ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಕಂಪನಿ ಡುಕಾಟಿ ತನ್ನ ಶೋರೂಂ ಗಳನ್ನು ಭಾರತದ ಎರಡನೇ ಹಂತದ ನಗರಗಳಿಗೂ ವಿಸ್ತರಿಸಲು ಬಯಸಿದೆ. ಡುಕಾಟಿ ಸದ್ಯಕ್ಕೆ ಭಾರತದಲ್ಲಿ 9 ಡೀಲರ್ ಶಿಪ್ ಗಳನ್ನು ಹೊಂದಿದ್ದು, ಎರಡನೇ ಹಂತದ ನಗರಗಳಲ್ಲೂ ಡೀಲರ್ ಶಿಪ್ ಗಳನ್ನು ತೆರೆದು ಭಾರತದಲ್ಲಿ ತನ್ನ ವಹಿವಾಟನ್ನು ಹೆಚ್ಚಿಸುವ ಯೋಜನೆಯಲ್ಲಿದೆ.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಡುಕಾಟಿ ಸದ್ಯಕ್ಕೆ ಬೆಂಗಳೂರು, ಹೈದರಾಬಾದ್, ದೆಹಲಿ- ಎನ್‍ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಕೊಚ್ಚಿ, ಕೊಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಡೀಲರ್ ಶಿಪ್‍ಗಳನ್ನು ಹೊಂದಿದೆ. ಡುಕಾಟಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸರ್ಗಿಯೊ ಕಾನೊವಾಸ್ ರವರು ಮಾತನಾಡಿ, ಎರಡನೇ ಹಂತದ ನಗರಗಳು ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಬಹು ಮುಖ್ಯವಾಗಿವೆ ಎಂದು ತಿಳಿಸಿದರು. ಡುಕಾಟಿ 27 ಮಾದರಿಗಳಲ್ಲಿ ವಿವಿಧ ಮೋಟಾರ್ ಸೈಕಲ್ ಸ್ಟೈಲ್ ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಕಾನೊವಾಸ್ ರವರ ಪ್ರಕಾರ, ಡುಕಾಟಿಯ ಮಾರುಕಟ್ಟೆಯನ್ನು ವಿಸ್ತರಿಸುವುದರ ಉದ್ದೇಶ ಬ್ರಾಂಡ್ ಅನ್ನು ಒಂದು ಹಂತಕ್ಕೆ ತಲುಪಿಸುವುದೇ ಹೊರತು, ಮಾರುಕಟ್ಟೆಯಲ್ಲಿ ಲಾಭ ಮಾಡುವುದಲ್ಲ. ಡುಕಾಟಿ ಭಾರತದ ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿರುವುದರಿಂದ ಮಾರುಕಟ್ಟೆಯನ್ನು ವಿಸ್ತರಿಸಲು ಬಯಸಿದೆ.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಇಟಾಲಿಯನ್ ಬೈಕ್ ತಯಾರಕ ಕಂಪನಿಯು ಭಾರತದಲ್ಲಿ ಉತ್ಪಾದಕ ಘಟಕವನ್ನು ತೆರೆಯುವ ಯಾವುದೇ ಉದ್ದೇಶವನ್ನು ಸದ್ಯಕ್ಕೆ ಹೊಂದಿಲ್ಲ. ಕಾನೊವಾಸ್ ರವರ ಪ್ರಕಾರ, ಉತ್ಪಾದಕ ಘಟಕಗಳ ಮೇಲೆ ಹೂಡಿಕೆ ಮಾಡುವುದು ವೆಚ್ಚ, ಗುಣಮಟ್ಟ ಮತ್ತು ಪೂರೈಕೆಯನ್ನು ಅವಲಂಬಿಸಿದೆ.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಭಾರತ ಮತ್ತು ಥೈ ಲ್ಯಾಂಡ್ ಗಳ ಮಧ್ಯೆ ಮುಕ್ತ ವ್ಯಾಪಾರ ಮಾರುಕಟ್ಟೆ ಇರುವುದರಿಂದ ಭಾರತದ ಗ್ರಾಹಕರಿಗೆ ಅನುಕೂಲವಾಗಲಿದೆ. ಮಹತ್ತರ ಬದಲಾವಣೆಗಳಾಗಿ ಅವಶ್ಯಕತೆ ಉಂಟಾದರೆ ಇಲ್ಲಿಯೂ ಸಹ ಉತ್ಪಾದಕ ಘಟಕಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ಡುಕಾಟಿ ಕಂಪನಿಯ ಉದ್ದೇಶವು ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚು ಗ್ರಾಹಕರನ್ನು ತಲುಪಿ ಅವರಿಗೆ ಉತ್ತಮ ಸೇವೆಯನ್ನು ನೀಡುವುದಾಗಿರುತ್ತದೆ. ಡುಕಾಟಿ ತನ್ನ 2019ರ ಸ್ಕ್ರಾಂಬ್ಲರ್ ಬೈಕುಗಳನ್ನು ಇತ್ತೀಚಿಗಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದೆ. ದರಗಳನ್ನು ರೂ 7.8 ಲಕ್ಷಗಳಿಂದ ರೂ 9.7 ಲಕ್ಷಗಳವರೆಗೆ ನಿಗದಿ ಪಡಿಸಿದೆ.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಈ ಹೊಸ ಬೈಕ್ ಗಳನ್ನು ಹೈದರಾಬಾದ್ ನಲ್ಲಿರುವ ಹೊಸ ಡೀಲರ್ ಶಿಪ್ ನಲ್ಲಿ ಬಿಡುಗಡೆಗೊಳಿಸಲಾಯಿತು. 2019ರ ಹೊಸ ಸ್ಕ್ರಾಂಬ್ಲರ್ ಬೈಕು ಸರಣಿಯು ಸ್ಕ್ರಾಂಬ್ಲರ್ ಐಕಾನ್, ಸ್ಕ್ರಾಂಬ್ಲರ್ ಕೆಫೆ ರೇಸರ್, ಸ್ಕ್ರಾಂಬ್ಲರ್ ಡಸರ್ಟ್ ಸ್ಲೆಡ್ ಮತ್ತು ಸ್ಕ್ರಾಂಬ್ಲರ್ ಫುಲ್ ಥ್ರಾಟಲ್ ಎಂಬ ನಾಲ್ಕು ಮಾದರಿಗಳಲ್ಲಿ ದೊರೆಯುತ್ತದೆ.

