ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ನಾನಾ ಬಗೆಗೆ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಹಾರ್ಲೆ ಡೇವಿಡ್ಸನ್ ಸಹ ಹೊಸ ಇವಿ ಬೈಕ್ ಒಂದನ್ನು ಸಿದ್ದಗೊಳಿಸಿ ಅನಾವರಣಗೊಳಿಸುತ್ತಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

2020ರ ವೇಳೆಗೆ ವಿಶ್ವದ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಐಷಾರಾಮಿ ಕ್ರೂಸರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ಕೂಡಾ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೊಸ ಬೈಕ್ ಇದೀಗ ಭಾರತದಲ್ಲೂ ಬಿಡುಗಡೆಯ ಉದ್ದೇಶಕ್ಕಾಗಿ ಇದೇ ತಿಂಗಳು 27ರಂದು ಅನಾವರಣಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಪಟ್ಟಿಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಸುಮಾರು 5 ವರ್ಷಗಳ ಸತತ ಪರಿಶ್ರಮದೊಂದಿಗೆ ಅತ್ಯುತ್ತಮ ರೈಡಿಂಗ್ ತಂತ್ರಜ್ಞಾನ ಬದಲಾವಣೆಯೊಂದಿಗೆ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಹಾರ್ಲೆ ಡೇವಿಡ್ಸನ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲೂ ಕೂಡಾ ಇದೀಗ ಸ್ಥಾನ ಪಡೆದಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರುವ ಲೈವ್‌ವೈರ್ ಬೈಕ್ ಮಾದರಿಯು ಪ್ರತಿಚಾರ್ಜ್‌ಗೆ 230 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 15.5ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ಕ್ರೂಸರ್ ಬೈಕ್‌ಗಳಲ್ಲೇ ಉತ್ತಮ ಎನ್ನಿಸುವ ತಾಂತ್ರಿಕ ಅಂಶಗಳು ಲೈವ್‌ವೈರ್ ಬೈಕ್ ಆವೃತ್ತಿಯಲ್ಲಿದ್ದು, ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ 4.3-ಇಂಚಿನ ಟಚ್ ಸ್ಕ್ರೀನ್ ಎಲ್‌ಸಿಡಿ ಡಿಸ್‌ಪೈ, ಸ್ಮಾರ್ಟ್‌ಫೋನ್ ಮೂಲಕ ಮಾಹಿತಿ ನೀಡುವ ಹಾರ್ಲೆ ಡೇವಿಡ್ಸನ್ ಕನೆಕ್ಟ್ ಸೌಲಭ್ಯ ಪಡೆದುಕೊಂಡಿದೆ. ಈ ಮೂಲಕ ಬೈಕ್ ಸವಾರರಿಗೆ ಗರಿಷ್ಠ ಮಟ್ಟದ ಮಾಹಿತಿಯನ್ನು ಒಂದೇ ಸೂರಿನಡಿ ನೀಡಲು ಇದು ಸಹಕಾರಿಯಾಗಲಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಇನ್ನೊಂದು ವಿಶೇಷ ಅಂದ್ರೆ, ಹೊಸ ಲೈವ್‌ವೈರ್ ಬೈಕಿನಲ್ಲಿ ಚೈನ್ ಬದಲಾಗಿ ಬೆಲ್ಟ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಇದು ಬೈಕಿನ ವೇಗವನ್ನು ಹೆಚ್ಚಳ ಮಾಡುವಲ್ಲಿ ಸಹಕಾರಿಯಾಗಿದೆ. ಹಾಗೆಯೇ 17-ಇಂಚಿನ ಮಿಚೆನ್ ಸ್ಕೋರರ್ ಟೈರ್ ಹೊಂದಿರುವ ಹೊಸ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಈ ಮೂಲಕ ಕೇವಲ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗಪಡೆದುಕೊಳ್ಳಬಹುದಾದ ಗುಣಲಕ್ಷಣ ಹೊಂದಿರುವ ಲೈವ್‌ವೈರ್ ಎಲೆಕ್ಟ್ರಿಕ್ ಬೈಕ್ ಮಾದರಿಯು 106-ಬಿಎಚ್‌ಪಿ ಮತ್ತು 116-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಹೊಸ ಬೈಕಿನಲ್ಲಿ 4-ಪಿಸ್ಟನ್ ಡಬಲ್ ಕ್ಯಾಪಿಪರ್ ಬ್ರೆಂಬೊ ಬ್ರೇಕ್‌ಗಳನ್ನು ಜೋಡಿಸಲಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳುವ ಚಾರ್ಚಿಂಗ್ ಗುಣಲಕ್ಷಣಗಳು ಈ ಬೈಕಿನ ಆಯ್ಕೆಯನ್ನು ಹೆಚ್ಚಿಸಲಿವೆ ಎನ್ನಲಾಗಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಬೈಕಿನ ಬೆಲೆ(ಅಂದಾಜು)

ಸದ್ಯ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಬೈಕಿನ ಬೆಲೆಯನ್ನು ಬಹಿರಂಗ ಪಡಿಸಲಾಗಿದ್ದು, 29,799 ಯುಎಸ್‌ ಡಾಲರ್ ಬೆಲೆ ಪಡೆದುಕೊಂಡಿರಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ತಿಂಗಳಾಂತ್ಯಕ್ಕೆ ಅನಾವರಣಗೊಳ್ಳಲಿದೆ ಹಾರ್ಲೆ ಡೇವಿಡ್ಸನ್ ಮೊದಲ ಎಲೆಕ್ಟ್ರಿಕ್ ಬೈಕ್

ಅಂದ್ರೆ ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಲೈವ್‌ವೈರ್ ಬೈಕ್ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ.22 ಲಕ್ಷ ಬೆಲೆ ಪಡೆದುಕೊಳ್ಳಲಿದ್ದು, ಐಷಾರಾಮಿ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಎಲ್ಲಾ ಗುಣಲಕ್ಷಣಗಳು ಈ ಬೈಕ್ ಇದೇ ವರ್ಷಾಂತ್ಯಕ್ಕೆ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Thursday, August 22, 2019, 8:45 [IST]
English summary
Harley Davidson LiveWire electric Bike To Be Unveiled In India on 27 Aug. Read the details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+