ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ 2016ರಲ್ಲಿ ಮೊದಲ ಬಾರಿಗೆ ತಮ್ಮ ಸೆಲ್ಯುಟೋ ಆರ್‍ಎಕ್ಸ್ ಬೈಕ್‍ಗಳನ್ನು ಬಿಡುಗಡೆಗೊಳಿಸಿತ್ತು, ಯಮಹಾ ಸಂಸ್ಥೆಯು ತಮ್ಮ ಸೆಲ್ಯುಟೋ ಆರ್‍ಎಕ್ಸ್ ಮತ್ತು ಸೆಲ್ಯೂಟೊ 125 ಬೈಕ್‍ಗಳಿಗೆ ಮತ್ತಷ್ಟು ವೈಶಿಷ್ಟ್ಯತೆಗಳನ್ನು ಅಳವಡಿಸಿ ದೇಶಿಯ ಮರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯೂಟೊ ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 52.500 ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು 125ಸಿಸಿ ಟಾಪ್ ಸ್ಪೆಕ್ ಮಾಡಲ್ ರೂ.60,500 ಸಾವಿರದ ಬೆಲೆಯನ್ನು ಪಡೆದುಕೊಂಡಿದೆ. ಈ ಬಾರಿ ಹೊಸದಾಗಿ ಈ ಬೈಕ್‍ಗಳನ್ನು ರೈಡರ್‍‍ಗಳಿಗೆ ಸುರಕ್ಷತಾನುಸಾರ ವೈಶಿಷ್ಟ್ಯತೆಗಳನ್ನು ನೀಡಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಸಾಧಾರಣವಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಎಂಬುದನ್ನು ಯಮಹಾ ಸಂಸ್ಥೆಯಲ್ಲಿ ಯುನಿಫೈಡ್ ಬ್ರೇಕಿಂಗ್ ಸಿಸ್ಟಂ (ಯುಬಿಎಸ್) ಎಂದು ಕರೆಯಲ್ಪಡುತ್ತದೆ. ಕಾಂಬಿ ಬ್ರೇಕಿಂಗ್ ಸಿಸ್ಟಂಗಳು ಗ್ರಾಹಕರ ನೆಚ್ಚಿನ ಆಯ್ಕೆಯಾಗಿದ್ದು, ಸುರಕ್ಷತೆಯ ವಿಚಾರದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಕೇಂದ್ರ ಸರ್ಕಾರದ ಆದೇಶದ ಅನುಸಾರ 2019ರ ಏಪ್ರಿಲ್ ನಂತರ ರಸ್ತೆಗಿಳಿಯಲಿರುವ 125ಸಿಸಿ ಮತ್ತು ಅದಕ್ಕಿಂತಾ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳು ಕಡ್ಡಾಯವಾಗಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿರಬೇಕಾಗಿದ್ದು, ಯಮಹಾ ಸಂಸ್ಥೆಯು ತಮ್ಮ ಸೆಲ್ಯುಟೋ ಬೈ‍ಕ್‍ಗಳಿಗೆ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ನೀಡುತ್ತಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಈ ಹೊಸ ಆದೇಶವು ಖಂಡಿತವಾಗಿಯು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದ್ದು, ವಿಶೇಷವಾಗಿ ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಬಳಕೆಯಾಗಲಿದೆ. ಆದಾಗ್ಯೂ, ಡ್ರೈವಿಂಗ್ ಬೋರ್ಡ್ಗೆ ಮೋಟಾರ್ಸೈಕಲ್ ತಯಾರಕರನ್ನು ಮತ್ತೆ ಕಳುಹಿಸಲಾಗಿದೆ, ಏಕೆಂದರೆ ಹೊಸ ಯೋಜನೆಯನ್ನು ಅಳವಡಿಸಬೇಕಾಗಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಈ ನಿಟ್ಟಿನಲ್ಲಿ ಯಮಹಾ ಸಂಸ್ಥೆಯು ತಮ್ಮ ಸೆಲ್ಯುಟೊ ಆರ್‍ಎಕ್ಸ್ ಮತ್ತು ಸೆಲ್ಯುಟೊ 125 ಬೈಕ್‍ಗಳಿಗೆ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿ ಬಿಡುಗಡೆಗೊಳಿಸಿದ್ದು, ಈ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಬೈಕಿನ ಎರಡು ಬ್ರೇಕ್‍ಗಳಿಗೆ ಜೋಡಿಸಲಾಗಿರುತ್ತದೆ. ಸ್ಟ್ಯಾಂಡರ್ಡ್ ರಸ್ತೆ ಪರಿಸ್ಥಿತಿಯಲ್ಲಿ ನೂತನ ಯಮಹಾ ಸೆಲ್ಯೂಟೊ ಆರ್‌ಎಕ್ಸ್ ಪ್ರತಿ ಲೀಟರ್ ಗೆ 82 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಎಂಜಿನ್ ಸಾಮರ್ಥ್ಯ

ಯಮಹಾ ಸೆಲ್ಯುಟೊ ಆರ್‍ಎಕ್ಸ್ ಬೈಕ್ 110ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 7.5 ಬಿಹೆಚ್‍ಪಿ ಮತ್ತು 8.5ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಇನ್ನು ಸೆಲ್ಯುಟೊ 125 ಬೈಕ್ 125ಸಿಸಿ, ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.3 ಬಿಹೆಚ್‍ಪಿ ಮತ್ತು 10.1ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎರಡು ಬೈಕ್‍ಗಳ ಎಂಜಿನ್ ಅನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಬಿಡುಗಡೆಗೊಂಡ ಯಮಹಾ ಸೆಲ್ಯುಟೊ ಆರ್‍ಎಕ್ಸ್ ಬೈಕ್ ಮಾರುಕಟ್ಟೆಯಲ್ಲಿರುವ ಟಿವಿಎಸ್ ರಾಡಿಯಾನ್, ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್, ಬಜಾಜ್ ಪ್ಲಾತಿನಾ 100ಇಎಸ್ ಮತ್ತು ಇನ್ನಿತರೆ ಬೈಕ್‍‍ಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಯಮಹಾ ಸೆಲ್ಯುಟೊ ಬೈಕ್‍ಗಳು

ಇನ್ನಿ ಅಧಿಕ ಸಾಮರ್ಥ್ಯದ ಯಮಹಾ ಸೆಲ್ಯುಟೊ 125ಸಿಸಿ ಬೈಕ್ ಹೋಂಡಾ ಸಿಬಿ ಶೈನ್, ಬಜಾಜ್ ಡಿಸ್ಕವರಿ 125 ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್‍ಗಳುಗೆ ಪೈಪೋಟಿ ನೀಡಲಿದೆ. ಕೆಂದ್ರ ಸರ್ಕಾರದ ಅನುಸಾರ ಎಲ್ಲಾ ವಾಹನ ತಯಾರಕ ಸಂಸ್ಥೆಗಳು ತಮ್ಮ ತಮ್ಮ ವಾಹನಗಳಿಗೆ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಅಳವಡಿಸುತ್ತಿರುವುದು ಒಳ್ಳೆಯ ವಿಚಾರವೆ ಸರಿ.

Most Read Articles

Kannada
English summary
Yamaha Saluto RX & Saluto 125 Launched With UBS Read In Kannada
Story first published: Saturday, December 15, 2018, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X