ಬಿಡುಗಡೆಯಾಯಿತು ದುಬಾರಿ ಬೆಲೆಯ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್
ಹೊಸ ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.19.99ಲಕ್ಷಗಳಾಗಿದೆ. ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ ಅನ್ನು, ಮಲ್ಟಿಸ್ಟ್ರಾಡಾ 1200 ಎಂಡ್ಯುರೋ ಬೈಕಿನ ಬದಲಿಗೆ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನಲ್ಲಿ ಅಳವಡಿಸಲಾಗಿರುವ ಟಾಪ್ ಶೆಲ್ಫ್ ಸೈಕಲ್ ಭಾಗಗಳು ಹಾಗೂ ಫೀಚರ್‍ಗಳನ್ನು ಬೇರೆ ಕಂಪನಿಯ ಯಾವುದೇ ಬೈಕುಗಳಲ್ಲಿ ಅಳವಡಿಸಲಾಗಿಲ್ಲ.

ಡುಕಾಟಿ ಮಲ್ಟಿಸ್ಟ್ರಾಡಾ ಹೆಚ್ಚು ಸಾಮರ್ಥ್ಯ ಹೊಂದಿರುವ ಬೈಕ್ ಆಗಿದ್ದು, ಈ ಬೈಕ್ ಅನ್ನು ಯಾವುದೇ ಹೆಚ್ಚಿನ ಒತ್ತಡವಿಲ್ಲದೇ ಚಲಾಯಿಸಬಹುದಾಗಿದೆ. ರೇಸ್‌ಟ್ರಾಕ್‌ಗಳಲ್ಲಿ, ಟ್ರಾಫಿಕ್ ದಟ್ಟಣೆಯ ಮಧ್ಯೆ, ಆಫ್-ರೋಡ್ ಹಾಗೂ ಹೆದ್ದಾರಿಗಳಲ್ಲಿಯೂ ಸಹ ಆರಾಮವಾಗಿ ಚಲಾಯಿಸುವಂತಹ ಎಂಜಿನಿಯರಿಂಗ್ ಅಂಶಗಳನ್ನು ಅಳವಡಿಸಲಾಗಿದೆ. ಆಫ್-ರೋಡ್ ಸವಾರಿಗಾಗಿಯೇ ಪ್ರತ್ಯೇಕವಾದ ಬೈಕ್ ಬಯಸುವ ಜನರಿದ್ದು, ಅವರಿಗೆ ಎಂಡ್ಯುರೋ ಬೈಕ್ ನೆಚ್ಚಿನ ಬೈಕ್ ಆಗಲಿದೆ.

ಡುಕಾಟಿ ಮಲ್ಟಿಸ್ಟ್ರಾಡಾ 1200 ಎಂಡ್ಯುರೋ ಬೈಕ್ ಅನ್ನು ಮೊದಲ ಬಾರಿಗೆ 2016 ರಲ್ಲಿ ಬಿಡುಗಡೆಗೊಳಿಸಲಾಯಿತು. ಒರಟು ನೆಲ ಹಾಗೂ ಆಫ್-ರೋಡ್ ರೈಡಿಂಗ್ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯಕ್ಕಾಗಿ ಅಡ್ವೆಂಚರ್ ಟೂರರ್‍ಗಳು ದೈತ್ಯಾಕಾರದ ಈ ಬೈಕಿಗೆ ಮನಸೋತರು. ಆದರೆ ಈ ಬೈಕ್ ಈಗ ಹಳೆಯದಾದ ಕಾರಣ ಹೊಸ ತಲೆಮಾರಿನ ಬೈಕಿನ ಅಗತ್ಯವಿದೆ. ಬದಲಿ ಬೈಕ್ ಆಗಿ ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ ಅನ್ನು ಅಡ್ವೆಂಚರ್ ಟೂರರ್ ಬೈಕ್ ಆಗಿ ಸಿದ್ಧಪಡಿಸಲಾಗಿದೆ.

ಈ ಬೈಕಿನಲ್ಲಿ ಲಿಕ್ವಿಡ್ ಕೂಲ್‍ನ 1,262 ಸಿಸಿ, ಎಲ್-ಟ್ವಿನ್ ಎಂಜಿನ್ ಅಳವಡಿಸಲಾಗಿದ್ದು, 9,500 ಆರ್‍ಪಿಎಂನಲ್ಲಿ 158.4 ಬಿಹೆಚ್‍ಪಿ ಹಾಗೂ 7,500 ಆರ್‍ಪಿಎಂನಲ್ಲಿ 128 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್‍ನ ಗೇರ್ ಬಾಕ್ಸ್ ಹಿಂದಿನ ವ್ಹೀಲ್ ಚಲಿಸುವಂತೆ ಮಾಡುತ್ತದೆ. ಅಪ್-ಡೌನ್ ಡುಕಾಟಿ ಕ್ವಿಕ್ ಶಿಫ್ಟರ್‍ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಸ್ಟ್ಯಾಂಡರ್ಡ್ ಮಲ್ಟಿಸ್ಟ್ರಾಡಾ 1260 ಬೈಕಿನಲ್ಲಿದ್ದಂತಹ ಎಂಜಿನ್ ಹೊಂದಿದೆ.

