ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಜುಲೈ 16 ರಂದು ಬಿಡುಗದೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು ಇದೀಗ ದೇಶದಲ್ಲಿರುವ ಯಮಹಾ ಡೀಲರ್‍ ಯಾರ್ಡ್ ಅನ್ನು ತಲುಪಿದೆ ಅಷ್ಟೆ ಅಲ್ಲದೆ ಈಗಾಗಲೆ ಕೆಲವು ಡೀಲರ್‍‍ಗಳು ಖರೀದಿ ಮಾಡಿರುವ ಗ್ರಾಹಕರಿಗೆ ಸ್ಕೂಟರ್ ಡೆಲಿವರಿಯ

By Rahul Ts

ಜುಲೈ 16 ರಂದು ಬಿಡುಗದೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು ಇದೀಗ ದೇಶದಲ್ಲಿರುವ ಯಮಹಾ ಡೀಲರ್‍ ಯಾರ್ಡ್ ಅನ್ನು ತಲುಪಿದೆ ಅಷ್ಟೆ ಅಲ್ಲದೆ ಈಗಾಗಲೆ ಕೆಲವು ಡೀಲರ್‍‍ಗಳು ಖರೀದಿ ಮಾಡಿರುವ ಗ್ರಾಹಕರಿಗೆ ಸ್ಕೂಟರ್ ಡೆಲಿವರಿಯನ್ನು ಕೂಡಾ ಶುರು ಮಾಡಿದ್ದಾರೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಮೊದಲ ಬಾರಿಗೆ ಈ ಬೈಕ್ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಳಿಸಲಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 57,898 ಸಾವಿರಕ್ಕೆ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ. ಮತ್ತು ಈ ಸ್ಕೂಟರ್ ರ್‍ಯಾಲಿ ರೆಡ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಹೊಸ ಯಮಹಾ ಸೈನಸ್ ರೇ ಜೆಡ್‍ಆರ್ ರ್‍ಯಾಲಿ ಎಡಿಷನ್ ಸ್ಕೂಟರ್ ಸಂಸ್ಥೆಯ ಎಮ್‍ಟಿ-09 ವಿನ್ಯಾಸವನ್ನು ಆಧರಿಸಿದ್ದು, ಸ್ಪೋರ್ಟಿ ಲುಕ್ ಅನ್ನು ನೀಡಲು ವಿಂಡ್‍‍ಸ್ಕ್ರೀನ್ ಅನ್ನು ಪಡೆದಿದ್ದು, ಜೊತೆಗೆ ಹ್ಯಾಂಡಲ್ ಗ್ರಿಪ್‍‍ನ ಮೇಲೆ 'ಕ್ನಕಲ್ ಗಾರ್ಡ್' ಅನ್ನು ಅಳವಡಿಸಲಾಗಿದೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಸೈನಸ್ ರೇ ಜೇಡ್‍‍ಆರ್ ಸ್ಟ್ರೀಟ್ ರ್‍ಯಾಲಿಯ ಫ್ರಂಟ್ ಫೆಂಡರ್ ಮಡ್ ಸ್ಪ್ಲಾಟರ್‍‍ನಿಂದ ರಕ್ಷಿಸುತ್ತದೆ ಮತ್ತು ಸ್ಪೋರ್ಟಿ ನೋಟಕ್ಕೆ ಸೇರಿಸುತ್ತದೆ. ಸ್ಕೂಟರ್‌‌ನ ಹೊಸ ಆವೃತ್ತಿಯು 'ರೈಸಿಂಗ್ ಏರ್ ಟೈಲ್' ವಿನ್ಯಾಸವನ್ನು ಸಹ ಒಳಗೊಂಡಿದ್ದು, ತೀಕ್ಷ್ಣವಾದ ಸ್ಪೋರ್ಟಿ ಮಿರರ್ ಮತ್ತು ಡಿಜಿಟಲ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಎಂಜಿನ್ ಸಾಮರ್ಥ್ಯ

ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್ 113ಸಿಸಿ ಏರ್ ಕೂಲ್ಡ್, ಬ್ಲೂ ಕೋರ್ ಎಂಜಿನ್ ಸಹಾಯದಿಂದ 7.1-ಬಿಹೆಚ್‍‍ಪಿ ಮತ್ತು 8.1-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಈ ಎಂಜಿನ್ ರೋಲರ್ ರಾಕರ್ ಆರ್ಮ್ ಅನ್ನು ಪಡೆದಿದ್ದು, ಇದು ಕಡಿಮೆ ವೇಗದ ವ್ಯಾಪ್ತಿಯಲ್ಲಿ ವಿದ್ಯುತ್ ನಷ್ಟವನ್ನು ಕಡಿಮೆ ಮಾಡುತ್ತದೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಯಮಹಾ ಸೈನಸ್ ರೇ ಜೆಡ್‍ಆರ್ ಸ್ಕೂಟರ್‍‍ನ ಮುಂಭಾಗದಲ್ಲಿ 170ಎಮ್ಎಮ್ ಡಿಸ್ಕ್ ಬ್ರೇಕ್, ಅಲಾಯ್ ಚಕ್ರಗಳು, 21 ಲೀಟರ್‍‍ನ ಸ್ಟೋರೇಜ್, ಫ್ರಂಟ್ ಪಾಕೆಟ್, ಕೀ ಸೆಕ್ಯೂರ್ ಗ್ರಿಪ್ ಸಿಸ್ಟಮ್, ಎಡ್ಜಿ ಆಂಡ್ ಹೈ ರೈಸಿಂಗ್ ಟೈಲ್ ಲೈಟ್ ಮತ್ತು 2 ಮಟ್ಟದಲ್ಲಿ ಸೀಟ್ ಎತ್ತರ ಪಡಿಸಬಹುದಾದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಗ್ರಾಹಕರ ಕೈ ಸೇರುತ್ತಿರುವ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಜುಲೈ 16 ರಂದು ಬಿಡುಗಡೆಗೊಂಡ ಯಮಹಾ ರೇ ಜೆಡ್‍ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳು ಗ್ರಾಹಕರ ಕೈ ಸೇರುತ್ತಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿನ ಹೋಂಡಾ ಡಿಯೊ, ಟಿವಿಎಸ್ ಜುಪಿಟರ್, ಹೀರೊ ಮಾಯೆಸ್ಟ್ರೋ ಎಡ್ಜ್ ಮತ್ತು ಹೋಂಡಾ ಆಕ್ಟೀವ 5ಜಿ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, August 1, 2018, 12:04 [IST]
English summary
Yamaha Ray ZR Street Rally reaches dealerships, deliveries commence.
Read more on yamaha dealer sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+