ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಅಮೆಜಾನ್ ಇ-ಕಾಮರ್ಸ್ ಮಾರುಕಟ್ಟೆ ಪ್ಲಾಟ್‍ಫಾರ್ಮ್‍‍ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಖರೀದಿಸಲು ಲಭ್ಯವಿರುತ್ತವೆ ಎಂದು ಆಂಪಿಯರ್ ವೆಹಿಕಲ್ಸ್ ತಿಳಿಸಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಇನ್ನೂ ಮುಂದೆ ಆನ್‍‍ಲೈನ್‍ ಮೂಲಕವೇ ಖರೀದಿಸಬಹುದಾಗಿದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಸದ್ಯಕ್ಕೆ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಆನ್‍‍ಲೈನ್‍‍ನಲ್ಲಿ ಖರೀದಿಸಬಹುದು. ಇದರಲ್ಲಿ ತಿರುಚ್ಚಿ, ಮಂಗಳೂರು, ಕೊಯಮತ್ತೂರು, ಬೆಂಗಳೂರು ಮತ್ತು ಕರೂರು ನಗರಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಅನುಕೂಲತೆಯನ್ನು ಹೆಚ್ಚಿಸಲು ಓಮ್ನಿ ಚಾನೆಲ್ ಪ್ಲಾಟ್‍‍ಫಾರ್ಮ್ ರಚಿಸಲು ಕಂಪನಿಯು ಉದ್ದೇಶಿಸಿದೆ. ಅಮೆಜಾನ್‍‍ನೊಂದಿಗೆ ಕೈಜೋಡಿಸಿ ಮೈತ್ರಿಯ ಮೂಲಕ ಯುವ ಮಾರುಕಟ್ಟೆ ಮತ್ತು ಡಿ‍ಜಿಟಲ್ ಬಳೆಕೆದಾರರ ಗಮನಸೆಳೆಯಬಹುದು ಎಂದು ಕಂಪನಿ ನಂಬಿದೆ. ಇಂದು ಎಲ್ಲರೂ ಸುಲಭವಾಗಿ ಆನ್‍‍ಲೈನ್ ಮುಖಾಂತರ ಖರೀದಿಸಲು ಹೆಚ್ಚು ಬಯಸುತ್ತಾರೆ ಎಂಬುದು ಕಂಪನಿಯ ವಾದವಾಗಿದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್‍‍ಲೈ‍‍ನ್‍‍ನಲ್ಲಿ ಖರೀದಿಸಲು ಲಭ್ಯವಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮಾರಾಟವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಆನ್‍ಲೈನ್‍ನಲ್ಲಿ ಖರೀದಿಸಲು ಜೀಲ್, ವಿ -48 ಎಲ್‌ಎ, ಮ್ಯಾಗ್ನಸ್ 60, ರಿಯೊ ಎಲ್‌ಎ ಮತ್ತು ರಿಯೊ ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಲಭ್ಯವಿದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಆಂಪಿಯರ್ ಸ್ಕೂಟರ್‍‍ಗಳಲ್ಲಿ ವಿ48 ಹಾಗೂ ರಿಯೊ ಸ್ಕೂಟರ್‍‍ಗಳು ಕಡಿಮೆ ವೇಗವನ್ನು ಹೊಂದಿದ್ದರೆ, ಜೀಲ್ ಹೆಚ್ಚು ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಆಂಪಿಯರ್ ಕಂಪನಿಯ ಪ್ರಮುಖ ಸ್ಕೂಟರ್ ಆದ ಜೀಲ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಗ್ರಾಹಕರು ಅಮೆಜಾನ್ ಮೂಲಕ ಅನ್‍ಲೈನ್‍ನಲ್ಲಿ ಖರೀದಿಸಿದ ಬಳಿಕ ಪಾವತಿ ಖಚಿತಪಡಿಸಿಕೊಳ್ಳುವ ವೊಚರ್ ನೀಡಲಾಗುತ್ತದೆ. ಖರೀದಿದಾರರು ನಂತರ ಖರೀದಿ ರಶೀದಿಯಲ್ಲಿ ನಮೂದಿಸಿದ ಆಯಾ ಡೀಲರ್ ಬಳಿ ತೆರಳಿ ವಾಹನವನ್ನು ಪಡೆದುಕೊಳ್ಳಬಹುದು. ಇದು ಆನ್‍‍ಲೈನ್ ಶಾಪಿಂಗ್‍‍ನ ಎಲ್ಲಾ ಅನುಕೂಲತೆಗಳನ್ನು ಆಫ್‍ಲೈನ್ ಮಾರಾಟಗಾರರ ಅನುಭವವನ್ನು ಗ್ರಾಹಕರಿಗೆ ಲಭಿಸುತ್ತದೆ.