MUST READ: ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟ್ರಯಂಫ್ ಸ್ಕ್ರಾಂಬ್ಲರ್ 1200

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಸ್ಕ್ರಾಂಬ್ಲರ್ ಫುಲ್ ಥ್ರಾಟಲ್ ಮಾದರಿಯನ್ನು ಹೊರತುಪಡಿಸಿ ಉಳಿದ ಮೂರು ಮಾದರಿಯ ಬೈಕುಗಳನ್ನು ಮುಂದಿನ ಕೆಲವು ವಾರಗಳಲ್ಲಿ ಗ್ರಾಹಕರಿಗೆ ವಿತರಿಸಲಾಗುವುದು. ಫುಲ್ ಥ್ರಾಟಲ್ ಮಾದರಿಯ ಬೈಕುಗಳನ್ನು ಜೂನ್ 2019ರಿಂದ ಗ್ರಾಹಕರಿಗೆ ವಿತರಿಸಲಾಗುವುದು.

ಎರಡನೇ ಹಂತದ ನಗರಗಳಲ್ಲೂ ಬಿಡುಗಡೆಯಾಗಲಿರುವ ಡುಕಾಟಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸ್ಪರ್ಧಾತ್ಮಕ ಬೆಲೆಗಳಲ್ಲಿ ಬೈಕುಗಳನ್ನು ಮಾರಾಟ ಮಾಡಿ, ಮೂಲ ಸೌಕರ್ಯಗಳನ್ನು ಒದಗಿಸಿದರೆ, ಎರಡನೇ ಹಂತದ ನಗರಗಳಲ್ಲೂ ವಿಸ್ತರಿಸುವುದು ಒಳ್ಳೆಯ ಬೆಳವಣಿಗೆ. ಏಕೆಂದರೆ ಮೊದಲನೇ ಹಂತದ ನಗರಗಳ ಗ್ರಾಹಕರಿಗೂ ಇದೇ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಡುಕಾಟಿ ಬೈಕುಗಳನ್ನು ಭಾರತದ ರಸ್ತೆಗಳಲ್ಲಿ ಅದರಲ್ಲೂ ದೂರ ಪಯಣದಲ್ಲಿ ಕಾಣುವುದು ಬಲು ಅಪರೂಪ, ಏಕೆಂದರೆ ಆ ಬೈಕುಗಳಿಗೆ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ. ಆದರೆ ಎಲ್ಲೆಡೆ ಸೌಲಭ್ಯಗಳನ್ನು ಹೊಂದಿರುವುದರಿಂದ ಎನ್ ಫೀಲ್ಡ್ ಮತ್ತು ಕೆಟಿಎಂ ಬೈಕುಗಳನ್ನು ಎಲ್ಲಾ ಕಡೆಯೂ ನೋಡಬಹುದಾಗಿದೆ. ದೂರ ಪಯಣದಲ್ಲೂ ಸೌಲಭ್ಯಗಳನ್ನು ನೀಡಿದರೆ ಎಲ್ಲಾ ಕಡೆ ಬೇರೆ ಬೈಕುಗಳಂತೆ ಡುಕಾಟಿ ಬೈಕುಗಳನ್ನು ಕಾಣಬಹುದು.

More from DriveSpark

Article Published On: Saturday, April 27, 2019, 17:37 [IST]
English summary
Ducati Planning Expansion Into Tier Two Cities — Want Better Presence In India - Read in Kannada
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+