ಡುಕಾಟಿ ರೈಡಿಂಗ್ ಅಭಿಯಾನದ ಬಗ್ಗೆ ಗೊತ್ತಾ?
ಇಟಲಿಯ ಮೋಟಾರ್‍ಸೈಕಲ್ ತಯಾರಕ ಕಂಪನಿ ಡುಕಾಟಿ, 2019ರ ವರ್ಷದ ಎರಡನೇ ಭಾಗದಲ್ಲಿ ಡುಕಾಟಿ ರೈಡಿಂಗ್ ಎಕ್ಸ್ ಪಿರಿಯನ್ಸ್ (ಡಿಆರ್‍ಇ) ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನದ ಹಿಂದಿರುವ ಉದ್ದೇಶವೆಂದರೆ, ಈ ಬೈಕಿನ ಮಾಲೀಕರು ತಮ್ಮ ಮೋಟಾರ್ ಸೈಕಲ್‍ಗಳ ಸಾಮರ್ಥ್ಯವನ್ನು ತಿಳಿದುಕೊಳ್ಳುವುದಲ್ಲದೇ ಪರ್ಫಾಮೆನ್ಸ್ ಕೌಶಲ್ಯದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

ಈ ಅಭಿಯಾನದಲ್ಲಿ ಐದು ಹೊಸ ಯೋಜನೆಗಳಿರಲಿವೆ. ಜುಲೈನಲ್ಲಿ ಡುಕಾಟಿ ಸೇಫ್ಟಿ ಯೋಜನೆಯಿರಲಿದೆ, ಇದಾದ ನಂತರ ಡುಕಾಟಿ ಡ್ರೀಮ್ ಟೂರ್, ಆಗಸ್ಟ್ ತಿಂಗಳಿನಲ್ಲಿ ಡಿಆರ್‍ಇ ಇಂಡುವಿಷುಯಲ್ ರೇಸ್‍ಟ್ರಾಕ್ ಟ್ರೇನಿಂಗ್ ಹಾಗೂ ಡಿಆರ್‍ಇ ಆಫ್ ರೋಡ್ ಡೇಸ್‍ಯಿರಲಿವೆ. ಸೆಪ್ಟೆಂಬರ್‍ನಲ್ಲಿ ಡಿಆರ್‍ಇ ಟ್ರಾಕ್ ಡೇಸ್, ಅಕ್ಟೋಬರ್‍ನಲ್ಲಿ ಡುಕಾಟಿ ರೇಸ್ ಕಪ್, ನವೆಂಬರ್‍ನಲ್ಲಿ 2019ರ ಜೆಕೆ ಟಯರ್ ಸೂಪರ್‍ಬೈಕ್ ಚಾಂಪಿಯನ್‍ಶಿಪ್ ಇರಲಿದೆ.

ಡುಕಾಟಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್‍ರವರಾದ ಸರ್ಗಿ ಕಾನೊವಸ್ ರವರು ಮಾತನಾಡಿ, ನಾವು ಗ್ಲೋಬಲ್ ಡಿಆರ್‍ಇ ಯೋಜನೆಯನ್ನು ಭಾರತಕ್ಕೆ ಬೈಕ್ ಪ್ರಿಯರ ಪ್ಯಾಶನ್ ಹಾಗೂ ಆಸಕ್ತಿಗಾಗಿ ಅಪೂರ್ವವಾದ ಅನುಭವವನ್ನು ನೀಡಲು ತಂದಿದ್ದೇವೆ. 2018ರಲ್ಲಿ ಡುಕಾಟಿಯು ಅದ್ಭುತವಾದ ಚಾಲನಾ ಹಾಗೂ ಕಲಿಕಾ ತರಬೇತಿಗಳನ್ನು ಯಶಸ್ವಿಯಾಗಿ ನೀಡಿತ್ತು ಎಂದು ತಿಳಿಸಿದರು.

