ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಎಲ್ಲಾ ವಾಹನಗಳಲ್ಲಿ ಬಿ‍ಎಸ್ 4 ಎಂಜಿನ್ ಬದಲಿಗೆ ಬಿ‍ಎಸ್ 6 ಎಂಜಿನ್ ಅಳವಡಿಸುವುದೂ ಒಂದು.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಬಿ‍ಎಸ್ 4 ಎಂಜಿನ್‍‍ಗಳಿಗೆ ಹೋಲಿಸಿದರೆ, ಬಿ‍ಎಸ್ 6 ಎಂಜಿನ್‍‍ಗಳು ಕಡಿಮೆ ಪ್ರಮಾಣದ ಹೊಗೆಯನ್ನು ಹೊರಹಾಕುತ್ತವೆ. ಕೇಂದ್ರ ಸರ್ಕಾರವು ಭಾರತದಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿ‍ಎಸ್ 6 ಎಂಜಿನ್ ಹೊಂದಿರಬೇಕೆಂದು ಹೇಳಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಬಹುತೇಕ ಎಲ್ಲಾ ವಾಹನ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳ ಎಂಜಿನ್‍‍ಗಳನ್ನು ಬಿ‍ಎಸ್ 6ಗೆ ಅಪ್‍‍ಡೇಟ್‍‍ಗೊಳಿಸುತ್ತಿವೆ. ಬಿ‍ಎಸ್ 6 ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಿ ವಾಹನಗಳಲ್ಲಿ ಅಳವಡಿಸುವುದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಈ ಕಾರಣಕ್ಕೆ ವಾಹನಗಳ ಬೆಲೆಯಲ್ಲಿಯೂ ಸಹ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಟಿವಿ‍ಎಸ್ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಏರಿಸಲಿದೆ. ಟಿವಿ‍ಎಸ್ ಕಂಪನಿಯ ಜನಪ್ರಿಯ ಬೈಕ್ ಆದ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಸ್ಪೋರ್ಟ್ಸ್ ಬೈಕಿನ ಬೆಲೆ ಏರಿಕೆಯಾಗಲಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಈ ಸಂಬಂಧ ಟೀಂ ಬಿ‍ಹೆಚ್‍‍ಪಿ ದಾಖಲೆಯೊಂದನ್ನು ಬಿಡುಗಡೆಗೊಳಿಸಿದೆ. ಈ ದಾಖಲೆಯ ಪ್ರಕಾರ ಟಿ‍‍ವಿ‍ಎಸ್ ಅಪಾಚೆ ಆರ್‍ಆರ್ 310 ಸ್ಪೋರ್ಟ್ಸ್ ಬೈಕಿನ ಬೆಲೆಯು ರೂ.38,870 ಏರಿಕೆಯಾಗಲಿದೆ. ಈ ಬೆಲೆ ಏರಿಕೆಯು ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಮಾದರಿಗೆ ಹೋಲಿಸಿದರೆ 20%ನಷ್ಟು ಹೆಚ್ಚಾಗಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಈ ಬೆಲೆ ಏರಿಕೆಯು 2020ರ ಜನವರಿ 1ರಿಂದ ಜಾರಿಗೆ ಬರಲಿದೆ. ಅಂದಿನ ದಿನವೇ ಬಿಎಸ್ 6 ಎಂಜಿನ್ ಹೊಂದಿರುವ ಟಿ‍‍ವಿಎಸ್ ಅಪಾಚೆ ಆರ್‍ಆರ್ 310 ಸ್ಪೋರ್ಟ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಅಪಾಚೆ ಆರ್‍ಆರ್ 310 ಬೈಕಿನ ರೀತಿಯಲ್ಲಿಯೇ ಟಿವಿ‍ಎಸ್ ಕಂಪನಿಯ ಇತರ ದ್ವಿಚಕ್ರ ವಾಹನಗಳ ಬೆಲೆಯನ್ನು ಸಹ ಏರಿಸಲಾಗುವುದೆಂದು ಟಿ‍‍ವಿ‍ಎಸ್ ಕಂಪನಿಯು ತಿಳಿಸಿದೆ. ಟಿವಿ‍ಎಸ್ ಎಕ್ಸ್ ಎಲ್ 100 ಮೊಪೆಡ್ ಬೆಲೆಯು ರೂ.7,450ರವರೆಗೆ ಏರಿಕೆಯಾಗಲಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಟಿವಿಎಸ್ ಕಂಪನಿಯ ಇತರ ಬೈಕ್ ಹಾಗೂ ಸ್ಕೂಟರ್‍‍ಗಳ ಬೆಲೆಯು ಸಹ ರೂ.8,000ದಿಂದ ರೂ.10,000ದವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಆದರೆ ಅಪಾಚೆ ಸರಣಿಯಲ್ಲಿರುವ ಬೈಕುಗಳ ಬೆಲೆ ಮಾತ್ರ ಸಿಕ್ಕಾಪಟ್ಟೆ ಏರಿಕೆಯಾಗಲಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಅಪಾಚೆ ಆರ್‍ಆರ್ 310 ಬೈಕ್ ಟಿವಿ‍ಎಸ್ ಕಂಪನಿಯ ಪ್ರೀಮಿಯಂ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ 313 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 34 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಅಪಾಚೆ ಆರ್‍ಆರ್ 310 ಸ್ಪೋರ್ಟ್ಸ್ ಬೈಕ್ ಅನ್ನು ಭಾರತದಲ್ಲಿ ಮಾತ್ರವಲ್ಲದೇ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ. ಈ ಬೈಕ್ ಭಾರತದ ಯುವಜನರ ನೆಚ್ಚಿನ ಬೈಕ್ ಆಗಿದೆ.

ಮತ್ತಷ್ಟು ದುಬಾರಿಯಾಗಲಿದೆ ಟಿವಿ‍ಎಸ್ ಅಪಾಚೆ ಬೈಕ್

ಬಿ‍ಎಸ್ 6 ಎಂಜಿನ್‍‍ಗಳನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಎಲ್ಲಾ ವಾಹನಗಳ ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. ಕಾರುಗಳ ವಿಷಯಕ್ಕೆ ಬರುವುದಾದರೆ, ಬಿ‍ಎಸ್ 6 ಡೀಸೆಲ್ ಎಂಜಿನ್ ಕಾರುಗಳ ಬೆಲೆಯು ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಕಾರುಗಳ ಬೆಲೆಗಿಂತ ಹೆಚ್ಚಾಗಲಿದೆ.

Article Published On: Tuesday, December 10, 2019, 10:44 [IST]
English summary
BS6 TVS Apache RR 310 sportsbike price hike. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+