ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಇಇವಿಇ ಎಲೆಕ್ಟ್ರಿಕ್ ಸ್ಕೂಟರ್
ದೇಶಿಯ ಮಾರುಕಟ್ಟೆಗೆ ಸಾಲು ಸಾಲಾಗಿ ಎಲೆಕ್ಟ್ರಿಕ್ ಸ್ಕೂಟರ್‍ಗಳು ಲಗ್ಗೆ ಇಡುತ್ತಿದೆ. ಇದೇ ಸಾಲಿನಲ್ಲಿ ಇಇವಿಇ ಇಂಡಿಯ ಮುಂದಿನ ತಿಂಗಳು ತಮ್ಮ ಶ್ರೇಣೆಯೆ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇಇವಿಇ ಸಂಸ್ಥೆಯ 4ಯು, ಕ್ಸೇನಿಯಾ, ವಿಂಡ್ ಮಾತ್ತು ಯುವರ್ ಎಂಬ ನಾಲ್ಕು ಸ್ಕೂಟರ್‍ಗಳನ್ನು ಬಿಡುಗಡೆ ಮಾಡಲಿದ್ದಾರೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭಗೊಂಡಿದೆ. ಕೇವಲ ರೂ. 1,000 ಕ್ಕೆ ನೂತನ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಇಇವಿಇ ತನ್ನ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಕಟಕ್ ಬಳಿಯ ಒಡಿಶಾದಲ್ಲಿ ಕಂಪನಿಯ ಉತ್ಪಾದನಾ ಘಟಕದಲ್ಲಿ ಸ್ಕೂಟರ್ ಉತ್ಪಾದನೆಯನ್ನು ಮಾಡುತ್ತಾರೆ. ಈ ಘಟಕವು ಒಂದು ವರ್ಷದಲ್ಲಿ 2.5 ಲಕ್ಷ ಬೈಕನ್ನು ಉತ್ಪಾದನೆ ಮಾಡುತ್ತಾರೆ.

ಕ್ಸೇನಿಯಾ ಮತ್ತು 4ಯು ಬಾಷ್ 250 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಮತ್ತು 60ವಿ 20 ಎಎಚ್ ಲಿಥೀಯಂ-ಐಯಾನ್ ಬ್ಯಾಟಾರಿ ಪ್ಯಾಕ್ ಅನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 70 ಕಿಲೋ ಮೀಟರ್‍ಗಳಷ್ಟು ಚಲಿಸಬಹುದು. ಬ್ಯಾಟರಿಯು ಶೇ. 0 ಯಿಂದ ಶೇ. 100 ರಷ್ಟು ಚಾರ್ಜ್ ಆಗಲು 4 ರಿಂದ 6 ಗಂಟೆಗಳ ಅವಧಿ ಬೇಕಾಗಬಹುದು. ಬದಲಾಯಿಸಬಹುದಾದ ಬ್ಯಾಟರಿ, ಸುರುಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಇದಕ್ಕಾಗಿ ಡ್ಯುಯಲ್ ಡಿಸ್ಕ್ ಬ್ರೇಕ್‍ಗಳ ಜೊತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ವಿಂಡ್ ಮತ್ತು ಯುವರ್ ಸ್ಕೂಟರ್‍ಗಳು ಕಂಪನಿಯ ವ್ಯಾಪ್ತಿಗಿಂತ ಲೊವರ್-ಸ್ಪೆಕ್ ಮಾದರಿಯಾಗಿವೆ. ವಿಂಡ್ ಮತ್ತು ಯುವರ್ ಸ್ಕೂಟರ್‍ಗಳು 250 ವ್ಯಾಟ್ ಮೋಟರ್ ಮತ್ತು 60 ವಿ 20 ಎಎಚ್ ಬ್ಯಾಟರ್ ಪ್ಯಾಕ್ ಹೊಂದಿದ್ದು, ಈ ಎರಡು ಸ್ಕೂಟರ್‍ಗಳು ಮಾತ್ರ ಲೀಡ್-ಆಸೀಡ್ ಬ್ಯಾಟರಿಯಾಗಿದೆ.

ಜಾರ್ಜಿಂಗ್ ಕಾಲಾವಕಾಶವು ಟಾಪ್ ರೇಜ್ ಮಾದರಿಗಳಿಗಿಂತ ಕಡಿಮೆ ಇದೆ. ವಿಂಡ್ ಮತ್ತು ಯುವರ್ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಅನ್ನು ಮಾಡಿದರೆ 50 ರಿಂದ 60 ಕಿಲೋ. ಮೀಟರ್‍ಗಳ ವರೆಗೂ ಪ್ರಯಾಣಿಸಬಹುದು. ಪೂರ್ಣ ಪ್ರಮಾಣದ ಜಾರ್ಜ್ ಆಗುವುದಕ್ಕೆ 7 ರಿಂದ 8 ಗಂಟೆ ಅವಧಿ ಬೇಕಾಗಬಹುದು. ಇಇವಿಇ ಎಲ್ಲಾ ಸ್ಕೂಟರ್‍ಗಳು 25 ಕಿ.ಮೀ ವೇಗದಲ್ಲಿ ಚಲಿಸಬದು.

