ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬೈಕ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳಿಗೆ ತಲುಪಿದ್ದು, ಇದೇ ತಿಂಗಳು 8ಕ್ಕೆ ಹೊಸ ಬೈಕ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

By Praveen

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳುತ್ತಿರುವ ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬೈಕ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳಿಗೆ ತಲುಪಿದ್ದು, ಇದೇ ತಿಂಗಳು 8ಕ್ಕೆ ಹೊಸ ಬೈಕ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಯಮಹಾ ವೈಝಡ್ಎಫ್ ಆರ್ 15 ವಿ3 ಬೈಕ್ ಸದ್ಯ ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಹಲವು ವಿಶೇಷತೆಗಳಿಂದಾಗಿ ಸೂಪರ್ ಬೈಕ್ ಪ್ರಿಯರ ಗಮನಸೆಳೆಯುತ್ತಿದೆ.

ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಇನ್ನು ಬಿಡುಗಡೆ ಮಾಡುತ್ತಿರುವ ಹೊಸ ಬೈಕ್ ಮಾದರಿಯು ವಿದೇಶಿಯಲ್ಲಿ ಮಾರಾಟಗೊಳ್ಳುತ್ತಿರುವ ವೈಝಡ್ಎಫ್ ಆರ್ 15 ವಿ3 ವೈಶಿಷ್ಟ್ಯತೆಗಳನ್ನೇ ಇಂಡಿಯಾ ಆವೃತ್ತಿ ಕೂಡಾ ಪಡೆದುಕೊಂಡಿದ್ದು, ಸೂಪರ್ ಬೈಕ್ ಪ್ರಿಯರಿಗೆ ಹೊಸ ಅನುಭೂತಿ ನೀಡಲಿವೆ.

Recommended Video

EICMA 2017: Royal Enfield Interceptor And Continental GT Unveiled - DriveSpark
ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಹೀಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಗುಣವಿಶೇಷಗಳನ್ನು ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು ಈ ಹಿಂದಿನ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದೆ.

ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಎಂಜಿನ್ ಸಾಮರ್ಥ್ಯ

155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜ.8ಕ್ಕೆ ಬಿಡುಗಡೆಯಾಗಲಿದೆ ಯಮಹಾ ಹೊಚ್ಚ ಹೊಸ ವೈಝಡ್ಎಫ್-ಆರ್15 ವಿ 3.0

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಬೈಕ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಯಮಹಾ ಸಂಸ್ಥೆಯು ಈ ಹಿಂದಿನ ವೈಝಡ್ಎಫ್ ಆರ್ 15 ಆವೃತ್ತಿಯ ವರ್ಷನ್ 3.0 ಮೂಲಕ ಬೈಕ್ ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಬೈಕಿನ ಬಿಡುಗಡೆಯ ದಿನದಂದು ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಮತ್ತಷ್ಟು ಮಾಹಿತಿ ನೀಡಲಿದೆ.

ತಪ್ಪದೇ ಓದಿ- ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್....

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Wednesday, January 3, 2018, 14:38 [IST]
English summary
Yamaha YZF-R15 V3.0 India Launch Date Revealed.
Read more on yamaha ಯಮಹಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+