ಬಿಡುಗಡೆಯಾಗಲಿದೆ ಕವಾಸಕಿ ನಿಂಜಾ ಝಡ್‍ಎಕ್ಸ್ 25 ಆರ್
ಇಂಡಿಯನ್ ಆಟೋಸ್ ಬ್ಲಾಗ್ ವರದಿಗಳ ಪ್ರಕಾರ, ಮೂಲ ಮಾದರಿಯಲ್ಲಿರುವ 250 ಸಿಸಿ ಇನ್‍ಲೈನ್ 4 ಸಿಲಿಂಡರ್ ಕವಾಸಕಿ ನಿಂಜಾ ಬೈಕ್ ತಯಾರಾಗಿದ್ದು, 2019ರಲ್ಲಿ ನಡೆಯಲಿರುವ ಟೊಕಿಯೋ ಮೋಟಾರ್ ಶೋದಲ್ಲಿ ಪ್ರದರ್ಶನಗೊಳ್ಳಲಿದೆ. ಈ ವರದಿಯನ್ನು ಇಂಡೋನೇಷಿಯಾದ ವೆಬ್‍ಸೈಟ್ ಒಂದರಲ್ಲಿ ಪ್ರಕಟಿಸಲಾಗಿದೆ.
ಮೂಲಗಳ ಪ್ರಕಾರ, ಹೊಸ 250ಸಿಸಿ ಇನ್‍ಲೈನ್ 4 ಬೈಕ್ ಇಂಡೋನೇಷಿಯಾದಲ್ಲಿ 2020ರಲ್ಲಿ ನಡೆಯುವ ಕವಾಸಕಿ ಬೈಕ್ ವೀಕ್‍ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೋಟಾರ್‍ಸೈಕಲ್‍ಗೆ ನಿಂಜಾ ಝಡ್‍ಎಕ್ಸ್ - 25 ಆರ್ ಎಂಬ ಹೆಸರಿಡುವ ಸಾಧ್ಯತೆಗಳಿವೆ. ಕವಾಸಕಿ ಕಂಪನಿಯ ಭಾರತದ ಮಾರುಕಟ್ಟೆಗೆಡೆಗಿನ ಯೋಜನೆಯ ಪ್ರಕಾರ, ಈ ಬೈಕ್ ಭಾರತದಲ್ಲಿಯೂ ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಈ ಹೊಸ ಬೈಕ್ ಯಾವ ರೀತಿಯ ಪರ್ಫಾಮೆನ್ಸ್ ನೀಡಲಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ, ಆದರೆ ಈ ಬೈಕಿನಲ್ಲಿ ಕವಾಸಕಿಯ 249 ಸಿಸಿ ಲಿಕ್ವಿಡ್ ಕೂಲ್ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಇರಲಿದ್ದು, 39 ಬಿಹೆಚ್‍ಪಿಯನ್ನು 12,500 ಆರ್‍ಪಿಎಂ ನಲ್ಲಿ ಹಾಗೂ 23.5 ಎನ್‍ಎಂ ಟಾರ್ಕ್ ಅನ್ನು 10,000 ಆರ್‍ಪಿಎಂನಲ್ಲಿ ಉತ್ಪಾದಿಸಲಿದೆ.
ಈ ಇನ್‍ಲೈನ್ 4 ಬೈಕ್ ಅಧಿಕ ಸಾಮರ್ಥ್ಯದ ಎಂಜಿನ್ ಹೊಂದಿರಲಿದ್ದು, ಯೂರೋ - 5 / ಬಿಎಸ್ 6 ನಿಯಮಗಳಿಗೆ ಹೊಂದಿಕೊಳ್ಳಲಿದೆ. ಈ ಕ್ವಾರ್ಟರ್ ಲೀಟರ್ 4 ಸಿಲಿಂಡರ್ ಕವಾಸಕಿ ನಿಂಜಾ ಬೈಕಿನ ಮುಂಭಾಗದಲ್ಲಿ ಅಪ್‍ಸೈಡ್ - ಡೌನ್ ಟೆಲಿಸ್ಕೋಪಿಕ್ ಫೋರ್ಕ್‍ಗಳಿವೆ.
ಈ ಬೈಕಿನಲ್ಲಿ ರೈಡ್ ಬೈ ವೈರ್ ಸಿಸ್ಟಂ, ಮಲ್ಟಿಪಲ್ ರೈಡಿಂಗ್ ಮೋಡ್, ಫುಲ್ ಎಲ್‍ಇಡಿ ಹೆಡ್‍ಲೈಟ್, ಟೇಲ್‍ಲೈಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೊಲ್‍ಗಳಿದ್ದು, ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ. ಎರಡೂ ವ್ಹೀಲ್‍ಗಳಿಗಾಗಿ ಸಿಂಗಲ್ ಡಿಸ್ಕ್ ಬ್ರೇಕ್‍ಗಳಿರಲಿವೆ. ಡ್ಯೂಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ವಿಶ್ವ ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ ಝಡ್‍ಎಕ್ಸ್-25ಆರ್ ನ ಬೆಲೆಯ ಬಗ್ಗೆ ಮಾಹಿತಿ ಲಭ್ಯವಾಗದೇ ಇದ್ದರೂ ಕವಾಸಕಿ 300 ಬೈಕಿಗಿಂತ ತುಸು ಹೆಚ್ಚಿರಲಿದೆ.
ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.2.98 ಲಕ್ಷಗಳಾಗಬಹುದು. ಈ ಬೈಕ್ ಭಾರತದಲ್ಲಿ 2020ರ ಮಧ್ಯ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕವಾಸಕಿಯ ಹೊಸ ಬೈಕ್ ಕ್ವಾರ್ಟರ್ ಲೀಟರ್ ಮೋಟಾರ್‍ಸೈಕಲ್ ಆಗಿದೆ. ಹೋಂಡಾ ಕಂಪನಿಯು ತನ್ನ ಇನ್ ಲೈನ್ 4 ಸಿಬಿಆರ್250ಆರ್‍ಆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ. ಆದ ಕಾರಣ ಈ ನಿಟ್ಟಿನಲ್ಲಿ ಕವಾಸಕಿ ಇಟ್ಟಿರುವ ಹೆಜ್ಜೆಯು ಸ್ವಾಗತಾರ್ಹ. ಕವಾಸಕಿ ಭಾರತದಲ್ಲಿ ಬಿಡುಗಡೆಯಾದ ನಂತರ ಯಮಹಾ, ಹೋಂಡಾ, ಸುಜುಕಿ ಕಂಪನಿಗಳೂ ಸಹ ಮುಂದೆ ಈ ಮಾದರಿಯ ಬೈಕುಗಳನ್ನು ನಿರ್ಮಿಸಲಿವೆ.


Click it and Unblock the Notifications