ನಾವು ಈ ವರ್ಷವೂ ಸಹ ಇನ್ನೂ ಹೆಚ್ಚಿನ ವಿಭಿನ್ನವಾದ ಚಾಲನಾ ಅನುಭವಗಳನ್ನು ನೀಡಲಿದ್ದೇವೆ ಹಾಗೂ ಇನ್ನೂ ಹೆಚ್ಚಿನ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿ ಎಂದು ಬಯಸುತ್ತೇವೆ. ಈ ಚಟುವಟಿಕೆಗಳಿಂದ ಚಾಲಕರು ಪರಿಣಿತರಿಂದ ಹೆಚ್ಚು ಕಲಿಯಲಿದ್ದಾರೆ. ಇದರಿಂದ ಡುಕಾಟಿ ಬೈಕುಗಳ ಬಗೆಗಿನ ಪ್ರೀತಿ ಹಾಗೂ ಒಲವು ಹೆಚ್ಚಾಗಲಿದೆ ಎಂದು ತಿಳಿಸಿದರು.

ಡುಕಾಟಿಯ ಸುರಕ್ಷಾ ಯೋಜನೆಯನ್ನು ಈ ಅಭಿಯಾನದಲ್ಲಿ ಹೊಸದಾಗಿ ಸೇರಿಸಲಾಗಿದೆ. ಇದರ ಗುರಿಯು ಚಾಲಕರು ಸುರಕ್ಷೆಯ ಚಾಲನೆಗೆ ಹೆಚ್ಚು ಆದ್ಯತೆ ನೀಡಲಿ ಎನ್ನುವುದಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬರ ಚಾಲನಾ ಅನುಭವದ ಮೇಲೆ ಸುರಕ್ಷಾ ನಿಯಮಗಳನ್ನು ಕಲಿಸಲಾಗುವುದು. ಡುಕಾಟಿಯ ರೈಡಿಂಗ್ ಎಕ್ಸ್ ಪೀರಿಯನ್ಸ್ ಇಂಡ್ಯುವಿಜುಯಲ್ ರೇಸ್ ಟ್ರಾಕ್ ಟ್ರೇನಿಂಗ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ, ಪ್ರಮಾಣಪತ್ರವನ್ನು ಪಡೆದಿರುವ ಡಿಆರ್‍ಇ ತರಬೇತುದಾರರಿಂದ ವಿಶ್ವ ದರ್ಜೆಯ ತರಬೇತಿಯನ್ನು ನೀಡಲಾಗುವುದು.

ಈ ಯೋಜನೆಯನ್ನು ರೇಸ್‍ಟ್ರಾಕ್‍ನಲ್ಲಿ ಮನುಷ್ಯ ಹಾಗೂ ಮೆಷಿನ್‍ನ ಪರ್ಫಾಮೆನ್ಸ್ ಗಾಗಿಯೇ ಮಾಡಲಾಗಿದೆ. ಡಿಆರ್‍ಇ ಆಫ್ ರೋಡ್ ಕೋರ್ಸ್ ಅನ್ನು ಚಾಲಕರು ತಮ್ಮ ಆಫ್ ರೋಡ್ ಸ್ಕಿಲ್‍ಗಳನ್ನು ಸುಧಾರಿಸಿಕೊಳ್ಳಲು ನೀಡಲಾಗುತ್ತಿದೆ. ಈ ತರಬೇತಿಯಿಂದ ಚಾಲಕರು ನೀರಿನ ಮೇಲೆ ಹಾಗೂ ಅಂಕು ಡೊಂಕು ರಸ್ತೆಗಳಲ್ಲಿ ಧೈರ್ಯವಾಗಿ ವಾಹನ ಚಲಾಯಿಸಲು ಅನುಕೂಲವಾಗುತ್ತದೆ. ಈ ತರಬೇತಿಯಲ್ಲಿ ಬೈಕ್ ಅನ್ನು ಆಫ್ ರೋಡ್‍ಗಳಿಗಾಗಿ ತಯಾರು ಮಾಡುವ ಬಗ್ಗೆ, ಆಫ್ ರೋಡ್ ತಯಾರಿ ಬಗ್ಗೆ ಹಾಗೂ ಆಫ್ ರೋಡ್‍ಗಳಲ್ಲಿ ಬೈಕ್ ಅನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡಲಾಗುವುದು.
MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಡಿಆರ್‍ಇ ಟ್ರಾಕ್ ಡೇಸ್ ಯೋಜನೆಯಲ್ಲಿ ರೇಸ್‍ಟ್ರಾಕ್‍ನ ಸ್ಕಿಲ್ ಸೆಟ್‍ಗಳನ್ನು ಹೆಚ್ಚಿಸುವ ಬಗ್ಗೆ ತರಬೇತಿ ನೀಡಲಾಗುವುದು. ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಚಾಲಕರು ಡುಕಾಟಿಯ ಅಧಿಕೃತ ಟೆಸ್ಟ್ ರೈಡರ್ ಆದ ಅಲೆಸ್ಸಾಂಡ್ರೊ ವಾಲಿಯಾರವರ ಜೊತೆಯಲ್ಲಿ ಚಾಲನೆ ಮಾಡುವ ಅವಕಾಶ ಪಡೆಯಲಿದ್ದಾರೆ. ಡುಕಾಟಿ ಬೈಕುಗಳನ್ನು ಹೊಂದಿಲ್ಲದೇ ಇರುವವರು ಸಹ ಈ ಯೋಜನೆಯಲ್ಲಿ ಪಾಲ್ಗೊಂಡು ಡುಕಾಟಿ ಸೂಪರ್‍ಬೈಕ್‍ಗಳನ್ನು ಟ್ರಾಕ್‍ನಲ್ಲಿ ಚಲಾಯಿಸಬಹುದು.

