Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮೇಲೆ ಭರ್ಜರಿ ರಿಯಾಯಿತಿ
ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಆಂಪಿಯರ್ ವೆಹಿಕಲ್ಸ್ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮೇಲೆ ಹಲವು ಸೌಲಭ್ಯಗಳ ಜೊತೆಗೆ ಭಾರೀ ಪ್ರಮಾಣದ ರಿಯಾಯಿತಿಯನ್ನು ಘೋಷಿಸಿದೆ.

ಆಂಪಿಯರ್ ವೆಹಿಕಲ್ಸ್, ಇದೇ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಈ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಗೆ ಆಂಪ್ ಅಪ್ ಎಂದು ಹೆಸರಿಡಲಾಗಿದೆ. ಯಾವುದೇ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಖರೀದಿಸಿದರೆ ಅತ್ಯುತ್ತಮವಾದ ಕೊಡುಗೆಗಳನ್ನು ನೀಡಲಾಗುವುದು.

ಕಂಪನಿಯು ತನ್ನ ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದ್ದು, ಹಲವು ಕೊಡುಗೆಗಳನ್ನು ಸಹ ನೀಡಲಾಗುವುದು. ರೂ.26,990ಗಳವರೆಗೆ ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿಯು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 31ರವರೆಗೆ ಲಭ್ಯವಿರಲಿದೆ.

ಗ್ರೀವ್ಸ್ ಕಾಟನ್ ಲಿಮಿಟೆಡ್‍ನ ಭಾಗವಾಗಿರುವ ಆಂಪಿಯರ್ ಕಂಪನಿಯು ಭಾರತದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿದೆ. ಆಂಪಿಯರ್ ಕಂಪನಿಯಲ್ಲಿ ಕಡಿಮೆ ವೇಗ ಹಾಗೂ ಹೆಚ್ಚಿನ ವೇಗವನ್ನು ಹೊಂದಿರುವ ಬೈಕುಗಳಿದ್ದು, ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ.

ಹಬ್ಬದ ಹಿನ್ನೆಲೆಯಲ್ಲಿ ನೀಡಲಾಗುತ್ತಿರುವ ರಿಯಾಯಿತಿ ಹಾಗೂ ಸೌಲಭ್ಯಗಳ ಜೊತೆಗೆ ಆಂಪಿಯರ್ ಕಂಪನಿಯು ತನ್ನ ಗ್ರಾಹಕರಿಗೆ ಆಕರ್ಷಕ ಹಣಕಾಸು ಸೌಲಭ್ಯಗಳನ್ನು ಸಹ ಒದಗಿಸುತ್ತದೆ. ಆಂಪಿಯರ್ ಕಂಪನಿಯು ವಿ48, ವಿ48 ಎಲ್‍ಐ, ರಿಯೊ, ರಿಯೊ ಎಲ್‍ಐ, ಮ್ಯಾಗ್ನಸ್ ಹಾಗೂ ಜೀಲ್ ಎಂಬ ಆರು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಈ ಸ್ಕೂಟರ್‍ಗಳ ಪೈಕಿ ವಿ48 ಹಾಗೂ ರಿಯೊ ಸ್ಕೂಟರ್‍ಗಳು ಕಡಿಮೆ ವೇಗವನ್ನು ಹೊಂದಿದ್ದರೆ, ಜೀಲ್ ಹೆಚ್ಚು ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಆಂಪಿಯರ್ ಕಂಪನಿಯ ಪ್ರಮುಖ ಸ್ಕೂಟರ್ ಆದ ಜೀಲ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಜೀಲ್ ಸ್ಕೂಟರ್ ಉತ್ತಮವಾದ ಪರ್ಫಾಮೆನ್ಸ್ ಜೊತೆಗೆ, ಅಧಿಕ ಮೈಲೇಜ್ ಕೂಡ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 12 ಕಿ.ವ್ಯಾ ಎಲೆಕ್ಟ್ರಿಕ್ ಮೋಟರಿನ ಜೊತೆಗೆ 60ವೋಲ್ಟ್ಸ್/3ಎಹೆಚ್‍ನ ಸುಧಾರಿತ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜೀಲ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 75 ಕಿ.ಮೀ ದೂರದವರೆಗೂ ಚಲಿಸುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ 55 ಕಿ.ಮೀಗಳಾಗಿದೆ. ಜೀಲ್ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 5 ರಿಂದ 6 ಗಂಟೆಗಳು ಬೇಕಾಗುತ್ತವೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ಎಲೆಕ್ಟ್ರಿಕ್ ಸ್ಕೂಟರ್ 130 ಕೆ.ಜಿ ಭಾರವನ್ನು ಸಾಗಿಸಬಲ್ಲದು. ಈ ಸ್ಕೂಟರಿನ ಮೇಲೆ 2 ವರ್ಷಗಳ ವಾರಂಟಿ ನೀಡಲಾಗುವುದು. ಜೀಲ್ ಎಲೆಕ್ಟ್ರಿಕ್ ಸ್ಕೂಟರ್ ಎಲ್‍ಇಡಿ ಡಿಆರ್‍ಎಲ್, ಹೆಡ್‍ಲ್ಯಾಂಪ್, ಟೇಲ್‍ಲೈಟ್‍ಗಳಿವೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಡ್ಯೂಯಲ್ ಶಾಕ್ ಅಬ್ಸರ್ವರ್ ಹಾಗೂ ರಿಜನರೇಟಿವ್ ಬ್ರೇಕ್‍ಗಳನ್ನು ಹೊಂದಿದೆ. ಈ ಸ್ಕೂಟರಿನಲ್ಲಿ ಎಕಾನಮಿ ಹಾಗೂ ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‍ಗಳಿವೆ. ಈ ಸ್ಕೂಟರಿನ ಜೊತೆಗೆ ತೆಗೆದು ಹಾಕಬಹುದಾದ ಬ್ಯಾಟರಿಗಳನ್ನು ನೀಡಲಾಗುತ್ತದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಆಂಪಿಯರ್ ವೆಹಿಕಲ್ಸ್ ಕಂಪನಿಯು ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೆಗ್‍ಮೆಂಟಿನಲ್ಲಿರುವ ಜನಪ್ರಿಯ ಕಂಪನಿಗಳ ಪೈಕಿ ಒಂದಾಗಿದೆ. ಈ ಕಂಪನಿಯು ಕಡಿಮೆ ವೇಗದಲ್ಲಿ ಚಲಿಸುವ ಸ್ಕೂಟರ್‍ಗಳಿಂದ ಹಿಡಿದು, ವೇಗವಾಗಿ ಚಲಿಸುವ ಸ್ಕೂಟರ್‍ಗಳವರೆಗೆ ಹಲವು ಸ್ಕೂಟರ್‍ಗಳನ್ನು ಮಾರಾಟ ಮಾಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‍ಗಳು ಎವಾನ್ ಮೋಟಾರ್ಸ್ ಹಾಗೂ ಒಕಿನಾವಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಪೈಪೋಟಿ ನೀಡುತ್ತವೆ.