸ್, ಬ್ರೇಕ್ ಲೈಟ್ಸ್, ಸ್ಮಾರ್ಟ್ ಕೀ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು 5.8 ಇಂಚಿನ ಎಲ್ಇಡಿ ಸ್ಕ್ರೀನ್ ಎಂಬ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಯಮಹಾ ಏರೋಕ್ಸ್ 155 ಸ್ಕೂಟರ್‍ನಲ್ಲಿ 15 ಇಂಚಿನ ಅಲಾಯ್ ವ್ಹೀಲ್ಸ್ ಮತ್ತು 25 ಲೀಟರ್‍ಗಳ ಅಂಡರ್ ಸೀಟ್ ಸ್ಟೋರೇಜ್ ಕ್ಯಾಪಾಸಿಟಿಯನ್ನು ಪಡೆದುಕೊಂಡಿದೆ. ಇನ್ನು ಬ್ರೇಕಿಂಗ್‍ಗಾಗಿ ಮುಂಭಾಗದ ಚಕ್ರಗಳಿಗೆ ಎಬಿಎಸ್ ಹೊಂದಿರುವ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದಲ್ಲದೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

ಯಮಹಾ ಏರೋಕ್ಸ್ ಪ್ರೀಮಿಯಮ್ ಸ್ಕೂಟರ್ 155ಸಿಸಿ ಬ್ಲೂಕೋರ್ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲೆಂಡರ್, ಪೆಟ್ರೋಲ್ ಎಂಜಿನ್ ಸಹಾಯದಿಂದ 14.8 ಬಿಹೆಚ್‍ಪಿ ಮತ್ತು 14.4 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದು ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರುವ ದೇಶದ ಮೊದಲ ಸ್ಕೂಟರ್ ಆಗಿದೆ.

ಯಮಹಾ ಇಂಡಿಯಾ ಏರೋಕ್ಸ್ 155 ಸ್ಕೂಟರ್ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ, ಈಗಾಗಲೆ ಲಭ್ಯವಿರುವ ಎಪ್ರಿಲಿಯಾ ಎಸ್‍ಅರ್150, ಮುಂಬರುವ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಮತ್ತು ವೆಸ್ಪಾ ಸಂಸ್ಥೆಯ ಕೆಲ ಸ್ಕೂಟರ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಯಮಹಾ ಏರೋಕ್ಸ್ 155 ಸ್ಕೂಟರಿನ ಬೆಲೆಯ ಬಗ್ಗೆ ಖಚಿತವಾದ ಮಾಹಿತಿ ದೊರೆತಿಲ್ಲವಾದರೂ, ರೂ. 75,000 ರಿಂದ ರೂ. 80,000 ಸಾವಿರದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ. ಇದಲ್ಲದೆ ಕಡಿಮೆ ಬೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಈ ಸ್ಕೂಟರ್‍ನಿಂದ ಕೆಲ ವೈಶಿಷ್ಟ್ಯತೆಗಳನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ.


Click it and Unblock the Notifications