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಸೊಸೈಟಿ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್‌ಎಂಇವಿ) ಅಂದಾಜಿನ ಪ್ರಕಾರ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ಶೇ.200 ಕ್ಕಿಂತ ಹೆಚ್ಚುತ್ತಿದೆ. ಆಂಪಿಯರ್ ಎಲೆಕ್ಟ್ರಿಕ್ ವಾಹನಗಳು ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮದಲ್ಲಿ ಗಮನಾರ್ಹ ಸ್ಥಾನವನ್ನು ಹೊಂದಿವೆ. ಮಲ್ಟಿ-ಸ್ಪೀಡ್, ಕೈ‍‍ಗೆಟುಕುವ ದರದಲ್ಲಿ ಎಲೆಕ್ಟ್ರಿನ್ ಸ್ಕೂಟರ್‍‍ಗಳ ಶ್ರೇಣಿಯನ್ನು ಹೊಂದಿರುವುದು ಆಂಪಿಯರ್ ಕಂಪನಿಯ ವಿಶೇಷತೆಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಆಂಪಿಯರ್ ದೇಶಾದ್ಯಂತ 50,000 ಕ್ಕೂ ಹೆಚ್ಚು ಗ್ರಾಹಕರ ಸಂಖ್ಯೆಯನ್ನು ಹೊಂದಿದೆ. ಎಲೆಕ್ಟ್ರಿಕ್ ವಾಹನದ ಪ್ರಮುಖ ಅಂಶಗಳೆಂದರೆ ಸ್ಥಳೀಯವಾಗಿ ತಯಾರಿಸುವ ಜೊತೆಗೆ ತಮ್ಮ ವಾಹನಗಳ ಬೆಲೆಯನ್ನು ಕಡಿಮೆ ದರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಂಪನಿಯು ಇತ್ತೀಚೆಗೆ ತಮ್ಮ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ 26,990ರ ವರೆಗೂ ವಿಶೇಷ ಭರ್ಜರಿ ಆಫರ್‍ ಅನ್ನು ಘೋಷಿಸಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅಮೆಜಾನ್‍ನಲ್ಲಿ ಮಾರಾಟವಾಗುತ್ತಿವೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು

ಆಂಪಿಯರ್ ಎಲೆಕ್ಟ್ರಿಕ್ ತಮ್ಮ ಸ್ಕೂಟರ್‍‍‍ಗಳನ್ನು ಮಾರಾಟ ಮಾಡಲು ಹೊಸ ತಂತ್ರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಿಜಿಟಲ್ ಇಂಡಿಯಾ ಆಂದೋಲನದಿಂದ ಹೆಚ್ಚಿನ ವ್ಯವಹಾರ ವಹಿವಾಟುಗಳನ್ನು ಆನ್‍‍ಲೈನ್‍‍ನಲ್ಲಿ ನಡೆಸುತ್ತಿದ್ದಾರೆ. ಇದರಿಂದ ಆಂಪಿಯರ್ ಕಂಪನಿಯು ತಮ್ಮ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಆನ್‍ಲೈನ್‍‍ನಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದೆ.

More from DriveSpark

Article Published On: Friday, October 18, 2019, 11:42 [IST]
English summary
Ampere Electric Scooter Now Available Online Through Amazon In Selected Cities - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+