ಹೊಸ ಅವತಾರದಲ್ಲಿ ಬರಲಿದೆ ಯಮಹಾ ಆರ್15 ವಿ3 ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತನ್ನ ವೈಜೆಡ್‍ಎಫ್-ಆರ್15 ವರ್ಷನ್ 3.0 ಬೈಕಿನ ಮೊಟೊ ಜಿಪಿ ಎಡಿಷನ್ ಅನ್ನು ಪರಿಚಯಿಸಲಿದ್ದು, ಟೀಸರ್ ಅನ್ನು ಬಿಡುಗಡೆಗೊಳಿಸುವುದರ ಮೂಲಕ ಮಾರುಕಟ್ಟೆಗೆ ಶೀಘ್ರವೇ ಲಗ್ಗೆಯಿಡಲಿದೆ ಎಂಬ ಸುಳಿವನ್ನು ನೀಡಿ
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ತನ್ನ ವೈಜೆಡ್‍ಎಫ್-ಆರ್15 ವರ್ಷನ್ 3.0 ಬೈಕಿನ ಮೊಟೊ ಜಿಪಿ ಎಡಿಷನ್ ಅನ್ನು ಪರಿಚಯಿಸಲಿದ್ದು, ಟೀಸರ್ ಅನ್ನು ಬಿಡುಗಡೆಗೊಳಿಸುವುದರ ಮೂಲಕ ಮಾರುಕಟ್ಟೆಗೆ ಶೀಘ್ರವೇ ಲಗ್ಗೆಯಿಡಲಿದೆ ಎಂಬ ಸುಳಿವನ್ನು ನೀಡಿದೆ.

ಮೊಟೊ ಜಿಪಿ ಅಭಿಮಾನಿಗಳಿಗೆಂದೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಯಮಹಾ ಆರ್ 15 ವಿ3.0 ನೀಲಿ ಬಣ್ಣದ ಪೆಯಿಂಟ್ ಸ್ಕೀಮ್ ಅನ್ನು ಹೊತ್ತು ಬರಲಿದ್ದು, ಬೈಕಿನ ಮುಂಭಾಗದಲ್ಲಿ ಮತ್ತು ಬದಿಗಳಲ್ಲಿ ಮೊವಿಸ್ಟಾರ್ ಚಿನ್ಹೆಯನ್ನು ಅಳವಡಿಸಲಾಗಿದೆ ಮತ್ತು ಇನೊಸ್ ಚಿನ್ಹೆಯನ್ನು ಬೆಲ್ಲಿ ಪ್ಯಾನ್‍ನಲ್ಲಿ ಅಳವಡಿಸಲಾಗಿದೆ.

ಮೋಟೊ ಜಿಪಿ ಎಡಿಶನ್ ಯಮಹಾ ಆರ್15 ವಿ3.0 ಬೈಕ್ ಈಗಾಗಲೆ ಆಗ್ನೇಯ ಏಶಿಯಾದಲ್ಲಿನ ಹಲವಾರು ದೇಶದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕ್ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಪಡೆದುಕೊಂಡಿರಲಿದ್ದು, ಇನ್ಯಾವ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದೆ.

ಯಮಹಾ ಆರ್15 ವರ್ಷನ್ 3.0 ಮೋಟೊ ಜಿಪಿ ಎಡಿಷನ್ ಬೈಕ್ 155ಸಿಸಿ 4 ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 19ಬಿಹೆಚ್‍ಪಿ ಮತ್ತು 15ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೊಳ್ಳಲಿರುವ ಯಮಹಾ ಆರ್15 ವರ್ಷನ್ 3.0 ಬೈಕ್ ಎಲ್‍ಇಡಿ ಹೆಡ್‍ಲ್ಯಾಂಪ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ಪೂರ್ಣ ಡಿಜಿಟಲ್ ಕ್ಲಸ್ಟರ್ ಅನ್ನು ಪಡೆದಿದೆ. ವಿದೇಶದಲ್ಲಿ ದೊರೆಯುತ್ತಿವ ಈ ಬೈಕ್ ಯುಎಸ್‍ಡಿ ಫ್ರಂಟ್ ಫೋರ್ಕ್ಸ್ ಅನ್ನು ಅಳವಡಿಸಲಾಗಿದ್ದು, ಭಾರತಕ್ಕೆ ಬರಲಿರುವ ಬೈಕ್ ಕೇವಲ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ಪಡೆದುಕೊಂಡಿರಲಿದೆ.

ಪ್ರಸ್ಥುತ ಯಮಹಾ ಆರ್15 ವಿ3.0 ಬೈಕ್ ಥಂಡರ್ ಗ್ರೇ ಮತ್ತು ರೇಸಿಂಗ್ ಬ್ಲೂ ಏಂಬ ಎರಡು ಬಣ್ಣಗಳಲ್ಲಿ ಬಿಡುಗಡೆಗೊಳ್ಳಲ್ಲಿದು ಜೊತೆಗೆ ಮತ್ತೆರಡು ಪೆಯಿಂಟ್ ಸ್ಕೀಮ್‍ನಲ್ಲಿ ಖರೀದಿಗೆ ಲಭ್ಯವಿರಲಿದೆ.

ಸ್ಟ್ಯಾಂಡರ್ಡ್ ಯಮಹಾ ಆರ್15 ವಿ3.0 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 1.26 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಹೊಸ ಮೋಟೊ ಜಿಪಿ ಎಡಿಷನ್ ಬೈಕಿನ ಬೆಲೆಗಳು ಸಾಧಾರಣ ಬೈಕ್‍ಗಿಂತ ಹೆಚ್ಚಿರಲಿದೆ. ಈ ಬೈಕಿನ ಬಗ್ಗೆ ಇನ್ನಿತರೆ ದೊರೆತಿಲ್ಲವಾದರೂ ಬಿಡುಗಡೆಯ ಸಮಯದ ವರೆಗೂ ಕಾಯ್ದು ನೋಡಬೇಕಿದೆ.
ಯಮಹಾ ತಮ್ಮ ಆರ್15 ವಿ3 ಮೊಟೊ ಜಿಪ್ ವರ್ಷನ್ ಬೈಕಿನ ಟೀಸರ್ ಇಲ್ಲಿದೆ ನೋಡಿ..


Click it and Unblock the Notifications