ಆ್ಯಂಟಿ-ಥೆಫ್ಟ್ ಲಾಕ್, ಕಿ ಲೆಸ್ ಎಂಟ್ರಿ, ಯುಎಸ್‍ಬಿ ಪೋರ್ಟ್ ಮತ್ತು ಉನ್ನತ ಮಟ್ಟದ ಎಚ್ಎಲ್ ಎಲ್‍ಇಡಿ ಲೈಟಿಂಗ್ ಹೊಂದಿದೆ. ಇತರ ಸಾಮಾನ್ಯ ವೈಶಿಷ್ಟ್ಯಗಳು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಟ್ಯೂಬ್ ಲೆಸ್ ಟೈರ್‍ಗಳನ್ನು ಅಳವಡಿಸಲಾಗಿದೆ.

ಅವರ ಅಧಿಕೃತ ವೆಬ್‌ಸೈಟ್‌ನ ಚಿತ್ರಗಳು ದಿ ವಿಂಡ್ ಅಂಡ್ ದಿ ಯುವರ್ ಸ್ಕೂಟರ್ ಪಿಲಿಯನ್ ಬ್ಯಾಕ್‌ರೆಸ್ಟ್ ಅನ್ನು ಹೊಂದಿರುತ್ತದೆ ಎಂದು ತಿಳಿಸಿದೆ. ದುರದೃಷ್ಟವಶ ಎಲ್ಲಾ ಇಇವಿಇ ಶ್ರೇಣಿಯ ಸ್ಕೂಟರ್‌ಗಳು ಎಫ್‍ಎಎಮ್ಇ-ll ಯೋಜನೆಯಡಿ ಯಾವುದೇ ಸಬ್ಸಿಡಿಗೆ ಅರ್ಹತೆ ಪಡೆದಿಲ್ಲ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಇಇವಿಇ ಸ್ಕೂಟರ್‍ಗಳು ಟಾಪ್-ಸ್ಪೀಡ್ ಮತ್ತು ಉನ್ನತ ಶ್ರೇಣಿಯ ಮಾನದಂಡವನ್ನು ಹೊಂದಿಲ್ಲ. ಎಫ್‍ಎಎಮ್ಇ-ll ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಲು ಅದರ ವೇಗ ಗಂಟೆಗೆ 40 ರಿಂದ 80 ಕಿ.ಮೀ ಇರಬೇಕು, ಈ ಕಾರಣದಿಂದಾಗಿ ಇಇವಿಇ ಸ್ಕೂಟರ್‍ಗಳು ಅರ್ಹತೆ ಹೊಂದಿಲ್ಲ.

ಹೀರೋ ಇತ್ತೀಚೆಗೆ ಡ್ಯಾಶ್ ಶ್ರೇಣಿಯ ಆಪ್ಟಿಮಾ ಇಆರ್, ಎನ್‍ವೈಎಕ್ಸ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದರು. ಬೆಗ್ಲಿಂಗ್ ಆರೋ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ ಈ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‍ಗಳ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುವುದು ಖಂಡಿತ. ಪ್ರಸುತ್ತ ಎಲೆಕ್ಟ್ರಿಕ್ ಸ್ಕೂಟರ್‍ಗಳ ನಾಯಕನಾಗಿ ಅಥರ್ 450 ಮೆರೆಯುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಎಲೆಕ್ಟ್ರಿಕ್ ಸ್ಕೂಟರ್ ಕಡೆ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್‍ಗಳ ಮಧ್ಯೆ ತೀವ್ರ ಸ್ಪರ್ಧೆ ಇರುವ ಕಾರಣದಿಂದಾಗಿ ವಾರಗಳ ಅಂತರದಲ್ಲಿ ಸ್ಕೂಟರ್‍ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಿಟಿ ಜನರು ಸಿಟಿಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಮೊರೆಹೋಗುತ್ತಿದ್ದರೆ. ಇಇವಿಇ ಸ್ಕೂಟರ್ ಕೂಡ ಸಿಟಿ ಜನರನ್ನೇ ಟಾರ್ಗೆಟ್ ಮಾಡಿ ಬಿಡುಗಡೆಗೊಳಿಸುತ್ತಿದ್ದಾರೆ.


Click it and Unblock the Notifications