ಈ ಎಂಡ್ಯುರೋ ಬೈಕಿನಲ್ಲಿ ಹಲವಾರು ಹೆಚ್ಚುವರಿ ಫೀಚರ್‍ಗಳನ್ನು ಅಳವಡಿಸಲಾಗಿದ್ದು, ಆಫ್-ರೋಡ್‍ಗೆ ಹೇಳಿ ಮಾಡಿಸಿದಂತಿದೆ. ಇಟಲಿ ಮೂಲದ ಬೈಕ್ ತಯಾರಕ ಕಂಪನಿಯ ಪ್ರಕಾರ 85%ನಷ್ಟು ಗರಿಷ್ಠ ಟಾರ್ಕ್ 3,500ಆರ್‍ಪಿಎಂಗಿಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಿರಲಿದೆ. ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ 4,000 ಆರ್‌ಪಿಎಂನಲ್ಲಿ ಅತಿ ಹೆಚ್ಚು ಟಾರ್ಕ್ ಹೊಂದಿರಲಿದೆ ಎಂಬುದಾಗಿ ಡುಕಾಟಿ ಕಂಪನಿಯು ಹೇಳಿಕೊಂಡಿದೆ. ಸಾಮಾನ್ಯವಾಗಿ ಈ ಸೆಗ್‍ಮೆಂಟಿನ ಬೈಕ್ ಸವಾರರು ತಮ್ಮ ಬಹುತೇಕ ಸಮಯವನ್ನು ಸವಾರಿ ಮಾಡಲು ಬಯಸುತ್ತಾರೆ.

ಡುಕಾಟಿ ಮಲ್ಟಿಸ್ಟ್ರಾಡಾ ಎಂಡ್ಯುರೋ ಬೈಕ್, ಮಾರುಕಟ್ಟೆಯಲ್ಲಿರುವ ಯಾವುದೇ ಬೈಕಿನ ಅತ್ಯಂತ ಹೆಚ್ಚಿನ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ಗಳಲ್ಲಿ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ 6 ಅಕ್ಸಿಸ್‍ನ ಇನರ್ಶಿಯಲ್ ಮೆಶರ್‍ಮೆಂಟ್ ಯೂನಿಟ್ ಹೊಂದಿದ್ದು, ಇದರ ಜೊತೆಗೆ ಕಾರ್ನರಿಂಗ್ ಎಬಿಎಸ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ಡುಕಾಟಿ ವ್ಹೀಲಿ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ ಹಾಗೂ ಸ್ಕೈಹೂಕ್ ಸಸ್ಪೆಂಷನ್ ಸಿಸ್ಟಂಗಳವೆ. ಈ ಬೈಕಿನಲ್ಲಿ ಅರ್ಬನ್, ಸ್ಪೋರ್ಟ್, ಟೂರಿಂಗ್ ಹಾಗೂ ಎಂಡ್ಯುರೋ ಎಂಬ ನಾಲ್ಕು ಬಗೆಯ ರೈಡಿಂಗ್ ಮೋಡ್‍ಗಳಿವೆ.

ಈ ನಾಲ್ಕು ರೈಡಿಂಗ್ ಮೋಡ್‍ಗಳು ಕಸ್ಟಮೈಸಬಲ್ ಆಗಿವೆ. ಇನ್ಸ್ ಟ್ರೂಮೆಂಟೆಷನ್ ಕೆಲಸಗಳನ್ನು 5.0 ಇಂಚಿನ ಟಿಎಫ್‌ಟಿ ಡಿಸ್‍ಪ್ಲೇ ನಿರ್ವಹಿಸಿ, ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಟಿಎಫ್‌ಟಿ ಡಿಸ್‍ಪ್ಲೇಯನ್ನು ಸ್ಮಾರ್ಟ್‌ಫೋನ್‍ಗೆ ಕನೆಕ್ಟ್ ಮಾಡಬಹುದಾಗಿದ್ದು, ಫೋನ್‌ನಲ್ಲಿನ ಅಪ್ಲಿಕೇಶನ್ ಮೂಲಕ ಬೈಕಿನಲ್ಲಿರುವ ಸೆಟಪ್‌ಗಳನ್ನು ಬದಲಿಸಲು ಸವಾರರಿಗೆ ಅವಕಾಶ ನೀಡುತ್ತದೆ. ಸೀಟಿನ ಎತ್ತರವನ್ನು 860 ಎಂಎಂಗೆ ಇಳಿಸಲಾಗಿದ್ದು, 1200 ಎಂಡ್ಯುರೋ ಬೈಕಿಗಿಂತ 10 ಎಂಎಂ ಕಡಿಮೆ ಎತ್ತರವನ್ನು ಹೊಂದಿರಲಿದೆ.

ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್ ಆಫ್-ರೋಡ್‍ಗೆ ಹೇಳಿ ಮಾಡಿಸಿದ, ವೈರ್ ಸ್ಪೋಕ್ ವ್ಹೀಲ್‍ಗಳನ್ನು ಹೊಂದಿರುವ ಸ್ಕಾರ್ಪಿಯಾನ್ ಟ್ರಯಲ್ 2 ಟಯರ್‌ಗಳಲ್ಲಿ ಚಲಿಸುತ್ತದೆ. 254 ಕೆ.ಜಿಗಳಷ್ಟು ತೂಕವನ್ನು ಹೊಂದಿರುವ, ಈ ಬೈಕ್ ಮಾರುಕಟ್ಟೆಯಲ್ಲಿರುವ ಹೆಚ್ಚು ತೂಕದ ಬೈಕುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಬೈಕ್, ಟ್ರಯಂಫ್ ಟೈಗರ್ 1200 ಎಕ್ಸ್‌ಸಿಎಕ್ಸ್ ಹಾಗೂ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೆರ್ಗಿ ಕ್ಯಾನೊವಾಸ್‍ರವರು ಮಾತನಾಡಿ, ಹೊಸ ಅಡ್ವೆಂಚರ್ ಟೂರರ್ ಬೈಕ್ ಒರಟು ನೆಲದಲ್ಲಿ ಚಲಿಸಲು ಅಗತ್ಯವಿರುವ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಿದೆ. ಹೊಸ ಬೈಕ್ ಹೆಚ್ಚು ಪ್ರಭಾವಶಾಲಿಯಾಗಿದ್ದು, ಹಾರ್ಡ್‌ಕೋರ್ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಸಜ್ಜಾಗಿದೆ. ಅಡ್ವೆಂಚರ್ ಬೈಕುಗಳ ಸ್ಪೆಕ್ಟ್ರಮ್‌ನ ಸ್ಪೋರ್ಟಿ ಎಂಡ್ ಹೊಂದಿರುವ ಮಲ್ಟಿಸ್ಟ್ರಾಡಾ 1260 ಎಂಡ್ಯುರೋ ಭಾರತದಲ್ಲಿ ನಿಜವಾದ ಆಫ್-ರೋಡ್ ಉತ್ಸಾಹಿಗಳಿಗೆ ಹಾಗೂ ಅಡ್ವೆಂಚರ್ ಟೂರರ್‍ಗಳಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ತಿಳಿಸಿದರು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸ್ಟ್ಯಾಂಡರ್ಡ್ ಡುಕಾಟಿ ಮಲ್ಟಿಸ್ಟ್ರಾಡಾ 1260 ಬೈಕ್ ಮಾರುಕಟ್ಟೆಯಲ್ಲಿರುವ ವಿಶಿಷ್ಟ ಬೈಕ್‍ಗಳಲ್ಲಿ ಒಂದಾಗಿದೆ. ಎಂಡ್ಯುರೋ ಬೈಕ್, ಬೈಕುಗಳ ಆಫ್-ರೋಡ್ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. 1260 ಎಂಡ್ಯುರೋ ಬೈಕ್, ಸ್ಟ್ಯಾಂಡರ್ಡ್ ಬೈಕಿಗಿಂತ ರೂ.2.2 ಲಕ್ಷ ಹೆಚ್ಚು ಬೆಲೆಯನ್ನು ಹೊಂದಿದೆ. ಬೈಕಿನಲ್ಲಿರುವ ಪ್ರೀಮಿಯಂ ಸೈಕಲ್ ಭಾಗಗಳು ಬೈಕ್ ಅನ್ನು ಆಫ್-ರೋಡಿಂಗ್‌ಗೆ ಹೇಳಿಮಾಡಿಸಿದಂತಿವೆ ಎಂದಿರುವ ಡುಕಾಟಿ ಕಂಪನಿಯು ಈ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿದೆ.


Click it and Unblock the Notifications