ಈ ಯೋಜನೆಗಾಗಿ ಡುಕಾಟಿ ಕಂಪನಿಯು ಇನ್ಫಿನಿಟಿ ರೆಸಾರ್ಟ್‍ನ ಜೊತೆಗೆ ಕೈಜೋಡಿಸಿದ್ದು, ಡೂ ಇಟ್ ಯೂವರ್‍ಸೆಲ್ಫ್ - ಡುಕಾಟಿ ಡಿಸ್ಕವರೀಸ್ ಎಕ್ಸ್ ಪಿರಿಯನ್ಸ್ ಎಂಬ ಕೊಡುಗೆಯನ್ನು ನೀಡಲಿದೆ. ಡಿಐವೈ ಸೆಟ್ ಅಪ್ ನಿಂದಾಗಿ ಚಾಲಕರು ತಮ್ಮ ಸ್ವಂತ ಕನಸುಗಳನ್ನು ಡುಕಾಟಿ ಜೊತೆಗೆ ನನಸು ಮಾಡಿಕೊಳ್ಳಬಹುದು. ಕಾರ್ಬೆಟ್ ನ್ಯಾಷನಲ್ ಪಾರ್ಕ್‍ನ ಬಳಿಯಿರುವ ಇನ್ಫಿನಿಟಿ ರೆಸಾರ್ಟ್‍ನ ಜೊತೆಗೆ ಇನ್ನೂ ನಾಲ್ಕು ಸ್ಥಳಗಳನ್ನು ಈ ಡಿಐವೈ ಎಕ್ಸ್ ಪಿರಿಯನ್ಸ್ ಯೋಜನೆಗಾಗಿ ಬಳಸಿಕೊಳ್ಳಲಾಗುವುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಡುಕಾಟಿ ತನ್ನ ಗ್ರಾಹಕರಿಗಾಗಿ ನೀಡುತ್ತಿರುವ ಯೋಜನೆಯು ಅದ್ಭುತವಾಗಿದೆ. ಇದೇ ರೀತಿಯ ಯೋಜನೆಗಳನ್ನೇ ಎಲ್ಲಾ ಪ್ರಿಮೀಯಂ ಮೋಟಾರ್‍ಸೈಕಲ್ ತಯಾರಕರಿಂದ ಗ್ರಾಹಕರು ಬಯಸುವುದು. ಭಾರತದಂತಹ ದೇಶದಲ್ಲಿ ಪ್ರಿಮೀಯಂ ಬೈಕುಗಳನ್ನು ತಯಾರಿಸಿ ಮಾರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿದೆ, ಆದರೆ ಗ್ರಾಹಕರಿಗೆ ಆ ಬೈಕುಗಳ ಬಗ್ಗೆ ಅರಿವು ಮೂಡಿಸಿ, ತಮ್ಮಲ್ಲಿರುವ ಚಾಲನಾ ಸಾಮರ್ಥ್ಯವನ್ನು ತೋರಿಸುತ್ತಿರುವುದು ನಿಜಕ್ಕೂ ಅದ್ಭುತ. ಈ ನಿಟ್ಟಿನಲ್ಲಿ ಡುಕಾಟಿ ಕಂಪನಿಯ ನಡೆ ಶ್ಲಾಘನೀಯ.


Click it and Unblock the Notifications








